fbpx
ದೇವರು

ನೇಗಿಲಿಗೆ ಸಿಕ್ಕಿ ಹಾಕಿಕೊಂಡು ನದಿಯ ದಂಡೆಯ ಮೇಲೆ ಪ್ರತಿಷ್ಠಾಪಿಸಲ್ಪಟ ಈ ದೇವರ ಮಹಿಮೆ ಹಾಗೂ ಪವಾಡಗಳ ಬಗ್ಗೆ ಗೊತ್ತಾದ್ರೆ ,ಖಂಡಿತಾ ಈ ದೇವಸ್ಥಾನಕ್ಕೆ ಒಂದ್ಸಲ ಹೋಗ್ತೀರಾ.

ಪಾವಾಗಡದ ನಾಗಲ ಮಡಿಕೆ ಗ್ರಾಮದಲ್ಲಿದೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸುಬ್ರಹ್ಮಣ್ಯ ಸ್ವಾಮಿ .
ಉತ್ತರ ಪಿನಾಕಿನಿ ನದಿಯ ದಂಡೆಯ ಮೇಲಿರುವ ಸುಬ್ರಹ್ಮಣ್ಯೇಶ್ವರನ ಸುಕ್ಷೇತ್ರ ನಾಗಲಮಡಿಕೆ ಪಾವಗಡದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ.ನೆರೆ ರಾಜ್ಯ ಆಂಧ್ರದ ಗಡಿಗೆ ನಾಲ್ಕು ಕಿಲೋಮೀಟರ್ ಹತ್ತಿರದಲ್ಲಿದೆ ನಾಗಲ ಮಡಿಕೆ. ಇಲ್ಲಿನ ಸುಬ್ರಮಣ್ಯೇಶ್ವರ ದೇವಸ್ಥಾನ ಪುರಾತನವಾಗಿದ್ದು, ನಿತ್ಯವೂ ಸಹಸ್ರಾರು ಭಕ್ತರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಸ್ಥಳ ಪುರಾಣದ ಪ್ರಕಾರ ಸುಮಾರು 400 ವರ್ಷಗಳ ಹಿಂದೆ ಈ ಕ್ಷೇತ್ರದ ಮೂಲ ಪುರುಷರಾದ ಅಣ್ಣಮ್ ಬಟ್ಟರವರಿಂದ ಸುಬ್ರಹ್ಮಣ್ಯೇಶ್ವರ ಸ್ವಾಮಿ ಉತ್ತರ ಪಿನಾಕಿನಿ ನದಿಯ ದಂಡೆಯ ಮೇಲೆ ಪ್ರತಿಷ್ಠಾಪಿಸಲ್ಪಟ್ಟಿದೆ.
ಭಟ್ಟರ ಕನಸಿನಲ್ಲಿ ಉತ್ತರ ಪಿನಾಕಿನಿ ನದಿಯ ದಡದಲ್ಲಿ ಸುಬ್ರಮಣ್ಯನ ವಿಗ್ರಹ ಕಂಡಂತಾಗಿ ,ಮರಳಿನ ದಂಡೆಯಲ್ಲಿ ಉಳುಮೆ ಮಾಡುತ್ತಿದ್ದಾಗ ನೇಗಿಲಿಗೆ ಸಿಕ್ಕಿ ಹಾಕಿಕೊಂಡು ತೆಗೆಯಲ್ಪಟ್ಟಿದೆ ಎಂದು ಹಾಗಾಗಿ ಅಂದಿನಿಂದಲೂ ಆ ಸ್ಥಳವನ್ನು ತೆಲುಗಿನಲ್ಲಿ ನೇಗಿಲಿಗೆ ಸಿಕ್ಕಿದ ನಾಗರ ವಿಗ್ರಹ ಅಂದರೆ ತೆಲುಗಿನಲ್ಲಿ “ನಾಗಲಮಡಿಕ” ಎಂದು ಕರೆಯುವುದು ರೂಢಿಯಲ್ಲಿ ಬಂದಿದೆ. ಕ್ರಮೇಣ ಅದು ಜನರ ಬಾಯಲ್ಲಿ ನಾಗಲಮಡಿಕೆ ಎಂದಾಯಿತು.

 

 

