ಸಮಾಚಾರ

ಜಿಯೋ ಗಿಗಾ TV ಆಫರ್ ಕೇಳಿ ಗಡಗಡ ನಡುಗಿದ DTH ಕಂಪನಿಗಳು

ಟೆಲಿಕಾಂ ಲೋಕದಲ್ಲೇ ಹೊಸ ಅಲೆಯನ್ನು ಸೃಷ್ಟಿ ಮಾಡಿ ದರ ಸಮರ ಏರ್ಪಾಡು ಮಾಡಿ, ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಡೇಟಾ, ವಾಯ್ಸ್ ಕಾಲ್ ಹಾಗು ಮೆಸ್ಸೇಜ್ ಸಿಗುವ ಹಾಗೇ ಮಾಡಿದ ಕೀರ್ತಿ ಮುಖೇಶ್ ಅಂಬಾನಿ ಅವರ ಜಿಯೋ ಗೆ ಸಲ್ಲುತ್ತದೆ. ಒಂದು ಜಿಬಿ ಮೊಬೈಲ್ ಡೇಟಾ ಪಡೆಯಲು ಸರಿಸುಮಾರು ಎರಡು ನೂರು ರೂಪಾಯಿ ಪಾವತಿ ಮಾಡುವ ಕಾಲ ಹೋಗಿ ಈಗ ಹತ್ತು ರೂಪಾಯಿಗೂ ಕಡಿಮೆ ದರದಲ್ಲಿ ಒಂದು ಜಿಬಿ ಡೇಟಾ ಸಿಗುವುದರ ಜೊತೆಗೆ ಉಚಿತ ಮೆಸೇಜ್, ವಾಯ್ಸ್ ಕಾಲ್ ಕೂಡ ಸಿಗುತ್ತಿದೆ.

ಈಗ ಜಿಯೋ ಸ್ಥಿರ ಬ್ರಾಂಡ್‍ಬ್ಯಾಂಡ್ ಇಂಟರ್ನೆಟ್ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದೆ. ಜಿಯೋ ಗಿಗಾ ಫೈಬರ್ ಮೂಲಕ ಸ್ಥಿರ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸೇವಾಕ್ಷೇತ್ರಕ್ಕೂ ಕಾಲಿಡುವ ಮೂಲಕ ಮತ್ತೊಮ್ಮೆ ತನ್ನ ಆರ್ಭಟ ಮುಂದುವರಿಸಲು ತಯಾರಾಗಿದೆ ಎಂದು ತಿಳಿದು ಬಂದಿದೆ.

 

 

 

 

ಮಾಧ್ಯಮಕ್ಕೆ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು, ಆಗಸ್ಟ್ 15 ರಂದು `ಜಿಯೋ ಗಿಗಾ ಫೈಬರ್’ ಸೇವೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಯೋಜಿತ ಫೈಬರ್ ಬ್ರಾಂಡ್‍ಬ್ಯಾಂಡ್ ವ್ಯವಸ್ಥೆ ಅತ್ಯಾಧುನಿಕವಾಗಿರಲಿದೆ ಎಂದು ಈ ವೇಳೆ ಹೇಳಿದ್ದಾರೆ. ಈಗಾಗಲೇ ಜಿಯೋ ತನ್ನ 22 ತಿಂಗಳುಗಳ ಅವಧಿಯಲ್ಲಿ ಭಾರತದ ಸುಮಾರು 21.5 ಕೋಟಿ ಗ್ರಾಹಕರನ್ನು ಸಂಪಾದಿಸಿದೆ. ಈ ಮೂಲಕ ಬ್ರಾಂಡ್‍ಬ್ಯಾಂಡ್ ಕ್ಷೇತ್ರದಲ್ಲಿ ಸದ್ದು ಮಾಡಲು ಸಜ್ಜಾಗಿದೆ, ಈಗ ಮನೆಗಳಿಗೆ ಭಾರತಿ ಏರ್‍ಟೆಲ್, ಟಾಟಾ ಡೊಕೊಮೊ ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಸೇವೆ ಒದಗಿಸುತ್ತಿರುವ ಕಂಪೆನಿಗಳಗೆ ಭಾರೀ ಪೈಪೋಟಿ ನೀಡಲು ಸಿದ್ಧವಾಗಿದೆ.

 

ಕೇವಲ ಜಿಯೋ ಗಿಗಾ ಫೈಬರ್ ಸೇವೆಯನ್ನು ಪಡೆದರೆ ಸಾಕು. ಇದರ ಜೊತೆಯಲ್ಲೇ ಜಿಯೋ ಗಿಗಾ TV ಸೇವೆ ಸಹಿತ ಉಚಿತವಾಗಿ ದೊರೆಯಲಿದೆ. ಇದಕ್ಕಾಗಿ ಮೊದಲು ನೀವು ಜಿಯೋ ಆಪ್ ಇಲ್ಲವೇ ಜಿಯೋ ವೆಬ್‌ ಸೈಟಿನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಇಲ್ಲಿ ಮಾಡಿಕೊಂಡರೆ ಮಾತ್ರವೇ ಲಾಭ ದೊರೆಯಲಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top