fbpx
ಸಮಾಚಾರ

ಸಲ್ಲು ಸಿನಿಮಾ ‘ಭಾರತ್’ ಕೈ ಬಿಟ್ಟ ಪ್ರಿಯಾಂಕ ಚೋಪ್ರಾ ಸಿನಿಬದುಕು ಮುರಾ ಬಟ್ಟೆ

ಭಾರತ್ ಚಿತ್ರದಿಂದ ನಟಿ ಪ್ರಿಯಾಂಕಾ ಛೋಪ್ರಾ ಹೊರ ನಡೆದಿರುವ ವಿಚಾರವನ್ನ ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಸಾಮಾಜಿಕ ಜಾಲತಾಣದಲ್ಲಿ ಖಚಿತ ಪಡಿಸಿದ್ದಾರೆ. ಪ್ರಿಯಾಂಕ ಹಾಲಿವುಡ್ ನ ದೊಡ್ಡ ಚಿತ್ರಕ್ಕೆ ಸಹಿ ಹಾಕಿದ್ದಾಳೆ ಎಂದು ತಿಳಿದು ಬಂದಿದೆ ಚಿತ್ರದಲ್ಲಿ ಪ್ರಿಯಾಂಕ ಹಾಲಿವುಡ್ ಪ್ರಸಿದ್ಧ ನಟ ಕ್ರಿಸ್ ಪ್ರ್ಯಾಟ್ ಜೊತೆ ರೋಮ್ಯಾನ್ಸ್ ಮಾಡಲಿದ್ದಾಳೆ. ಈ ಚಿತ್ರಕ್ಕಾಗಿ ಪ್ರಿಯಾಂಕ ಬಾಲಿವುಡ್ ಚಿತ್ರ ಭಾರತ್ ಕೈ ಬಿಟ್ಟಿದ್ದಾಳೆ. ಆದರೆ ಈಗ ಹಾಲಿವುಡ್ ಚಿತ್ರ ಪ್ರಿಯಾಂಕಾಗೆ ಕೈ ಕೊಟ್ಟಿದೆ ಎನ್ನಲಾಗಿದೆ.

 

 

ಮೂಲಗಳ ಮಾಹಿತಿ ಪ್ರಕಾರ ಪ್ರಿಯಾಂಕಾ ಅಭಿನಯ ಮಾಡಬೇಕಿದ್ದ ಸಿನೆಮಾವನ್ನು ಬಹಳ ದಿನಗಳ ವರೆಗೆ ಮುಂದೂಡಿದ್ದಾರೆ ಎನ್ನಲಾಗಿದೆ. ಈ ಸಿನಿಮಾ ಶೂಟಿಂಗ್ ಈ ವರ್ಷ ಶುರುವಾಗೋದು ಅಸಾಧ್ಯ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು. ಚಿತ್ರ ಜೂನ್ 28,2019 ಕ್ಕೆ ತೆರೆಗೆ ಬರಬೇಕಿತ್ತು.ಆದರೆ ನಿರ್ಮಾಪಕರು ಸದ್ಯ ಬಿಡುಗಡೆಯಾಗುವ ಚಿತ್ರದ ಪಟ್ಟಿಯಿಂದ ಈ ಚಿತ್ರದ ಹೆಸರನ್ನು ತೆಗೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಪ್ರಿಯಾಂಕಾ ತಮ್ಮ ಭಾರತ್ ಸಿನಿಮಾ ಕೈಬಿಟ್ಟಿರುವ ಬಗ್ಗೆ ಮಾತನಾಡಿರುವ ಸಲ್ಮಾನ್ ಪ್ರಿಯಾಂಕ ನಮ್ಮ ಮನೆಗೆ ಬಂದಿದ್ದರು. ಸಿನಿಮಾದಲ್ಲಿ ನಟಿಸಲ್ಲ ಎಂದು ನನ್ನ ಬಳಿ ಹೇಳಿದರು. ಸಲ್ಮಾನ್ ಜೊತೆ ಕೆಲಸ ಮಾಡಲು ಇಷ್ಟವಿಲ್ಲವೆಂದ್ರೆ ಏನೂ ತೊಂದರೆಯಿಲ್ಲ ಎಂದು ಹೇಳಿದ್ದೆ. ಆಗ ಪ್ರಿಯಾಂಕ ಹೇಳಿದ ಕಾರಣ ಬೇರೆಯಿತ್ತು. ಈಗ ಬೇರೆ ಕಾರಣ ಎಂಬುದು ಗೊತ್ತಾಗಿದೆ. ಬೇಸರವಿಲ್ಲ. ಸಲ್ಮಾನ್ ಖಾನ್ ಬದಲು ಹಾಲಿವುಡ್ ದೊಡ್ಡ ನಟನ ಜೊತೆ ನಟಿಸಲು ಪ್ರಿಯಾಂಕ ಮುಂದಾಗಿದ್ದಾಳೆ. ಇದು ಸಂತೋಷದ ವಿಷಯ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top