ಸುಬ್ರಹ್ಮಣ್ಯ ಸ್ವಾಮಿಯ ಮೂಲ ವಿಗ್ರಹ ಕಪ್ಪು ಶಿಲೆಯದಾಗಿತ್ತು. ಸುಮಾರು ಎರಡು ಮುಕ್ಕಾಲು ಅಡಿ ಎತ್ತರವಿದೆ. ವಿಶೇಷವಾಗಿ ಏಳು ಹೆಡೆಗಳ ಸರ್ಪಾಕಾರದಿಂದ ಕೂಡಿದ್ದು , ಶರೀರ ಆಸನ ಶಿಲೆಯ ಮೇಲೆ ಮೂರು ಸುತ್ತು ಸುತ್ತು ಕೊಂಡಿದೆ. ಈ ಕ್ಷೇತ್ರದಲ್ಲಿ ಪ್ರತಿ ನಿತ್ಯವೂ ಸೂರ್ಯೋದಯದ ಕಾಲದಲ್ಲಿ ಪಂಚಾಮೃತ ಅಭಿಷೇಕ ಹಾಗೂ ಸರ್ಪ ಪೂಜೆಗಳು ನಡೆಯುತ್ತವೆ .
ಪ್ರತಿವರ್ಷ ಅಣ್ಣಮ್ ಭಟ್ಟರು ಎಂಬ ಮೂಲ ಪುರುಷರು ಪ್ರತಿ ವರ್ಷವೂ ಸಹ ಇಲ್ಲಿಂದ ಕುಕ್ಕೆಗೆ ಪ್ರಯಾಣ ಮಾಡಿ ಸುಮಾರು ಮೂರು ತಿಂಗಳ ಕಾಲ ಪ್ರಯಾಣವನ್ನು ಮಾಡಿದ ನಂತರ ಕುಕ್ಕೆಯಲ್ಲಿ ಸೇರಿ ಅಲ್ಲಿ ಸುಬ್ರಮಣ್ಯೇಶ್ವರ ಸ್ವಾಮಿಯ ಆರಾಧನೆಯನ್ನು ಮಾಡುತ್ತಿದ್ದರು. ಬಹಳ ವರ್ಷಗಳು ಈ ರೀತಿ ಆರಾಧನೆ ಮಾಡಿದ ನಂತರ ಸ್ವಾಮಿಯು ಒಮ್ಮೆ ಅವರಿಗೆ ಕುಕ್ಕೆಯನ್ನು ತಲುಪಲು ಒಂದು ವರ್ಷ ಸಾಧ್ಯವಾಗಲಿಲ್ಲ.
ದಾರಿಯಲ್ಲಿ ಒಂದು ಮರದ ಕೆಳಗೆ ಯೋಚಿಸುತ್ತಾ ಕುಳಿತುಕೊಂಡಿದ್ದರೂ , ಆ ಸಂದರ್ಭದಲ್ಲಿ ಕುಕ್ಕೆಯಲ್ಲಿ ರಥೋತ್ಸವ ನಡೆಯುತ್ತಿತ್ತು. ಎಷ್ಟೇ ಪ್ರಯತ್ನಪಟ್ಟರೂ ಕೂಡ ಕುಕ್ಕೆಯಲ್ಲಿ ರಥೋತ್ಸವ ನೆಡೆಸಲು ಸಾಧ್ಯವಾಗಲಿಲ್ಲ . ಒಂದು ಅಶರೀರವಾಣಿ ಈ ರೀತಿ ಹೇಳಿತು. ಅಣತಿ ದೂರದಲ್ಲಿ ಇರುವಂತಹ ಒಂದು ವೃಕ್ಷದ ಕೆಳಗೆ ಬ್ರಾಹ್ಮಣ ವೃದ್ಧ ದಂಪತಿಗಳು ಕುಳಿತಿದ್ದಾರೆ. ಅವರನ್ನು ಕರೆದುಕೊಂಡು ಬಂದು ಇಲ್ಲಿ ಪೂಜಾ ಕೈಂಕರ್ಯಗಳನ್ನು ನಡೆಸಿ ಎಂದು ಅಶರೀರವಾಣಿ ಸುಮ್ಮನಾಯಿತು. ಆ ಆಕಾಶವಾಣಿಯನ್ನು ಕೇಳಿದ ನಂತರ ಈ ವೃದ್ಧ ದಂಪತಿಗಳ ಸಮೀಪಕ್ಕೆ ಬಂದು ಅವರನ್ನು ತಾಳ ಮೇಳಗಳಿಂದ ಕುಕ್ಕೆಗೆ ಕರೆದುಕೊಂಡು ಹೋಗಿ , ಅಲ್ಲಿ ರಥೋತ್ಸವವನ್ನು ನೆರವೇರಿಸಿದರು.

ಆ ಸಂದರ್ಭದಲ್ಲಿ ವೃದ್ಧ ದಂಪತಿಗಳಿಗೆ ಒಂದು ಅಶರೀರವಾಣಿ ಕೇಳಿಸಿತು. ನೀವು ಇನ್ನು ಮುಂದೆ ಕುಕ್ಕೆಗೆ ಬರಬೇಕಾಗಿಲ್ಲ. ನಿಮ್ಮ ಊರಿನಲ್ಲಿ ನಾನು ನೆಲೆಸುತ್ತೇನೆ ಎಂದು ಹೇಳಿತು . ಅಲ್ಲಿಯೇ ನಿಮಗೆ ಪೂಜೆಗೆ ಅನುಕೂಲವಾಗುತ್ತದೆ ಎಂದು ಹೇಳಿತು. ಒಂದು ಪೂಜೆಗೋಸ್ಕರ ಒಂದು ಉತ್ಸವ ಮೂರ್ತಿಯನ್ನು ಕುಕ್ಕೆಯಿಂದ ಇಲ್ಲಿಗೆ ನೀಡಲಾಗಿದೆ. ಅಲ್ಲಿಂದ ಅವರು ಪ್ರಯಾಣ ಮಾಡಿ, ನಾಗಲಮಡಿಕೆ ಗ್ರಾಮಕ್ಕೆ ಬಂದು ಸೇರಿದಾಗ, ಇಲ್ಲಿ ತಾಶೀಲ್ದಾರ್ ಅವರಿಗೆ ಕನಸಿನಲ್ಲಿ ಬಂದು ಪಿನಾಕಿನಿ ನದಿಯ ದಡದಲ್ಲಿ ಉಳುಮೆ ಮಾಡಿ ನಾನು ದೊರೆಯುತ್ತೇನೆ ಎಂದು ಸ್ವಪ್ನವಾಯಿತು.

