ಸಮಾಚಾರ

ತುಂಬಾ ವೈರಲ್ ಆಯಿತು ಶಾರೂಕ್ ಸುಪುತ್ರ ಮಾಡಿರೋ ಈ ಕೆಲಸ ,ಏನ್ ಆ ಕೆಲಸ ನೀವೇ ನೋಡಿ

ಖ್ಯಾತ ಬಾಲಿವುಡ್ ನಟ ಶಾರುಖ್ ಖಾನ್ ಅವರು ತಮ್ಮ ಅಮೋಘ ಅಭಿನಯದ ಮೂಲಕ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಶಾರುಖ್ ಅವರು ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಗುಣ ಎಲ್ಲರು ಮೆಚ್ಚುವಂತದ್ದು. ತಾನು ರೂಢಿಸಿಕೊಂಡು ಬಂದಿರುವ ಈ ಒಳ್ಳೆಯ ಗುಣವನ್ನು ಶಾರುಖ್ ಖಾನ್ ಅವರು ತಮ್ಮ ಮಕ್ಕಳಿಗೂ ಕಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಬಗ್ಗೆ ನೀವು ಆಗಾಗ ಸುದ್ದಿಗಳನ್ನು ಕೇಳಿಯೇ ಇರುತ್ತೀರಿ ಈಗ ಆರ್ಯನ್ ಖಾನ್ ಅವರು ಬಡ ಮಹಿಳೆ ಒಬ್ಬರಿಗೆ ಹಣ ಸಹಾಯ ಮಾಡಿ ಸುದ್ದಿಯಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಆರ್ಯನ್ ತಮ್ಮ ಗೆಳೆಯರೊಡನೆ ಮುಂಬೈ ನಲ್ಲಿ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಪಾರ್ಟಿ ಮುಗಿಸಿಕೊಂಡು ಹೊರಗೆ ಬಂದ ಆರ್ಯನ್ ಅವರ ಸುತ್ತ ಮಾಧ್ಯಮದವರು ಸುತ್ತುವರೆದರು. ಮಾಧ್ಯಮಕ್ಕೆ ಮಾತನಾಡಿದ ಆರ್ಯನ್ ನಂತರ ತಮ್ಮ ಕಾರಿನ ಕಡೆಗೆ ಬಂದರು.

 

 

ಕಾರಿನ ಕಡೆ ಬರುತ್ತಿದ್ದಂತೆ ಅವರಿಗೆ ಮಗು ಎತ್ತುಕೊಂಡಿದ್ದ ಭಿಕ್ಷೆ ಬೇಡುವ ಮಹಿಳೆ ಕಂಡಳು ಕೂಡಲೇ ಆ ಮಹಿಳೆಯನ್ನು ಕಂಡು ಆರ್ಯನ ಮನಸ್ಸು ಕರಗಿ ತನ್ನ ಬಳಿ ಇದ್ದ ಹಣವನ್ನು ಆ ಮಹಿಳೆಗೆ ನೀಡಿದ್ದಾರೆ, ನಂತರ ಕಾರು ಹತ್ತಿ ಮುಂದೆ ಸಾಗಿದರು.

ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಫೋಟೋ ಕ್ಲಿಕ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶಾರುಖ್ ಮಗನ ಸಾಮಾಜಿಕ ಕಳಕಳಿಯ ಬಗ್ಗೆ ಹೊಗಳಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ ಆಗಿ ಆರ್ಯನ್ ಒಳ್ಳೆಯ ಕಾರ್ಯಕ್ಕೆ ಅವರಿಗೆ ಪ್ರಶಂಸಿದ್ದಾರೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top