fbpx
ಹೆಚ್ಚಿನ

ಗ್ರೇಟ್ ಲೀಡರ್ ಜನ ನಾಯಕ ಕರುಣಾನಿಧಿಯವರಿಗೆ ಸಿನಿ ತಾರೆಯರು ಅಂತಿಮ ನಮನ ಕೋರಿದು ಹೀಗೆ .

ತಮಿಳುನಾಡು ಮಾಜಿ ಸಿಎಂ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಸಂಜೆ 6.10ಕ್ಕೆ ಚೆನ್ನೈ ನಗರದ ಕಾವೇರಿ ಆಸ್ಪತ್ರೆಯಲ್ಲಿ ಅಸು ನೀಗಿದರು ಎಂದು ತಿಳಿದು ಬಂದಿದೆ. ಸಿನಿಮಾ ತಾರೆಗಳು ಟ್ವಿಟರ್‌ನಲ್ಲಿ ತಮ್ಮ ಸಂತಾಪ ತೋರಿಕೊಂಡಿದ್ದಾರೆ.

ತ್ರಿಷಾ
ಇನ್ನೊಂದು ಯುಗ,ಇನ್ನೊಂದು ಅಂತ್ಯ. ತಮಿಳು ಚಿತ್ರೋದ್ಯಮಕ್ಕೆ ತುಂಬಲಾರದ ಭರಿಸಲಾಗದ ನಷ್ಟವಾಗಿದೆ .

ಅಮಿತಾಬ್ ಬಚ್ಚನ್
ಸಾತ್ ಹಿಂದೂಸ್ತಾನಿ ಚಿತ್ರಕ್ಕಾಗಿ ನಾನು ಮೊದಲ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದು ಕರಣಾನಿಧಿ ಅವರಿಂದಲೇ ಆಗ ಕರುಣಾನಿಧಿ ಸಿಎಂ ಆಗಿದ್ದರು. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಚೆನ್ನೈನಲ್ಲಿ ನಡೆದಿತ್ತು.

ಸಮಂತಾ
ಯುಗ ಮುಗಿಯಿತು. 60 ವರ್ಷಗಳ ರಾಜಕೀಯ ಪ್ರಯಾಣ. ಅಸಾಧ್ಯವನ್ನು ಸಾಧ್ಯ ಮಾಡಿದರು. ಎಂದೆದಿಗೂ ಇವರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರುತ್ತಾರೆ

 

 

 

ಹ್ಯಾರಿಸ್ ಜಯರಾಜ್
50 ವರ್ಷಕ್ಕೂ ಅಧಿಕ ಕಾಲ ಅಭಿಮಾನಿಗಳ ಹೃದಯನ್ನು ಗೆದ್ದ ಹಿರಿಯ ಮುಖಂಡ ನಿಧನರಾದರೆಂದು ತಿಳಿದು ತುಂಬಾ ನೋವಾಯಿತು. ಇಂದು ನಾನು ಎರಡು ಸೂರ್ಯಾಸ್ತಗಳನ್ನು ಕಂಡೆ.

ಅಲ್ಲು ಅರ್ಜುನ್
ಕಲೈನರ್ ದ್ರಾವಿಡ ಮುನ್ನೇತ್ರ ಕಳಗಂ ಅಧಿನಾಯಕ, ಐದು ಸಲ ತಮಿಳುನಾಡು ಮುಖ್ಯಮಂತ್ರಿ. 60 ವರ್ಷಗಳ ರಾಜಕೀಯ ಪಯಣ. ತಮಿಳುನಾಡು ರಾಜಕೀಯದ ಭೀಷ್ಮ ಪಿತಾಮಹ. ದ್ರಾವಿಡರ ಹೆಮ್ಮೆ. ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ದೇವರುನೀಡಲಿ. ಕರುಣಾನಿಧಿಯವರ ಆತ್ಮಕ್ಕೆ ಶಾಂತಿ ಸಿಗಲಿ.

ಲಾವಣ್ಯ
ಯುಗ ಮುಗಿಯಿತು. ಹಿರಿಯ ನೇತಾರ. ನಿಮ್ಮನ್ನು ತುಂಬಾ ಕಳೆದುಕೊಂಡಿದ್ದೇವೆ.

ರಾಣಾ
ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಅನುಷ್ಕಾ ಶೆಟ್ಟಿ
ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ನನ್ನ ಹೃದಯಪೂರ್ವಕ ಸಂತಾಪ. ಕಲೆ, ಸಾಹಿತ್ಯ, ಭಾರತೀಯ ರಾಜಕೀಯಕ್ಕೆ ಅವರು ಸಲ್ಲಿಸಿದ ಎಂದಿಗೂ ಅಜರಾಮರ.

ಈಷಾ ರೆಬ್ಬಾ: ಕಲೈನರ್ ನಿಧನರಾದರೆಂದು ತಿಳಿದು ತುಂಬಾ ದುಃಖವಾಯಿತು. ಕಲೈನರ್ ಆತ್ಮಕ್ಕೆ ಶಾಂತಿ ಸಿಗಲಿ. ತಮಿಳುನಾಡು ಜನರ ಜತೆ ಅವರ ದುಃಖದಲ್ಲಿ ನಾನು ಭಾಗಿಯಾಗುತ್ತಿದ್ದೇನೆ.

ಹನ್ಸಿಕಾ
ದೇಶದ ಹಿರಿಯ ಮುಖಂಡರಲ್ಲಿ ಒಬ್ಬರಾದ ಕರುಣಾನಿಧಿ ನಮ್ಮನ್ನೆಲ್ಲಾ ಬಿಟ್ಟು ಹೋಗಿರುವುದಕ್ಕೆ ದುಃಖವಾಗುತ್ತಿದೆ. ಅವರ ಕುಟುಂಬಕ್ಕೆ ದೇವರು ನೋವನ್ನು ಭರಿಸುವ ಶಕ್ತಿ ನೀಡಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top