ಸಮಾಚಾರ

80 ರ ದಶಕದಲ್ಲಿ ಹಿಟ್ ಚಿತ್ರಗಳನ್ನು ಕೊಟ್ಟ ಈ ಜೋಡಿ ಮತ್ತೆ ತೆರೆ ಮೇಲೆ ಮಿಂಚಲು ರೆಡಿ ಆಗೇ ಬಿಟ್ರು ,ಯಾವುದು ಆ ಜೋಡಿ ಅಂತೀರಾ, ನೀವೇ ನೋಡಿ

ಸುಮಾರು 120 ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ನೆಲೆ ನಿಂತಿರುವ ಶ್ರುತಿ ಕನ್ನಡ ಚಿತ್ರರಂಗದ ಖ್ಯಾತ ನಟಿಯಾಗಿದ್ದಾರೆ. ಶ್ರುತಿ ಮೂಲ ಹೆಸರು ಪ್ರಿಯದರ್ಶಿನಿ. ದ್ವಾರಕೀಶ್ ನಿರ್ಮಾಣದ ‘ಶ್ರುತಿ’ ಚಿತ್ರದ ಸೆಂಟಿಮೆಂಟ್ ಪಾತ್ರದ ಮೂಲಕ ಶ್ರುತಿ ಎಂದೇ ಜನಜನಿತರಾದರು.

ಶ್ರುತಿ ಮತ್ತು ಚರಣ್‌ರಾಜ್ ಇವರಿಬ್ಬರನ್ನು ಇಷ್ಟು ದಿನ ಜನರು ನೋಡಿರೋದು ಫುಲ್ ಸೆಂಟಿಮೆಂಟ್ ಹೊಂದಿರೋ ಅಕ್ಕರೆಯ ಅಣ್ಣ-ತಂಗಿ ಪಾತ್ರದ ಅಭಿನಯದಲ್ಲಿ. 1996ರಲ್ಲಿ ಬಿಡುಗಡೆ ಆಗಿದ್ದ ‘ತವರಿನ ತೊಟ್ಟಿಲು’ ಚಿತ್ರ ನೋಡಿದವರಿಗೆ, ಆಹಾ! ಅಣ್ಣ-ತಂಗಿ ಅಂದರೆ ಹೀಗೆ ಇರಬೇಕಪ್ಪ ಎಂದು ಆನಂದಭಾಷ್ಪದ ಜೊತೆಗೆ ಕಣ್ಣೀರ ಕೋಡಿ ಹರಿಸಿದ ಚಿತ್ರವದು. ನಂತರ ಹೀಗೆ ಕೆಲ ಸಿನಿಮಾಗಳಲ್ಲಿ ಅಣ್ಣ-ತಂಗಿ ಪಾತ್ರದಲ್ಲೇ ಶ್ರುತಿ, ಚರಣ್‌ರಾಜ್ ಅಭಿನಯ ಮಾಡಿ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದರು. ಆದರೆ ಈಗ ಬರೋಬ್ಬರಿ 22 ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಒಂದಾಗಿದ್ದು, ಗಂಡ-ಹೆಂಡತಿ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ.

 

 

ಅಂದಹಾಗೆ ಇವರೊಂದಿಗೆ ಕನ್ನಡ ಸಿನಿಮಾರಂಗದ ಖ್ಯಾತ ಖಳ ನಟ ಬಲರಾಜವಾಡಿ ಕೂಡಿ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಲಿದ್ದಾರೆ. ಶೃತಿ ಹಾಗು ಚರಣ್ ರಾಜ್ ಅವರು ಕಾಜಲ್ ಎನ್ನುವ ಸಿನಿಮಾದ ಮೂಲಕ ಮತ್ತೆ ಈ ಒಂದಾಗಿ ಅಭಿನಯ ಮಾಡುತ್ತಿದ್ದಾರೆ. ಈ ಹಿಂದೆ ತನ್ನ ವಿಭಿನ್ನ ಪೋಸ್ಟರ್‌ನಿಂದಲೇ ಎಲ್ಲರನ್ನೂ ತನ್ನೆಡೆಗೆ ಸೆಳೆದುಕೊಂಡಿದ ಸಿನಿಮಾ ಕಾಜಲ್‌. ಈ ಚಿತ್ರವನ್ನು ರಾಘವೇಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್‌ ನಾಯಕ ಹಾಗು ಸಿಮ್ರಾನ್‌ ಅವರು ಚಿತ್ರದ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ,

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top