ಅರೋಗ್ಯ

ಕಣ್ಣುಗಳು ಬತ್ತು ಹೋಗಿ , ಯಾವಾಗ್ಲೂ ಒಣಗಿ ಕಿರಿ ಕಿರಿ ಅನ್ನಿಸ್ತಿದ್ರೆ ಈ ಮನೆಮದ್ದುಗಳು ಮಾಡ್ಕೊಂಡು ಚೆನ್ನಾಗಿಟ್ಕೊಳ್ಳಿ

ಕಣ್ಣುಗಳು ಬತ್ತು ಹೋಗುವುದನ್ನು ಅಥವಾ ಅವರ ಕಣ್ಣುಗಳಲ್ಲಿ ನೀರು ಇಲ್ಲದೆ ಇರುವುದನ್ನು(ಒಣ ಕಣ್ಣುಗಳು ) ನೀವು ಗಮನಿಸಿರುತ್ತೀರಾ.ಕಣ್ಣುಗಳು ಬತ್ತುವುದು ಕಣ್ಣೀರ ಕೊರತೆಯಿಂದ ಉಂಟಾಗುತ್ತವೆ. ನಿಮ್ಮ ಕಣ್ಣೀರು ನೀರು, ಕೊಬ್ಬಿನ ಎಣ್ಣೆಗಳು ಮತ್ತು ಲೋಳೆಯ ಸಂಕೀರ್ಣ ಮಿಶ್ರಣವಾಗಿದೆ. ಈ ಕಣ್ಣೀರು ನಿಮ್ಮ ಕಣ್ಣುಗಳ ಮೇಲ್ಮೈಯನ್ನು ಮೃದುವಾಗಿ ಇರಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಕಣ್ಣುಗಳನ್ನು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಕೆಲವು ಜನರು ಕಣ್ಣುಗಳು ಬತ್ತುವಿಕೆ ಯಿಂದ ಬಳಲುತ್ತಿರುತ್ತಾರೆ ,ಅದನ್ನು ಹೋಗಲಾಡಿಸಲು ನಾವು ನಿಮಗೆ ಮನೆಯಲ್ಲೇ ಮಾಡಬಹುದಾದ ಮನೆಮದ್ದನ್ನು ನಿಮಗೆ ಹೇಳ್ತಿರಿ ಬನ್ನಿ

1. ಸೌತೆಕಾಯಿ:

ಸೌತೆಕಾಯಿಯಲ್ಲಿರುವ ನೀರನ ಅಂಶ ಗುಣ ನಿಮ್ಮ ಕಣ್ಣುಗಳು ಬತ್ತುಹೋಗುವ ಸಮಸ್ಯೆಯಿಂದ ಹೊರಬರಲು ಸುಲಭವಾಗಿ ಸಹಾಯವಾಗುತ್ತದೆ.
ದಿನವೂ ಮಲಗುವ ಮುನ್ನ ನಿಮ್ಮ ಕಣ್ಣುಗಳ ಮೇಲೆ ಸೌತೆಕಾಯಿಯನ್ನು ಕತ್ತರಿಸಿ ಇಟ್ಟಿಕೊಳ್ಳುವುದರಿಂದ ನಿಮ್ಮ ಕಣ್ಣುಗಳು ತಂಪಾಗುವುದರ ಜೊತೆ ನಿಮ್ಮ ಕಣ್ಣುಗಳು ಬತ್ತು ಹೋಗುವುದನ್ನು ಸಂಪೂರ್ಣವಾಗಿ ತಡೆಯಬಹುದು.

2. ಹಾಲು:

ನಿಮ್ಮ ಕಣ್ಣುಗಳು ಬತ್ತುವಿಕೆ ಯಿಂದ ಹೊರಬರಲು ದಿನಕ್ಕೆ 1 ಸಲ ಸ್ವಲ್ಪ ತಣ್ಣಗಿರುವ ಹಾಲನ್ನು ತೆಗೆದುಕೊಂಡು ಒಂದು ಬಟ್ಟೆಯನ್ನು ಆ ತಣ್ಣಗಿರುವ ಹಾಲಿನಲ್ಲಿ ನೆನಸಿ ನಿಮ್ಮ ಕಣ್ಣಿನ ಮೇಲೆ ಸ್ವಲ್ಪ ಹೊತ್ತು ಬಿಡುವುದರಿಂದ ನಿಮ್ಮ ಕಣ್ಣಿನ ಯಾವುದೇ ಸಮಸ್ಯೆಯಿಂದ ಬೇಗ ಹೊರಬಹುದು.

