ಹೆಚ್ಚಿನ

ಪತಿರಾಯನ ಗುಂಡೇಟಿಗೆ ಬಲಿಯಾದ ಖ್ಯಾತ ನಟಿ ಕಮ್ ಗಾಯಕಿ.

ಪತಿಯ ಗುಂಡೇಟಿಗೆ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಬಲಿಯಾದ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ನಡೆದಿದೆ.ಪಾಕಿಸ್ತಾನದಲ್ಲಿ ಹೊಸ ಪ್ರಧಾನಿ ಇಮ್ರಾನ್​ ಖಾನ್​ ಆಯ್ಕೆ ಆಗಿ ಕೆಲವೇ ದಿನಗಳಾಗಿವೆ ಅಷ್ಟೆ. ಆದರೆ ಅದಾಗಲೇ ಗೃಹಸಂಬಂಧ ಕೃತ್ಯವೊಂದು ಬೆಳಕಿಗೆ ಬಂದಿದೆ. ಪ್ರಖ್ಯಾತ ನಟಿ ಗಾಯಕಿ ರೇಶ್ಮಾ ಅವರ ಮೇಲೆ ಪತಿಯೇ ಗುಂಡಿನದಾಳಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ .

 

 

 

ನೌಶೇರಾ ಕಲಾನ್ ನಗರದ ನಿವಾಸಿಯಾಗಿದ್ದರು ರೇಷ್ಮಾ ಆಕೆಯ ಪತಿಯ ನಾಲ್ಕನೇ ಪತ್ನಿಯಾಗಿದಳು .ರೇಷ್ಮಾ ಹಾಗೂ ಪತಿಯ ನಡುವೆ ಮೈಮನಸ್ಸು ಉಂಟಾಗಿತ್ತು. ಈ ಕಾರಣದಿಂದಾಗಿ ರೇಷ್ಮಾ ತನ್ನ ಸಹೋದರನ ಜೊತೆ ಹಾಕಿಮ್‍ಬಾದ್‍ನಲ್ಲಿರುವ ಆಕೆಯ ತಮ್ಮನ ಮನೆಯಲ್ಲೇ ವಾಸಿಸುತ್ತಿದ್ದಳು.ರೇಷ್ಮಾ ಒಬ್ಬಳೆ ಮನೆಯಲ್ಲಿದ್ದ ಸಂದರ್ಭದಲ್ಲಿ ತಡರಾತ್ರಿ ಬಂದ ಪತಿ ಏಕಾಏಕಿ ಆಕೆಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ.

ಈ ಹಿಂದೆಯೂ ಸಾಕಷ್ಟು ಬಾರಿ ರೇಷ್ಮಾ ಮೇಲೆ ಗಂಡ ದೈಹಿಕ ಹಲ್ಲೆ ನಡೆಸಿದ್ದನೆಂದು ತಿಳಿದು ಬಂದಿದೆ. ಆದರೆ ಈ ಬಾರಿ ಆಕೆಯನ್ನು ಕೊಲೆಯೇ ಮಾಡಿದ್ದಾನೆ.ಅಲ್ಲದೇ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ.ಪೊಲೀಸರ ಪ್ರಕಾರ ಹತ್ಯೆ ಮಾಡಲು ಆತನಿಗಿದ್ದ ಬಹು ಪತ್ನಿತ್ವ ಸಂಬಂಧವೇ ಕಾರಣವಾಗಿತ್ತು. ಈ ವಿಚಾರವಾಗಿ ಮನೆಯಲ್ಲಿ ರೇಷ್ಮಾ ದಂಪತಿಯ ನಡುವೆ ಆಗಾಗ್ಗ ಜಗಳಗಳು ನಡೆಯುತ್ತಿದ್ದು, ರೇಶ್ಮಾ​ ಮೇಲೆ ಪತಿ ಮಾರಣಾಂತಿಕ ಹಲ್ಲೆ ಕೂಡ ಮಾಡಿದ್ದನೆಂದು ತನಿಖೆಯಿಂದ ತಿಳಿದು ಬಂದಿದೆ.

ರೇಷ್ಮಾ ‘ಪಾಶ್ತೋ’ ಹಾಡಿನಿಂದ ಹೆಚ್ಚು ಜನಪ್ರಿಯಗೊಂಡಿದ್ದು, ‘ಜೋಬಲ್ ಗೋಲುನಾ’ ಚಿತ್ರದಲ್ಲಿ ನಟಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top