ಸಮಾಚಾರ

15 ವರ್ಷಗಳ ಕಾಲ ಅಪ್ರಾಪ್ತೆಯನ್ನುಗುಹೆಯಲ್ಲಿ ಬಂಧಿಸಿಟ್ಟು ಅತ್ಯಾಚಾರವೆಸಗಿದ್ದ ಪಾಪಿ ವೈದ್ಯ

ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಏನು ಅರಿಯದ ಹೆಣ್ಣು ಮಕ್ಕಳನ್ನು ಕೂಡ ಬಿಡದೆ ನೀಚ ಕಾಮುಕರು ತಮ್ಮ ಕಾಮದಾಹ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆ ನೆಪದಲ್ಲಿ ಯುವತಿಯನ್ನು ಕಳೆದ 15 ವರ್ಷಗಳಿಂದ ಗುಹೆಯಲ್ಲಿ ಬಂಧಿಸಿಟ್ಟು, ನಿರಂತರ ಅತ್ಯಾಚಾರ ಎಸಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವ ವಿಲಕ್ಷಣ ಘಟನೆಯೊಂದು ಇಂಡೋನೇಷ್ಯಾ ದೇಶದಲ್ಲಿ ನಡೆದಿದೆ.

ಸುಮಾರು 15 ವರ್ಷಗಳ ಹಿಂದೆ ಬಡ ಕುಟುಂಬವೊಂದು ಚಿಕಿತ್ಸೆಗಾಗಿ ತಮ್ಮ‌ 13 ವರ್ಷದ ಮಗಳನ್ನು ವೈದ್ಯರ ಬಳಿ ಕರೆದುಕೊಂಡು ಹೊಂದಿದ್ದರು. ಆದರೆ ಆ ವೈದ್ಯ ಪೋಷಕರಿಗೆ ಕಟ್ಟು ಕಥೆ ಹೇಳಿ ಹೆಚ್ಚಿನ ಚಿಕಿತ್ಸೆಗಾಗಿ ನಾನು ಅವಳನ್ನು ಇಲ್ಲೇ ಅಡ್ಮಿಟ್ ಮಾಡಿಕೊಳ್ಳುತ್ತೇನೆ ನೀವು ನಾಳೆ ಬನ್ನಿ ಎಂದು ಹೇಳಿ ಕಳುಹಿಸಿದ್ದ. ನಂತರ ವೈದ್ಯನ ಬಳಿ ಆಕೆಯನ್ನು ಪೋಷಕರು ವಿಚಾರಿಸಲು ಬಂದಾಗ, ಆಕೆ ಜಕಾರ್ತಾಗೆ ಹೋಗಿದ್ದಾಳೆ ಎಂದು ಹೇಳಿ ಕಳುಹಿಸಿದ್ದ ಎಂದು ತಿಳಿದು ಬಂದಿದೆ.

 

 

ವೈದ್ಯ ಆ ಹುಡುಗಿಯನ್ನು ಎಲ್ಲಿಯೂ ಕಳುಹಿಸಿರಲಿಲ್ಲ ಬದಲಾಗಿ ತನ್ನ‌ ಮನೆ ಸಮೀಪದ ಗುಹೆಯಲ್ಲಿ ಬಂಧಿಸಿಟ್ಟಿದ್ದ. ಈಗ ಆಕೆಗೆ 28 ವರ್ಷವಾಗಿದ್ದು, ಕಳೆದ 15 ವರ್ಷಗಳಿಂದ ನಿರಂತರ ಅತ್ಯಾಚಾರ ಮಾಡಿ ಆಕೆಗೆ ಕಿರುಕುಳ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಇಂಡೋನೇಷ್ಯಾ ದೇಶದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆತನು ಸ್ನೇಹಿತನ ಆತ್ಮದ ಕಥೆಯನ್ನು ಕಟ್ಟಿ ಯುವತಿಯನ್ನು ನಂಬಿಸಿ ತನ್ನ ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿಗಳು ಅಲ್ಲಿನ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top