ಸಮಾಚಾರ

100 ರೂಪಾಯಿ ನೋಟಿನ ಮೇಲೆ ಇರುವ ಸ್ಥಳದ ಬಗ್ಗೆ ನಿಮಗೆ ಗೊತ್ತಾ,ಇಲ್ಲ ಅಂದ್ರೆ ನೋಡಿ ತಿಳ್ಕೊಳ್ಳಿ ಈಗ

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ತಿಂಗಳ ಹಿಂದೆ ಹೊಸ 100 ರೂಪಾಯಿ ನೋಟನ್ನು ಬಿಡುಗಡೆ ಮಾಡಿತ್ತು. ಮಹಾತ್ಮ ಗಾಂಧಿ ಸರಣಿಯ ನೂತನ 100 ರೂಪಾಯಿ ನೋಟುಗಳು ಜನರಿಗೆ ಲಭ್ಯವಾಗಿವೆ ಈ ನೋಟಿನಲ್ಲಿನ ವಿಶೇಷತೆ ಎಂದು ಎಂಬುದನ್ನು ನೋಡೋಣ ಬನ್ನಿ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸದಾಗಿ ಬಿಡುಗಡೆ ಮಾಡಿರುವ 100 ರೂಪಾಯಿ ನೋಟು ನಸು ನೀಲಿ ಬಣ್ಣ ಹೊಂದಿದೆ. ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ರವರ ಸಹಿ ಇದ್ದು ಅಲ್ಲದೇ ದೇಶದ ಸಾಂಸ್ಕೃತಿಕ ಪಾರಂಪರಿಕ ಸ್ಥಳವಾದ ಗುಜರಾತಿನ ರಾಣಿ ಕಿ ವಾವ್ (ರಾಣಿಯ ಮೆಟ್ಟಿಲುಗಳ ಬಾವಿ) ಚಿತ್ರ ನೋಟಿನ ಹಿಂಬದಿಯಲ್ಲಿ ಇದೆ. ಹಾಗಾದರೆ ರಾಣಿ ಕಿ ವಾವ್ (ರಾಣಿಯ ಮೆಟ್ಟಿಲುಗಳ ಬಾವಿ) ಎಲ್ಲಿದೆ ಎಂಬುದನ್ನು ತಿಳಿಯೋಣ ಬನ್ನಿ.

 

 

ರಾಣಿ ಕಿ ವಾವ್ ಗುಜರಾತ್ ರಾಜ್ಯದ ಪಟಾನ್ ಪಟ್ಟಣದಲ್ಲಿ ನಿರ್ಮಿಸಿದ ರಾಣಿಯ ಮೆಟ್ಟಿಲುಗಳ ಬಾವಿ  ಆಗಿದೆ. ಇದು ಸರಸ್ವತಿ ನದಿ ದಡದ ಮೇಲೆ ಇದೆ. ರಾಣಿ ಕಿ ವಾವ್ ಒಂದು 11 ನೇ ಶತಮಾನದ ರಾಜನಿಗೆ ನೆನಪಿನ ಸ್ಮಾರಕವಾಗಿ ನಿರ್ಮಿಸಲಾಯಿತು. ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿ 2014 ರಲ್ಲಿ ಇದನ್ನು ಸೇರಿಸಲಾಯಿತು ಎಂದು ತಿಳಿದು ಬಂದಿದೆ.

ರಾಣಿ ಕಿ ವಾವ್ ಸೋಲಂಕಿ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ನಿರ್ಮಾಣ ಮಾಡಲಾಗಿದೆ. 7 ಅಂತಸ್ತಿನ ಈ ಕಟ್ಟಡದಲ್ಲಿ ಮರೂ ಹಾಗೂ ಗುರ್ಜರ ಶೈಲಿಯ ಸುಂದರ ಉಪಯೋಗವನ್ನು ಮಾಡಲಾಗಿದೆ. ರಾಣೀ ಕೀ ಬಾವಡಿಯಲ್ಲಿ ಅನೇಕ ರೀತಿಯ ಕಲಾಕೃತಿಗಳು, ಮೂರ್ತಿಗಳ ಚಿತ್ರವನ್ನು ಕೆತ್ತಲಾಗಿದೆ. ಇದು ವಿಷ್ಣುವಿಗೆ ಸಂಭಂದಿಸಿದ್ದು ಎನ್ನಲಾಗುತ್ತದೆ. ಇಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಯನ್ನು ನಿರ್ಮಾಣ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top