ಅದೇ ಪ್ರಕಾರವಾಗಿ ತಾಶೀಲ್ದಾರ ಅವರು ಮಡಿಕೆಗಳನ್ನು ಕಟ್ಟಿಸಿ, ಉಳುಮೆ ಮಾಡಿದಾಗ ಇಲ್ಲಿ ಪ್ರತಿಷ್ಠೆ ಮಾಡಿರುವಂತಹ ಮೂರು ಅಡಿ, ನಾಲ್ಕು ಅಂಗುಲ ಎತ್ತರವಿರುವ,7 ಎಡೆಯುಳ್ಳ ಒಂದು ಸರ್ಪಾಕಾರದ ಸ್ವಾಮಿ ದೊರೆಯಿತು.ಅದನ್ನು ವೃದ್ಧ ದಂಪತಿಗಳು ಇಟ್ಟುಕೊಂಡು ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾರೆ ಬಂದಿದ್ದಾರೆ. ಆನಂತರ ಇಲ್ಲಿಯೇ ಸಮೀಪದಲ್ಲಿ ಇರುವಂತಹ ಲೋಡ್ಡಮ್ ಎಂಬ ಗ್ರಾಮದಿಂದ ಒಂದು ವ್ಯಾಪಾರ ಮಾಡಲು ಈ ಗ್ರಾಮಕ್ಕೆ ಬಳ್ಳಾರಿ ಇಂದ ಬರುತ್ತಿದ್ದರು. ಅವರಿಗೆ ಈ ಸ್ವಾಮಿಯ ಕೃಪೆಯಿಂದ ಅಪಾರವಾದ ಸಂಪತ್ತು ,ಐಶ್ವರ್ಯ ಲಭಿಸಿತ್ತು.

ಆದ್ದರಿಂದ ಅವರು ಆ ಐಶ್ವರ್ಯದಿಂದ ,ಸುಮಾರು 18 ಎಕರೆ ಜಮೀನನ್ನು ಕೊಂಡುಕೊಂಡು ಒಂದು ದೇವಾಲಯವನ್ನು ಸ್ವಾಮಿಗೆ ಕಟ್ಟಿಸಿದ್ದಾರೆ. ಅಂದಿನಿಂದ ಇಂದಿನವರೆಗೆ ಅವರು ಸ್ವಾಮಿಯ ಸೇವೆಯನ್ನು ನೆರವೇರಿಸುತ್ತಾ ಬಂದಿದ್ದಾರೆ . ಸ್ವಾಮಿ ಅವರಿಗೆ ಅನೇಕ ರೀತಿಯ ಐಶ್ವರ್ಯ, ಸಂಪತ್ತನ್ನು ಕರುಣಿಸಿದ್ದರಿಂದ ಅವರು ಬಳ್ಳಾರಿಯನ್ನು ತಲುಪಿ ಈಗ ಬಳ್ಳಾರಿಯಲ್ಲಿ ಮನೆಗಳನ್ನು ಕಟ್ಟಿಸಿ ಅದರಿಂದ ಬರುವ ಆದಾಯದಿಂದ ಪ್ರತಿ ವರ್ಷವೂ ಕೂಡ ರಥೋತ್ಸವ ಹಾಗೂ ಸುಬ್ರಹ್ಮಣ್ಯನಿಗೆ ಸಮಾರಾಧನೆಯನ್ನು ನಡೆಸುತ್ತ ಬಂದಿದ್ದಾರೆ. ಈ ರೀತಿಯಾಗಿ ಅವರ ಸೇವೆ ಅಮೋಘ . ಇಲ್ಲಿ ಆಣ್ಣಮ್ ಭಟ್ಟರ ವಂಶದವರು ಐದು ತಲೆಮಾರುಗಳಿಂದ ಸುಬ್ರಹ್ಮಣ್ಯಸ್ವಾಮಿಗೆ 5 ತಲೆಮಾರುಗಳಿಂದ ಪೂಜೆಗಳನ್ನು ಮಾಡುತ್ತಾ ಬಂದಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top