ಸಮಾಚಾರ

ಹಿರಿಯ ನಟ ಶಿವರಾಮ್ ಪುಟ್ಟಣ್ಣ ಕಣಗಾಲ್ ರವರ ಬಗ್ಗೆ ಗೊತ್ತಿರದ ಇಂಟೆರೆಸ್ಟಿಂಗ್ ವಿಷ್ಯಗಳ ಬಗ್ಗೆ ಹೇಳಿದು ಹೀಗೆ ,ಏನ್ ಆ ವಿಷ್ಯ ,ನೋಡಿ ನೀವೇ

ಸುಮಾರು 45 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ನೂತನ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಕಾಣಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದ್ದ ಸಿನಿಮಾ. ಹಲವು ಕಲಾವಿದರ ವೃತ್ತಿಬದುಕಿಗೆ ತಿರುವು ನೀಡಿದ್ದ ಸಿನಿಮಾ ಇದು. ಸಿನಿಮಾದಲ್ಲಿ ಅಭಿನಯ ಮಾಡಿದ್ದ ಶಿವರಾಂ ರೀರಿಲೀಸ್‌ ಆಗುತ್ತಿರುವ ಈ ಸಂದರ್ಭದಲ್ಲಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಭಾವುಕರಾದರು.

ಈ ಸಂಧರ್ಭದಲ್ಲಿ ಮಾತನಾಡಿದ ಶಿವರಾಂ ಅವರು ‘ನಾಗರಹಾವು’ ಸಿನಿಮಾದಲ್ಲಿ ನಿರ್ದೇಶನ ಮಾಡಿದ್ದ ಪುಟ್ಟಣ್ಣ ಕಣಗಾಲ್ ಅವರನ್ನು ಹಾಡಿ ಹೊಗಳಿದ್ದಾರೆ. ಶೂಟಿಂಗ್ ನಡೆಯುವಾಗಿನ ಒಂದು ಘಟನೆಯನ್ನು ಹೇಳಿದ್ದಾರೆ. ನಾಗರಹಾವು ಸಿನಿಮಾ ಶೂಟಿಂಗ್ ಮೊದಲ ಷೆಡ್ಯೂಲ್ ನಡೆಯುವಾಗ ಅವರಿಗೆ ಚಿತ್ರದುರ್ಗದ ಐಬಿಯಲ್ಲಿ ಉಳಿದುಕೊಳ್ಳಲು ಕೆಲವ ಎರಡು ಕೊಠಡಿ ಇದ್ದವು. ಒಂದು ಒಂದು ಕೊಠಡಿ ಡೈರೆಕ್ಷನ್ ಗೆ ಇನ್ನೊಂದು ಕೊಠಡಿ ಪ್ರೊಡಕ್ಷನ್ ಗೆ ಮೀಸಲಿರಿಸಲಾಗಿತ್ತು. ಡೈರೆಕ್ಷನ್ ಕೊಠಡಿಯಲ್ಲಿ ಒಂದೇ ಮಂಚ ಇತ್ತು. ಉಳಿದವರೆಲ್ಲ ಕೆಳಗೆ ಮಲಗಬೇಕಿತ್ತು.

 

ಆಗ ಪುಟ್ಟಣ್ಣ ಅವರು ಸಿನಿಮಾ ನಾಯಕ ವಿಷ್ಣುವರ್ಧನ್ ಅವರಿಗೆ ಮಂಚದ ಮೇಲೆ ಮಲಗಲು ತಿಳಿಸಿ ತಾವು ಕೆಳಗೆ ಹಾಸಿಗೆ ಮೇಲೆ ಮಲಗಿದರು. ಪುಟ್ಟಣ್ಣ ಅವರು ಯಾವಾಗಲು ಕಲಾವಿದರ ಬಗ್ಗೆ ಹೆಚ್ಚಿನ ಕಾಳಜಿ ಮಾಡುತ್ತಿದ್ದರು ಇದು ಪುಟ್ಟಣ್ಣ ಅವರ ದೊಡ್ಡತನ ಎಂದು ಶಿವರಾಂ ಹೇಳಿದರು. ಪುಟ್ಟಣ್ಣ ಅವರಿಗೆ ಸಿಡುಕು ಸ್ವಭಾವ ಇದೆ ಎಂದು ಕೆಲವರು ಹಬ್ಬಿಸಿರುವ ಬಗ್ಗೆ ಮಾತನಾಡಿದ ಶಿವರಾಂ, ನಾನು ಒಪ್ಪುವುದಿಲ್ಲ. ನಾನಂತು ಅವರು ಸಿಟ್ಟನ್ನು ನೋಡಿಲ್ಲ ಎಲ್ಲರೊಂದಿಗೆ ಅವರು ಒಳ್ಳೆಯದಾಗಿಯೇ ಮಾತನಾಡುತಿದ್ದರು ಎಂದು ಹೇಳಿದರು.

ಪುಟ್ಟಣ್ಣ ಅವರು ಯಾರನ್ನು ನಂಬುತ್ತಾರೋ ಅವರ ಮೇಲೆ ಅಪಾರವಾದ ವಿಶ್ವಾಸ ಇಡುತ್ತಿದ್ದರು. ನನ್ನ ಮೇಲೆ ಪುಟ್ಟಣ್ಣ ಅವರು ವಿಶ್ವಾಸ ಇಟ್ಟು ಅನೇಕ ಜವಾಬ್ದಾರಿ ಕೊಟ್ಟಿದ್ದರು ಎಂದು ಹೇಳಿದರು. ಕನ್ನಡ ಚಿತ್ರರಂಗದ ಕಂಡ ಮಹಾನ ನಿರ್ದೇಶಕ ಅವರು ಎಂದು ಶಿವರಾಂ ಸ್ಮರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top