fbpx
ಸಮಾಚಾರ

ಕನ್ನಡದ ‘ಫಿದಾ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಗೊಂಡಳು ಬಿಗ್‌ಬಾಸ್ ಬೆಡಗಿ ಶ್ರುತಿ ಪ್ರಕಾಶ್- ಆದರೆ?

ಬಿಗ್‌ಬಾಸ್ ಸೀಸನ್ ಐದರ ಕಡೇ ತನಕ ನಿರೀಕ್ಷೆ ಹುಟ್ಟಿಸಿದ್ದಾಕೆ ಶ್ರುತಿ ಪ್ರಕಾಶ್. ಅತ್ಯಂತ ಸಹಜವಾದ ವರ್ತನೆ, ಸೂಕ್ಷ್ಮ ಮನಸ್ಥಿತಿಯಿಂದ ಬಿಗ್‌ಬಾಸ್ ಪ್ರೇಕ್ಷಕರ ಮನ ಗೆದ್ದಿದ್ದ ಶ್ರುತಿ ಬಿಗ್‌ಬಾಸ್ ಶೋನಲ್ಲಿ ಗೆಲ್ಲದಿದ್ದರೂ ಕನ್ನಡ ಚಿತ್ರರಂಗದಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಗೆದ್ದಿದ್ದಾಳೆ. ಬಿಗ್ ಬಾಸ್ ನಡೆಯುವಷ್ಟು ದಿನ ಪಡ್ಡೆಹುಡುಗರ ಪಾಲಿನ ಕ್ರಶ್ ಅಂತಿದ್ದ ಆಕೆ ಬಿಗ್‌ಬಾಸ್ ಶೋನಿಂದ ಹೊರ ಬರುತ್ತಲೇ ಕನ್ನಡ ಸೇರಿದಂತೆ ಹಿಂದಿ ಪ್ರಾಜೆಕ್ಟ್ ಗಳಲ್ಲಿ ಮುಳುಗಿಹೋಗಿದ್ದಾಳೆ.. ಇಂಥಾ ಶ್ರುತಿ ಪ್ರಕಾಶ್ ಇದೀಗ ಮತ್ತೊಂದು ಕನ್ನಡ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾಳೆ.

 

 

ಸದ್ಯ ಕನ್ನಡದ ‘ಲಂಡನ್‌ನಲ್ಲಿ ಲಂಬೋದರ’ ಚಿತ್ರದಲ್ಲಿ ಬ್ಯುಸಿಯಿರುವ ಶ್ರುತಿ ‘ಫಿದಾ’ ಎಂಬ ಹೆಸರಿನ ಕನ್ನಡ ಚಿತ್ರದಲ್ಲಿ ನಾಯಕಿ ಕಾಣಿಸಿಕೊಳ್ಳಲ್ಲಿದ್ದಾರೆ. ಹಾಗಂತ ಇದು ತೆಲುಗಿನ ಸೂಪರ್ ಹಿಟ್ ಚಿತ್ರ ‘ಫಿದಾ’ ಸಿನಿಮಾದ ರಿಮೇಕ್ ಎಂದುಕೊಳ್ಳುವಹಾಗಿಲ್ಲ ಏಕೆಂದರೆ ಇದು ಪಕ್ಕ ಸ್ವಮೇಕ್ ಸಿನಿಮಾ. ತೆಲುಗು ಸಿನಿಮಾಗೂ ಇದಕ್ಕೂ ಯಾವುದೇ ರೀತಿಯ ಸಂಭಂದಗಳಿರುವುದಿಲ್ಲ.

ಹಾಗಾದರೆ ಶ್ರುತಿ ಪ್ರಕಾಶ್ ನಟಿಸಲಿರೋ ಚಿತ್ರ ಯಾವುದು? ಅದರ ನಿರ್ದೇಶಕರು ಯಾರು? ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳೋದು ಸಹಜವೇ. ಈ ನಿಟ್ಟಿನಲ್ಲಿ ನೋಡ ಹೋದರೆ, ರಾಮ್ ವಿನಯ್ ಗೌಡ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಫಿದಾ’ ಚಿತ್ರವನ್ನು ‘ಶ್ರೀ ಅಂಜನಾದ್ರಿ ಸಿನಿಮಾಸ್’ ಬ್ಯಾನರ್’ನ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಚಿತ್ರದಲ್ಲಿ ಕಾಡುಮಳೆ ಖ್ಯಾತಿಯ ರಾಮ್ ಹರ್ಷನ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಚಿತ್ರ 2009ರಲ್ಲಿ ಮೈಸೂರಿನಲ್ಲಿ ನಡೆದ ನೈಜ ಘಟನೆಯನ್ನಾಧಾರಿತವಾಗಿದ್ದು ಸೆಪ್ಟೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಉಳಿದಂತೆ ಇನ್ನಷ್ಟೇ ಉಳಿದ ಕಲಾವಿದರ ಮತ್ತು ತಾಂತ್ರಿಕ ವರ್ಗದವರ ಆಯ್ಕೆಗಳ ಪ್ರಕ್ರಿಯೆ ಆರಂಭಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಎಲ್ಲವೂ ಫೈನಲ್ ಆಗಲಿದೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top