ಸಮಾಚಾರ

ಈ ಕೆಲಸ ಮಾಡಿ ಎಷ್ಟೋ ಜನರಿಗೆ ಸ್ಫೂರ್ತಿಯಾದ ನಟಿ ಸಮಂತಾ,ಏನ್ ಆ ಕೆಲಸ ಗೊತ್ತಾ ,ನೋಡಿ

ಕನ್ನಡದ ಯೂ ಟರ್ನ್ ತೆಲುಗಿನಲ್ಲಿ ಮೂಡಿಬರುತಿದ್ದು ಈ ಚಿತ್ರದಲ್ಲಿ ತೆಲುಗು ಚಿತ್ರರಂಗದ ಟಾಪ್ ನಟಿ ಸಮಂತಾ ಅಭಿನಯ ಮಾಡಿದ್ದಾರೆ, ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಸದಾ ಸಿನಿಮಾಗಳ ಕೆಲಸದಲ್ಲಿ ಬ್ಯುಸಿ ಇರುತಿದ್ದ ನಟಿ ಸಮಂತಾ ಈಗ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ತಿಮ್ಮಪ್ಪನ ಸನ್ನಿಧಿಯಲ್ಲಿ ಅವರು ಕಳೆದಿದ್ದಾರೆ ಎಂದು ತಿಳಿದು ಬಂದಿದೆ.

ಸಮಂತಾ ರವರು ತಿರುಪತಿ ತಿಮ್ಮಪ್ಪ ಸ್ವಾಮಿಯ ದರ್ಶನ ಪಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅನೇಕ ಬಾರಿ ತಿರುಮಲಗೆ ಭೇಟಿ ನೀಡಿದ್ದಾರೆ. ಆದರೆ, ಮೊನ್ನೆಯ ಭೇಟಿ ವಿಶೇಷತೆಯಿಂದ ಕೂಡಿತ್ತು. ಏನದು ವಿಶೇಷತೆ ಅಂತೀರಾ ಮುಂದೆ ಓದಿ.

ನಟಿ ಸಮಂತಾ ತನ್ನ ಗೆಳತಿ ರಮ್ಯಾ ಸುಬ್ರಹ್ಮಣ್ಯನ್ ಜತೆ ತಿರುಪತಿಯಲ್ಲಿರುವ 3500 ಮೆಟ್ಟಿಲುಗಳನ್ನು ಎರಡೂವರೆ ಗಂಟೆಯಲ್ಲಿ ಏರುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಸಾಮಾನ್ಯರಲ್ಲಿ ಸಾಮಾನ್ಯಳಂತೆ ಎಲ್ಲರ ಜೊತೆ ಅತೀ ಉತ್ಸಾಹದಿಂದ ಮೆಟ್ಟಿಲು ಏರಿ ಸ್ವಾಮಿಯ ದರ್ಶನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರ ಅಭಿಮಾನಿಗಳಿಗೆ ಸ್ಫೂರ್ತಿ ಆಗಿದೆ ಎಂದು ತಿಳಿದು ಬಂದಿದೆ. ನಂತರ ರಂಗನಾಯುಕುಲ ಮಂಡಪಮ್​​​​ ದಲ್ಲಿ ಪ್ರಸಾದ ಪಡೆದರು. ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ”ನನಗೆ ಈ ಜಾಗ ತುಂಬ ಇಷ್ಟ. ಇಲ್ಲಿ ಬಂದರೆ ನನ್ನ ಮನಸ್ಸಿಗೆ ಒಂದು ರೀತಿಯ ನೆಮ್ಮದಿ ಸಿಗುತ್ತದೆ” ಎಂದು ಹೇಳಿದ್ದಾರೆ.

 

@samantharuthprabhuoffl at #tirupati . . Follow @samantharuthprabhu45 ❤️Inquiries 👉🏻 DM #samanthaakkineni #samantharuthprabhu #allaboutsamantharuthprabhu . . #samanthaakkineni #anushkashetty #baahubali2 #baahubali #bahubali #bahubali2 #prabhas #prabhasanushka #prabhasraju #hyderabad #chennai #mumbai #ShaliniPandey #ArjunReddy #vijaydevarakonda #rakulpreet #rakulpreetsingh #samantha #samantharuthprabhu #nivethathomas #saipallavi #keerthysuresh #aliabhatt #shraddhakapoor #raashikhanna #allaboutsamantharuthprabhu #allaboutrakulpreet

A post shared by Samantha Akkineni ❤ (@samantharuthprabhu45) on

ಸಮಂತಾ ಅವರ ಉ- ಟರ್ನ್ ಸಿನಿಮಾ ಫಸ್ಟ್ ಲುಕ್ ಕೆಲ ದಿನಗಳ ಹಿಂದೆ ರಿಲೀಸ್ ಆಗಿದ್ದು, ಸಪ್ಟೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಉಳಿದಂತೆ, ಚಿತ್ರದಲ್ಲಿ ರಾಹುಲ್ ರವೀಂದ್ರನ್, ಭೂಮಿಕಾ ಚಾವ್ಲಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top