3. ಅಲೋವೆರಾ:

ಅಲೋವೆರಾ ದಲ್ಲಿರುವ ಆರೋಗ್ಯಕರ ಗುಣ ನಿಮ್ಮ ದೇಹದ ಯಾವುದೇ ಸಮಸ್ಯೆಗೂ ರಾಮಬಾಣ , ದಿನ ರಾತ್ರಿ ಅಲೋವೆರಾವನ್ನು ಕತ್ತರಿಸಿ ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಳ್ಳುವುದರಿಂದ ನಿಮ್ಮ ಕಣ್ಣನ್ನು ಯಾವುದೇ ಇನ್ಫೆಕ್ಷನ್ ಗಳಿಂದ ಕಾಪಾಡುವುದರ ಜೊತೆ ನಿಮ್ಮ ಕಣ್ಣಿನ ಬತ್ತುವಿಕೆಯಿಂದ ಹೊರಬರಲು ಸಹಾಯ ಮಾಡುತ್ತದೆ.

4. ಕಲ್ಲಂಗಡಿ ಹಣ್ಣು:

ಹಣ್ಣುಗಳಲ್ಲಿ ಅತಿಯಾಗಿ ನೀರನ ಅಂಶವಿರುವ ಹಣ್ಣು ಕಲ್ಲಂಗಡಿ ಹಣ್ಣು,ದಿನ 2 ರಿಂದ 3 ಲೋಟ ಕಲ್ಲಂಗಡಿ ರಸವನ್ನು ಕುಡಿಯುವುದರಿಂದ ನಿಮ್ಮ ದೇಹದಲ್ಲಿ ನೀರಿನ ಅಂಶ ಹೆಚ್ಚಾಗುವುದರ ಜೊತೆ ನಿಮ್ಮ ಕಣ್ಣುಗಳು ಬತ್ತುವಿಕೆಯ ಸಮಸ್ಯೆಯಿಂದ ಆದಷ್ಟು ಬೇಗ ಹೊರಬರಬಹುದು.

5. ಟೊಮೇಟೊ :

ದಿನ ರಾತ್ರಿ ಒಂದು ಬಟ್ಟೆಯಿಂದ ಟೊಮೇಟೊ ರಸವನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡು ನಂತರ ತಣ್ಣಗಿನ ನೀರಿನಿಂದ ತೊಳೆದುಕೊಳ್ಳುವುದರಿಂದ ನಿಮ್ಮ ಕಣ್ಣಿನ ಸಮಸ್ಯೆಗಳು ಅತಿ ಬೇಗ ಹೋಗುತ್ತದೆ.

6. ಪರಂಗಿಹಣ್ಣು:

ಪರಂಗಿಹಣ್ಣನ್ನು ದಿನ ತಿನ್ನುವುದು ಅಥವಾ ನಿಮ್ಮ ಕಣ್ಣಿನ ಮೇಲೆ ಇಟ್ಟಿಕೊಳ್ಳುವುದರಿಂದ ನಿಮ್ಮ ಕಣ್ಣಿನ ಕುರುಡುತನ ಅಥವಾ ಕಣ್ಣಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗೆ ಪರಿಹಾರ ಕೊಡುತ್ತದೆ.

7. ಬ್ಲಿಂಕಿಂಗ್ ಎಕ್ಸರ್ಸೈಜ್:

ದಿನವೂ ೧ ರಿಂದ ೨ ಬಾರಿ ಬ್ಲಿಂಕಿಂಗ್ ಎಕ್ಸರ್ಸೈಜ್ ಮಾಡುವುದರಿಂದ ನಿಮ್ಮ ಕಣ್ಣಿಗೆ ಆಗುವ ಇಂಫೆಕ್ಷನ್ಸ್ ಹೋಗುವುದರ ಜೊತೆ ನಿಮ್ಮ ಕಣ್ಣಿನ ಬತ್ತುವಿಕೆ ಅತಿ ಬೇಗ ಕಡಿಮೆಯಾಗುತ್ತದೆ.

8 . ಕಂಪ್ಯೂಟರ್ ಸ್ಕ್ರೀನ್ ನೋಡುವುದನ್ನು ಆಗಾಗ ತಪ್ಪಿಸಿ :

ಕಂಪ್ಯೂಟರ್ ಸ್ಕ್ರೀನ್ ನೋಡುವುದನ್ನು ಆಗಾಗ ತಪ್ಪಿಸಿ , ಮಾನಿಟರ್ ನಿಮ್ಮ ಕಣ್ಣಿನ ಮಟ್ಟಕ್ಕೆ ಅಥವಾ ಅದಕ್ಕಿಂತ ಸ್ವಲ್ಪ ಕೆಳಗೆ ಇರಲಿ , ತುಂಬಾ ಹೊತ್ತು ನಿರಂತರವಾಗಿ ಕಂಪ್ಯೂಟರ್ ಸ್ಕ್ರೀನ್ ನೋಡಬೇಡಿ. 20-20-20 ನಿಯಮವನ್ನು ಪಾಲಿಸಿ. ಇಲ್ಲಿ ಎರಡನೆ 20 ನಿಮಿಷ ಬ್ರೇಕ್ ಅವಧಿಯಾಗಿರುತ್ತದೆ. ಈ 20 ನಿಮಿಷದಲ್ಲಿ ಬೇರೆ ವಸ್ತುಗಳನ್ನು ನೋಡಿ, ಮಿಕ್ಕ ಸಮಯ ಕೆಲಸ ಮಾಡಿ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top