fbpx
ಸಮಾಚಾರ

ಕರುಣಾನಿಧಿ ಹಳದಿ ಶಾಲು ಮತ್ತು ಕಪ್ಪು ಕನ್ನಡಕವನ್ನ ಯಾಕೆ ಹಾಕೊಳ್ಳುತ್ತಿದ್ದರು ಗೊತ್ತಾ? ಇದರ ಹಿಂದಿನ ಅಸಲಿ ಸೀಕ್ರೆಟ್ ಏನು.

ಇಹಲೋಕ ತ್ಯಜಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿಯವರ ಹೆಸರು ಕೇಳಿದ ಕೂಡಲೇ ನಮಗೆ ತಟ್ಟನೆ ನೆನಪಾಗುತ್ತಿದ್ದುದು ಬಿಳಿ ಧೋತಿ, ಶರ್ಟ್, ಹಳದಿ ಶಾಲು, ಕಪ್ಪು ಕನ್ನಡಕ ತೊಟ್ಟ ವ್ಯಕ್ತಿ…19 ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಕರುಣಾನಿಧಿಗೆ ದೇಶಾದ್ಯಂತ ಅವರ ಕಪ್ಪು ಕನ್ನಡಕ ಮತ್ತು ಹಳದಿ ಶಾಲೇ ಟ್ರೇಡ್​ ಮಾರ್ಕ್​ ರೀತಿ ಆಗಿ ಬಿಟ್ಟಿತ್ತು.. ಅಷ್ಟಕ್ಕೂ ಕರುಣಾನಿಧಿಯವರು ಕಪ್ಪು ಕನ್ನಡಕ ಮತ್ತು ಹಳದಿ ಶಾಲನ್ನೇ ಯಾಕೆ ಹಾಕಿಕೊಳ್ಳುತ್ತಿದ್ದರು ಎಂಬುದರ ಹಿಂದೆ ಸಾಕಷ್ಟು ಕೂತುಹಲ ಸಂಗತಿಗಳು ಇದ್ದು ಆ ಬಗ್ಗೆ ವಿವರ ಇಲ್ಲಿದೆ.

 

 

ಕಪ್ಪು ಕನ್ನಡಕದ ಸುತ್ತ:
1967ರಲ್ಲಿ ಅಪಘಾತವೊಂದರಲ್ಲಿ ಕರುಣಾನಿಧಿಯವರ ಎಡಗಣ್ಣಿಗೆ ಬಲವಾದ ಪೆಟ್ಟು ಬಿದ್ದಿತ್ತು. ಆ ನೋವನ್ನ ನಾಲ್ಕು ವರ್ಷಗಳವರೆಗೆ ನುಂಗಿಕೊಂಡಿದ್ದ ಕರುಣಾನಿಧಿ ಕೊನೆಗೆ 1971ರಲ್ಲಿ ಅಮೆರಿಕಾದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ಪಡೆದುಕೊಂಡಿದ್ದರು.. ಆಗ ಧರಿಸಿದ ಕಪ್ಪು ಕನ್ನಡಕವೇ ಕರುಣಾನಿಧಿಯವರ ಟ್ರೇಡ್ ಮಾರ್ಕ್ ಆಗಿಬಿಟ್ಟಿತ್ತು. ಮತ್ತೆ ಕೆಲವರು ಸ್ಟೈಲ್​ ಮಾಡೋದಕ್ಕೆ ಕಪ್ಪು ಕನ್ನಡಕ ಧರಿಸುತ್ತಿದ್ದರು ಅಂತಲೂ ಹೇಳುತ್ತಾರೆ.

ಹಳದಿ ಶಾಲು ಬಂದಿದ್ದು ಹೇಗೆ?
1940ರ ದಶಕದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ದೊಡ್ಡಮಟ್ಟದಲ್ಲಿ ಚಳುವಳಿ ನಡೆಸಿ ‘ದ್ರಾವಿಡರ್ ಕಳಗಮ್’ ಹೋರಾಟವನ್ನ ಹುಟ್ಟುಹಾಕಿದ್ದ ಪೆರಿಯಾರ್ ಇವಿ ರಾಮಸಾಮಿ ಹಳದಿ ಬಣ್ಣವನ್ನ ಸಮಾನತೆಯ ಪ್ರತೀಕವೆಂದು ಘೋಷಿಸಿದ್ದರು.. ಪೆರಿಯಾರ್ ತತ್ವ ಸಿದ್ದಂತಗಳನ್ನ ಅತಿಯಾಗಿ ನಂಬುತ್ತಿದ್ದ ಕರುಣಾನಿಧಿ ಅವರ ಹಾದಿಯಲ್ಲೇ ಸಾಗಿ ಅದೇ ಬಣ್ಣದ ಶಾಲನ್ನ ಧರಿಸೋದಕ್ಕೆ ತೀರ್ಮಾನಿಸಿದ್ದರಂತೆ..

ಅಲ್ಲದೇ ಭಗವಾನ್ ಬುದ್ಧ ಜ್ಞಾನೋದಯದ ನಂತರ ಅಜ್ಞಾನ, ಮೂಢನಂಬಿಕೆ, ಜಾತಿ ತಾರತಮ್ಯಗಳ ಬಗ್ಗೆ ಸಂದೇಶ ಸಾರುತ್ತಾ ತಮ್ಮ ಮುಂದಿನ ಬದುಕನ್ನ ಸಮಾಜಸೇವೆಗೆ ಮೀಸಲಿಟ್ಟಿದ್ದರು. ಅವರು ಸನ್ಯಾಸ ಸ್ವೀಕರಿಸಿದ ನಂತರ ಹಳದಿ ಬಣ್ಣದ ವಸ್ತ್ರವನ್ನೇ ಅಂಗವಸ್ತ್ರವಾಗಿಸಿಕೊಂಡಿದ್ದರಂತೆ ಹಾಗಾಗಿಯೇ ಕರುಣಾನಿಧಿ ಕೂಡ ಹಳದಿ ಶಾಲನ್ನ ಹೆಗಲಿಗೆ ಹಾಕಿಕೊಳ್ತಾ ಇದ್ರು ಎನ್ನಲಾಗುತ್ತೆ. 1996 ರಿಂದ ಹಳದಿ ಬಣ್ಣದ ಶಲ್ಯವನ್ನ ಧರಿಸುತ್ತಿದ್ದರು. 1996 ರಿಂದ ತಮ್ಮ ಕೊನೆ ಉಸಿರು ಇರುವವೆರೆಗೂ ಹಳದಿ ಬಣ್ಣದ ಶಲ್ಯವನ್ನೇ ಹಾಕುತ್ತಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top