ಸಮಾಚಾರ

ಕಾರು ಖರೀದಿಸುವವರಿಗೆ ಸರ್ಕಾರದಿಂದ ಬಂಪರ್ 2.50 ಲಕ್ಷ ಆಫರ್, ಏನಿದು ಯೋಜನೆ ನೀವೇ ನೋಡಿ

ಎಲ್ಲ ದೇಶಗಳಲ್ಲಿ ಪೆಟ್ರೋಲ್ ಹಾಗು ಡೀಸೆಲ್ ವಾಹನಗಳ ಹೊಗೆಯಿಂದ ಪರವಾದ ವಾಯು ಮಾಲಿನ್ಯ ಉಂಟಾಗುತ್ತಿದೆ. ಇದು ಅರೋಗ್ಯ ಸಮಸ್ಯೆಗೂ ಎಡೆಮಾಡಿಕೊಡುತ್ತಿದೆ. ಇದರಿಂದ ಎಲ್ಲ ದೇಶಗಳು ಪೆಟ್ರೋಲ್ ಹಾಗೂ ಡಿಸೆಲ್ ಕಾರುಗಳನ್ನ ಬದಿಗಿಟ್ಟು ಎಲೆಕ್ಟ್ರಿಕಲ್ ಕಾರು ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಭಾರತದಲ್ಲಿ ಎಲೆಕ್ಟ್ರಿಕಲ್ ಕಾರುಗಳನ್ನ ಜನಸಾಮಾನ್ಯರಿಗೆ ತಲುಪಿಸಲು ಪ್ರಧಾನಿ ನರೇಂದ್ರ ಮೋದಿ ರವರು ಸರ್ಕಾರ ಬಂಪರ್ ಆಫರ್ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಭಾರತದಲ್ಲಿ ಎಲೆಕ್ಟ್ರಿಕಲ್ ಕಾರುಗಳ ಉತ್ಪಾದನೆ ಮತ್ತು ಮಾರಾಟವನ್ನ ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಕಾರಿನ ಬ್ಯಾಟರಿಗೆ ಜಿಎಸ್‌ಟಿ ತೆರಿಗೆ ಕೂಡ ಕಡಿಮೆ ಮಾಡುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. ಇದಲ್ಲದೆ ಇನ್ನೊಂದು ಬಂಪರ್ ಆರ್ ಕೂಡ ನೀಡುತ್ತಿದೆ ಮುಂದೆ ಓದಿ.

 

 

ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸುವ ಗ್ರಾಹಕರನ್ನು ಪ್ರೊತ್ಸಾಹಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಪ್ರತಿಯೊಂದು ಕಾರಿನ ಖರೀದಿ ಮೇಲೆ ಬರೋಬ್ಬರಿ 2.50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಜೊತೆಗೆ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕಲ್ ಕಾರಿನ ಚಾರ್ಜಿಂಗ್ ಸ್ಟೇಶನ್‌ಗಳನ್ನ ಹೆಚ್ಚಳ ಮಾಡಲು ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಬರೋಬ್ಬರಿ 9000 ಕೋಟಿ ರೂಪಾಯಿ ಮೀಸಲಿಡಲಿದೆ ಎಂದು ತಿಳಿದು ಬಂದಿದೆ.

ಮುಂಬರುವ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಯುವ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ಯೋಜನೆಗಳನ್ನ ಜಾರಿ ಮಾಡಲಿದ್ದಾರೆ. ಈ ಮೂಲಕ ಮಂಬರೋ ದಿನಗಳಲ್ಲಿ ಭಾರತದಲ್ಲಿ ಪೆಟ್ರೋಲ್ ಮತ್ತು ಡಿಸೆಲ್ ಕಾರಿನ ಪ್ರಮಾಣ ತಗ್ಗಿಸಲು ಮೋದಿ ಸಿದ್ಧತೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ ಇದರೊಂದಿಗೆ ಪರಿಸರ ಮಾಲಿನ್ಯ ತಡೆಗಟ್ಟಲು ಮಹತ್ವದ ಯೋಜನೆಗೆ ಕೈಹಾಕಿದ್ದಾರೆ ಎನ್ನಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top