ಸಮಾಚಾರ

ಕನ್ನಡದ ಹಿರಿಯ ಹಾಸ್ಯ ನಟ ದೊಡ್ಡಣ್ಣ ನಾಗರಹಾವು ಚಿತ್ರೀಕರಣದ ಸಂದರ್ಭದ ಹಲವು ಗೊತ್ತಿರದ ಸತ್ಯವನ್ನು ಬಿಚ್ಚಿಟ್ಟಿಡು ಹೀಗೆ.ನೋಡಿ ನೀವೇ

ಸುಮಾರು 45 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರ ನೂತನ ತಂತ್ರಜ್ಞಾನದೊಂದಿಗೆ ಮತ್ತೆ ತೆರೆಕಾಣಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಹಲವು ಪ್ರಯೋಗಗಳಿಗೆ ಸಾಕ್ಷಿಯಾಗಿದ್ದ ಸಿನಿಮಾ. ಹಲವು ಕಲಾವಿದರ ವೃತ್ತಿಬದುಕಿಗೆ ತಿರುವು ನೀಡಿದ್ದ ಸಿನಿಮಾ ಇದು. ಹಿರಿಯ ನಟ ದೊಡ್ಡಣ್ಣ ಈ ಸಿನಿಮಾ ರೀ ರಿಲೀಸ್‌ ಆಗುತ್ತಿರುವ ಈ ಸಂದರ್ಭದಲ್ಲಿ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು ಭಾವುಕರಾದರು.

ಮಾತು ಶುರು ಮಾಡಿದ ದೊಡ್ಡಣ್ಣ ಅವರು ನಾಗರಹಾವು ಸಿನಿಮಾ ನಿರ್ಮಾಣ ಮಾಡಿದ ಈಶ್ವರಿ ಸಂಸ್ಥೆಯ ಸ್ಥಾಪಕರಾಗಿರುವ ಶ್ರೀ ಎನ್.ವೀರಾಸ್ವಾಮಿ ಅವರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು. ಈಶ್ವರಿ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದೆ. ಅಮಿತಾ ಬಚ್ಚನ್ ಅವರನ್ನು ಕನ್ನಡಕ್ಕೆ ಕರೆತಂದ ಕೀರ್ತಿ ಈಶ್ವರಿ ಸಂಸ್ಥೆಗೆ ಸಲ್ಲುತ್ತದೆ ಎಂದು ಹೇಳಿದರು. ವೀರಾಸ್ವಾಮಿ ಅವರ ಮಕ್ಕಳಾದ ರವಿಚಂದ್ರನ್ ಹಾಗು ಬಾಲಾಜಿ ಅವರು ಈಗ ಈ ಸಂಸ್ಥೆಯ ಆಧಾರ ಸ್ತಂಭವಾಗಿದ್ದಾರೆ ಎಂದು ಹೇಳಿದರು.

 

 

ಇನ್ನು ನಾಗರಹಾವು ಸಿನಿಮಾ ನಿರ್ದೇಶಕರಾದ ಪುಟ್ಟಣ್ಣ ಅವರ ಬಗ್ಗೆ ಮಾತನಾಡುತ್ತಾ, ರೆಬೆಲ್ ಸ್ಟಾರ್ ಅಂಬರೀಷ್ ರವರು ತಮ್ಮ ತಂದೆಗೂ ಹೆದರುತ್ತಿರಲಿಲ್ಲ ಆದರೆ ಪುಟ್ಟಣ್ಣ ಅವರಿಗೆ ಹೆದರುತ್ತಿದ್ದರು. ಸ್ಟುಡಿಯೋದಲ್ಲಿ ಪಾತ್ರ ಮಾಡುವಾಗ ಪುಟ್ಟಣ್ಣ ಕಮ್ಯಾಂಡರ್ ಇನ್ ಚೀಫ್ ರೀತಿಯಲ್ಲಿ ಇರುತ್ತಿದ್ದರು. ಎಲ್ಲರು ನಿಶಬ್ದತೆ ಕಾಪಾಡುತ್ತಿದ್ದರು. ಸ್ಟುಡಿಯೋದಲ್ಲಿ ಪಿನ್ ಡ್ರಾಪ್ ಸೈಲೆನ್ಸ್ ಇರುತಿತ್ತು. ಆಗ ಕೆಲವರಿಗೆ ಲ್ಯಾಂಡ್ ಫೋನ್ ನಲ್ಲಿ ಕಾಲ್ ಬರುತ್ತಿತ್ತು. ಫ್ಲೋರಿಂಗ್ ಚಾರ್ಜ್ ಕುಮಾರ ಎಂಬ ವ್ಯಕ್ತಿ ಫೋನ್ ಯಾರಿಗೆ ಬಂದಿದೆ ಎಂದು ಹೇಳಲು ಸ್ಟುಡಿಯೋಗೆ ಬರುತ್ತಿದ್ದ.

ಆದರೆ ನಿರ್ದೇಶಕ ಪುಟ್ಟಣ್ಣ ಇದ್ದಾಗ ಯಾರಿಗೂ ಕಾಲ್ ಬಂದಿರುವ ವಿಷಯವನ್ನು ನೇರವಾಗಿ ಹೇಳಲು ಹೆದರುತ್ತಿದ್ದ. ಕಣ್ಣ ಸನ್ನೆಯಿಂದಲೇ ಯಾರಿಗೆ ಫೋನ್ ಬಂದಿದೆ ಎಂದು ಹೇಳುತ್ತಿದ್ದ. ಕುಮಾರ ಸನ್ನೆ ಮಡಿದ ಬಳಿಕ ಆ ವ್ಯಕ್ತಿಗಳು ಅಲ್ಲಿಂದ ಮೆಲ್ಲಗೆ ಹೋಗಿ ಕಾಲ್ ರಿಸೀವ್ ಮಾಡುತ್ತಿದ್ದರು. ಕುಮಾರ ಈ ರೀತಿ ಮಾಡುತಿದ್ದನ್ನು ಸೂಕ್ಷವಾಗಿ ಗಮನಿಸಿದ ಪುಟ್ಟಣ್ಣ ಅವರು ಕುಮಾರನಿಗೆ ಕರೆದು ಇನ್ನು ಯಾರಿಗೂ ಫೋನ್ ಬಂದಿದೆ ಎಂದು ಸನ್ನೆ ಮಾಡಬೇಡ ಎಂದು ವಾರ್ನಿಂಗ್ ಮಾಡಿದ್ದರಂತೆ. ಇನ್ನೇನಾದರೂ ಫೋನ್ ಬಂದಿದೆ ಎಂದು ಹೇಳಲು ಬಂದರೆ ಈ ಫೋನ್ ಕಿತ್ತಾಕಿ ಬಿಡುತ್ತೇನೆ ಎಂದು ಹೇಳಿದ್ದರು ಹಿರಿಯ ನಟ ದೊಡ್ಡಣ್ಣ ಅವರು ಸ್ಮರಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top