ಸಮಾಚಾರ

ತುಂಬು ಗರ್ಭಿಣಿಯಾದ ಸಾನಿಯಾ ಮಿರ್ಜಾ ಟೆನಿಸ್ ಕೋರ್ಟ್ ನಲ್ಲಿ ಮತ್ತೆ ಕಾಣಿಸಿಕೊಂಡಿದ್ದು ಹೀಗೆ

ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರ ಬಹಿರಂಗವಾಗಿ ದಿನಗಳೇ ಕಳೆದುಹೋಗಿವೆ. ನಾಲ್ಕು 5 ಹಿಂದೆಯಷ್ಟೇ ತಾನು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗ ಪಡಿಸಿದ್ದ ಸಾನಿಯಾ ಆ ನಂತರ ಎಲ್ಲಿಯೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಮಗುವನ್ನು ತನ್ನ ಹೋಟೆಯಲ್ಲಿ ಹೊತ್ತುಕೊಂಡಿರೋ ತುಂಬು ಗರ್ಭಿಣಿಯಾಗಿ ಸಾನಿಯಾ ಹೇಗೆ ಕಾಣುತ್ತಾಳೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು ಇದೀಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಸಾನಿಯಾ ಮಿರ್ಜಾ ತುಂಬು ಗರ್ಭಿಣಿಯಾಗಿದ್ದರೂ ಟೆನಿಸ್ ಅಂಕಣಕ್ಕೆ ಇಳಿದಿದ್ದಾರೆ ಎಂದು ತಿಳಿದು ಬಂದಿದೆ.

ಗರ್ಭಿಣಿ ಆದ ದಿನದಿಂದ ಯಾವುದೇ ಟೆನಿಸ್ ಮೈದಾನಕ್ಕೆ ಸಾನಿಯಾ ಕಾಲಿಟ್ಟಿರಲಿಲ್ಲ ಸದ್ಯ ತುಂಬು ಗರ್ಭಿಣಿಯಾಗಿರುವ ಸಾನಿಯಾ ಟೆನಿಸ್ ಕೋರ್ಟ್ ಗೆ ಹೋಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸಾನಿಯಾ ಮಿರ್ಜಾಗೆ ಅಕ್ಟೋಬರ್ ನಲ್ಲಿ ಹೆರಿಗೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಸಾನಿಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ‘ಒಬ್ಬ ಟೆನಿಸ್ ಆಟಗಾರರನ್ನು ಕೆಲವು ಕಾಲ ಅಂಕಣದಿಂದ ದೂರವಿಡಬಹುದು. ಆದರೆ ಟೆನಿಸ್ ನ್ನು ಟೆನಿಸ್ ಆಟಗಾರರಿಂದ ದೂರ ಮಾಡಲಾಗದು’ ಎಂದು ಬರೆದಿದ್ದಾರೆ.

 

You can take the player off the tennis court for a while .. but you can’t take the tennis out of the tennis player ever 😏

A post shared by Sania Mirza (@mirzasaniar) on

 

ತಮ್ಮ ಟೆನಿಸ್ ವೃತ್ತಿ ಜೀವನದಲ್ಲಿ ಅಮೋಘ ಸಾಧನೆ ಮಾಡಿರುವ ಸಾನಿಯಾ ವಿದೇಶಗಳಲ್ಲಿ ನಡೆದ ಅನೇಕ ಟೂರ್ನಿಯಲ್ಲಿ ವಿಜೇತರಾಗಿ ದೇಶಕ್ಕೆ ಹೆಸರು ತಂದುಕೊಟ್ಟಿದ್ದಾರೆ. ಸಾನಿಯಾ ಗರ್ಭಿಣಿಯಾದ ಬಳಿಕ ಟೆನಿಸ್ ಕೋರ್ಟ್ ನಲ್ಲಿ ಫೋಟೋ ಮಾಡಿಸಿಕೊಳ್ಳುವ ಬಯಕೆ ಹೊಂದಿದ್ದರು ಎನ್ನಲಾಗಿದೆ. ಸದ್ಯ ತಮ್ಮ ಬಯಕೆಯಂತೆ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸಾನಿಯಾ ಅವರ ಫೋಟೋಗಳು ವೈರಲ್ ಆಗಿವೆ. ಅಭಿಮಾನಿಗಳು ಅವರಿಗೆ ಅರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top