ಸಮಾಚಾರ

ಮತ್ತೆ ಒಂದಾಗುತ್ತಿರುವ ಸಂತೋಷ್-ಪುನೀತ್ ಜೋಡಿಯ ಚಿತ್ರಕ್ಕೆ ಡಾ.ರಾಜ್ 205ನೇ ಸಿನಿಮಾ ಟೈಟಲ್ ಫಿಕ್ಸ್

ರಾಜಕುಮಾರದಂತಹ ಪರಿಪೂರ್ಣ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಅವರ ಕಾಂಬಿನೇಷನ್ ನಲ್ಲಿ ಮತ್ತೊಂದು ಕನ್ನಡ ಚಿತ್ರ ಮೂಡಿಬರುತ್ತಿದೆ ಎಂಬ ವಿಚಾರ ಜಗಜ್ಜಾಹೀರಾಗಿ ತಿಂಗಳುಗಳೇ ಸವೆದಿವೆ. ಈ ಚಿತ್ರ ಸೆಟ್ಟೇರುವುದಕ್ಕೂ ಮುಂಚೆಯೇ ನಾನಾ ಬಗೆಯ ನಿರೀಕ್ಷೆಗಳು, ವಿಪರೀತ ಕುತೂಹಲಗಳು ಚಿತ್ರದ ಮೇಲೆ ಬೆಟ್ಟ ಮಾಡುತ್ತಿವೆ.

 

 

ಈ ಚಿತ್ರಕ್ಕೆ ಇದೀಗ ಟೈಟಲ್ ಅನ್ನು ಫಿಕ್ಸ್ ಮಾಡಲಾಗಿದ್ದು ವಿಶೇಷ ಎಂದರೆ ಈ ಚಿತ್ರದ ಟೈಟಲ್ ಡಾ.ರಾಜಕುಮಾರ್ ಅವರು ನಟಿಸಿರುವ 206 ಚಿತ್ರಗಳ ಪೈಕಿ ಒಂದು ಚಿತ್ರದ ಟೈಟಲ್ ಅನ್ನು ಈ ಹೊಸ ಚಿತ್ರಕ್ಕೆ ಇಡಲಾಗಿದ್ದು ಯಾವ ಚಿತ್ರದ ಹೆಸರನ್ನು ಇಡಲಾಗಿದೆ ಎಂಬ ಗುಟ್ಟನ್ನು ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಆದಷ್ಟು ಬೇಗ ಶೀರ್ಷಿಶಿಯನ್ನು ಬಹಿರಂಗ ಪಡಿಸುತ್ತೇವೆ ಎನ್ನುತ್ತಿದ್ದರು ನಿರ್ದೇಶಕ ಸಂತೋಷ್ ಆನಂದರಾಮ್ .

ಆದರೆ ಇದೀಗ ಈ ಚಿತ್ರಕ್ಕೆ ಸಂಭಂದಿಸಿದ ಕುತೂಹಲಕಾರಿ ಮಾಹಿತಿಯೊಂದು ಬಹಿರಂಗಗೊಂಡಿದ್ದು ಚಿತ್ರದ ಬಗೆಗಿನ ನಿರೀಕ್ಷೆಗಳನ್ನು ಇಮ್ಮಡಿಗೊಳಿಸಿವೆ. ಡಾ.ರಾಜ್ ಕುಮಾರ್ ನಟನೆಯ 205ನೇ ಚಿತ್ರದ ಹೆಸರೇ ಸಿನಿಮಾ ಟೈಟಲ್ ಆಗಲಿದೆ ಎಂಬ ಸುಳಿವು ನೀಡಿದ್ದಾರೆ. ಹಿಂದೆ ಈ ಚಿತ್ರಕ್ಕೆ ಅಣ್ಣಾವ್ರು ಅಭಿನಯಿಸಿದ್ದ ಸಿನಿಮಾ’ದೇವತಾ ಮನುಷ್ಯ’ ಹೆಸರನ್ನೇ ಹೆಸರಿಡಬಹುದು ಅನ್ನೋ ಮಾತಿತ್ತು. ಆದ್ರೆ ಇದೇ ಗಣೇಶ ಹಬ್ಬದ ಪ್ರಯುಕ್ತ ಪುನೀತ್ ಚಿತ್ರದ ಹೆಸರನ್ನ ಘೋಷಣೆ ಮಾಡಲಿದ್ದು ಚಿತ್ರಕ್ಕೆ ಅಣ್ಣಾವ್ರ 205ನೇ ಸಿನಿಮಾದ ‘ಪರಶುರಾಮ’ ಹೆಸರಿಡಲಾಗುತ್ತಿದೆ ಎನ್ನಲಾಗ್ತಿದೆ.

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರಕ್ಕೆ ನಾಯಕಿ, ತಾರಾಗಣ ಮತ್ತು ತಾಂತ್ರಿಕ ವರ್ಗವನ್ನು ಇನ್ನಷ್ಟೇ ಫೈನಲ್ ಮಾಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top