fbpx
ಸಮಾಚಾರ

ಮುಗಿಯದ ಕಾಸ್ಟಿಂಗ್ ಕೌಚ್ ರಾಮಾಯಣ!ಈ ಸಲ ಈ ಗಾಳಿ ಬಿಸಿದು ಬಿಗ್ ಬಾಸ್ ನ ಈ ಸ್ಪರ್ಧಿ ಮೇಲೆ.ಯಾರ್ ಆ ಸ್ಪರ್ಧಿ ,ಏನ್ ಇದು ಕಥೆ ,ನೀವೇ ನೋಡಿ.

ಸಿನಿಮಾಗಳಲ್ಲಿ ನಟಿಸಲು ಅವಕಾಶ ಕೊಡುವ ಆಮಿಷವೊಡ್ಡಿ ನಟಿಯರನ್ನು ಮಂಚಕ್ಕೆ ಆಹ್ವಾನಿಸುವ ಕಾಯಿಲೆ ಎಲ್ಲ ಚಿತ್ರರಂಗಗಳಿಗೂ ಸಾಂಕ್ರಾಮಿಕವಾಗಿ ಹರಡಿರೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಇಂಥ ಕಾಸ್ಟ್ ಕೌಚಿಂಗ್‌ನ ಸರಣಿ ಇದೀಗ ಎಲ್ಲೆಲ್ಲಿಯೋ ಬಿಚ್ಚಿಕೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ದೇಶವ್ಯಾಪಿ ಭಾರಿ ಚರ್ಚೆಯನ್ನು ಹುಟ್ಟುಹಾಕಿರುವ ಇಂತಹ ಅನಿಷ್ಟ ಪಿಡುಗಿನ ವಿರುದ್ಧ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಭಾಷೆಯ ಪ್ರಸಿದ್ಧ ಯುವ ನಟಿಯರನೇಕರು ತಾವೇ ಅನುಭವಿಸಿದ್ದ ಕಾಸ್ಟಿಂಗ್ ಕೌಚ್ ಮನೋ ವ್ಯಾಕುಲವನ್ನು ಸಾಂದರ್ಭಿಕವಾಗಿ ಬಿಚ್ಚಿಡುತ್ತಿದ್ದಾರೆ.

ಬಿಗ್​ಬಾಸ್​ ಖ್ಯಾತಿಯ ಜಯಶ್ರೀ ಗೂ ಕಾಡಿತ್ತಾ ಕಾಸ್ಟಿಂಗ್​ ಕೌಚ್? ಇತ್ತೀಚಿಗೆ ಜಯಶ್ರೀ ಸಿನೆಮಾದಲ್ಲೂ ಅಭಿನಯ ಮಾಡಲು ಸಜ್ಜಾಗಿದ್ದರು. ಆದರೆ ಈಗ ಆ ಸಿನೆಮಾದಲ್ಲಿ ಜಯಶ್ರೀ ಜಾಗದಲ್ಲಿ ಬೇರೆ ನಟಿಯನ್ನು ತಂದು ಕೂರಿಸಿದ್ದಾರೆ. ಅಸಲಿಗೆ ಈ ನಿರ್ದೇಶಕ ಕೊಟ್ಟ ಕಾರಣವೇನು? ಮುಂದೆ ಓದಿ.

 

 

 

ನಿರ್ದೇಶಕ ಜಯಶ್ರೀ ರವರ ಸಿನಿಮಾದ ಫಸ್ಟ್​ ಶೂಟ್​ ಆದ ಮೇಲೆ ರಾತ್ರಿ ಸುಮಾರು 10:40 ಕ್ಕೆ ಕಾಲ್​ ಮಾಡಿ ಪರ್ಫಾಮೆನ್ಸ್​ ವಿಡಿಯೋ ಸೆಂಡ್ ಮಾಡುವುದಕ್ಕೆ ಹೇಳಿದ್ದಾರೆ. ಆದರೆ ಜಯಶ್ರೀಗೆ ಆ ಹೊತ್ತಲ್ಲಿ ವಿಡಿಯೋ ಕಳುಹಿಸಲು ಸಾಧ್ಯ ಆಗಿಲ್ಲ. ಇದೆ ಕಾರಣ ಇಟ್ಟುಕೊಂಡು ಜಯಶ್ರೀಯನ್ನು ಸಿನೆಮಾದಿಂದ ಕೈಬಿಡಲಾಗಿದೆ ಎನ್ನಲಾಗಿದೆ. ಆದರೆ ವಿಡಿಯೋ ಒಂದು ನೆಪ ಅಷ್ಟೇ ಇದರ ಹಿಂದಿನ ಕರಾಳ ಸತ್ಯ ಬೇರೆ ಇದೆ.

ನಿರ್ದೇಶಕ ಮೊದಲ ಭೇಟಿಯಲ್ಲೇ ಜಯಶ್ರೀಯನ್ನು ಒಪ್ಪಿದ್ದರು ಬಳಿಕ 2 ದಿನ ಶೂಟಿಂಗ್ ಕೂಡ ನಡೆದಿತ್ತು. ಆದರೆ ನಿರ್ದೇಶಕ ನಿರ್ದೇಶಕ ಸಿನಿಮಾ ಬಗ್ಗೆ ಮಾತನಾಡಲು ಡ್ರಿಂಕ್ಸ್​ಗೆ ಕರೆದಿದ್ದಾರೆ, ಪಾರ್ಟಿಗೆ, ಲಾಂಗ್​ ಡ್ರೈವ್ ಹೋಗೋಣ ಎಂದಿದ್ದರಂತೆ ಆದರೆ ಜಯಶ್ರೀ ಇದಕ್ಕೆಲ್ಲ ಒಪ್ಪಿಲ್ಲ ಎನ್ನಲಾಗಿದೆ. ಒಬ್ಬೊಬ್ಬ ವ್ಯಕ್ತಿಗಳು ಕಾಸ್ಟಿಂಗ್​ ಕೌಚ್​ಗೆ ಬೇರೆ ರೀತಿಯಲ್ಲಿ ಅಪ್ರೋಚ್​ ಮಾಡ್ತಾರೆ. ಆದರೆ ಜಯಶ್ರೀ ನಿರ್ದೇಶಕರ ಜೊತೆ ಪಾರ್ಟಿ, ಲಾಂಗ್​ ಡ್ರೈವ್, ಡ್ರಿಂಕ್ಸ್ ಮಾಡದೇ ಇದ್ದದ್ದಕ್ಕೆ ಅವಕಾಶ ಕಳೆದುಕೊಳ್ಳಬೇಕಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top