fbpx
ಸಮಾಚಾರ

‘ದಮಯಂತಿ’ಯಾಗಿ ಮಿಂಚಲು ರೆಡಿ ಆಗೇ ಬಿಟ್ರು ರಾಧಿಕಾ ಕುಮಾರಸ್ವಾಮಿ ,ಕಂಪ್ಲೀಟ್ ಸ್ಟೋರಿಗಾಗಿ ನೋಡಿ.

ಖ್ಯಾತ ನಟಿ ರಾಧಿಕಾ ಕುಮಾರಸ್ವಾಮಿ ರವರು ಯಾವುದೇ ಪಾತ್ರದಲ್ಲಿ ಅಭಿನಯ ಮಾಡಲು ಹಿಂದೇಟು ಹಾಕುವುದಿಲ್ಲ, ಭೈರಾದೇವಿ ಸ್ಕ್ರಿಪ್ಟ್ ನೀಡಲು ಹಲವು ನಿರ್ದೇಶಕರಿಗೆ ಸವಾಲಾಗಿತ್ತು, ಆದರೆ ನವರಸನ್ ಎಂಬ ನಿರ್ದೇಶಕರು ಮಾತ್ರ ಯಾವುದೇ ಹಿಂಜರಿಕೆಯಿಲ್ಲದೇ ಮಹಿಳಾ ಪ್ರಧಾನ ಚಿತ್ರವಾದ ದಮಯಂತಿಯಲ್ಲಿ ಅಭಿನಯಿಸಲು ರಾಧಿಕಾ ಕುಮಾರ ಸ್ವಾಮಿ ಅವರಲ್ಲಿ ಆಸಕ್ತಿ ಮೂಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿಯವರೆಗೆ ತಮ್ಮ ನಿರ್ದೇಶನದ ಚಿತ್ರಗಳಲ್ಲಿ ನಟನೆ ಮಾಡುತ್ತಿದ್ದ ನವರಸನ್, ಈ ಸಲ ಅಭಿನಯಕ್ಕೆ ಬ್ರೇಕ್ ನೀಡಿದ್ದಾರೆ. ಈ ಹೊಸ ಸಿನಿಮಾದಲ್ಲಿ ಅವರದೇನಿದ್ದರೂ ಬರೀ ಡೈರೆಕ್ಷನ್ ಮಾತ್ರ. ಜತೆಗೆ ನಿರ್ಮಾಣದ ಹೊಣೆಯನ್ನು ಕೂಡ ಹೊತ್ತಿದ್ದಾರೆ. ‘ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ನಿರ್ಮಾಣ ಆಗುತ್ತಿರುವುದು ತೀರಾ ಕಡಿಮೆ.ಆ ಮಾದರಿಯ ಚಿತ್ರಗಳಿಗೆ ಸ್ಯಾಂಡಲ್ ವುಡ್ ನಲ್ಲಿ ಪ್ರಾಮುಖ್ಯತೆ ಕೂಡ ಕಡಿಮೆ, ಆದರೆ, ದೊಡ್ಡ ಬಜೆಟ್​ನಲ್ಲಿ ಈ ಚಿತ್ರ ಮಾಡುವುದಕ್ಕೆ ಪ್ಲಾನ್ ಮಾಡಿದ್ದಾರೆ. ರಾಧಿಕಾ ಮುಖ್ಯಭೂಮಿಕೆಯಲ್ಲಿರುತ್ತಾರೆ. ಜೊತೆಗೆ ತಬಲಾ ನಾಣಿ, ವಿಜಯ್ ಚೆಂಡೂರ್ ಸೇರಿ ಅನೇಕ ಹಾಸ್ಯ ಕಲಾವಿದರು ಪೋಷಕ ಪಾತ್ರಗಳಲ್ಲಿ ಅಭಿನಯ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

 

 

ಸಿನಿಮಾ ಟೈಟಲ್ ಭಾರೀ ಕುತೂಹಲ ಮೂಡಿಸಿದ್ದು, ಟೈಟಲ್ ಇನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಬೇಕಿದೆ, ಅಧಿಕೃತವಾಗಿ ಪ್ರಕಟ ಮಾಡುವ ಮುನ್ನ ವಾಣಿಜ್ಯ ಮಂಡಳಿ ಅನುಮೋದನೆಗಾಗಿ ನಿರ್ದೇಶಕರು ಕಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಟಾಲಿವುಡ್ ನಲ್ಲಿ ಬಿಡುಗಡೆ ಆಗಿದ್ದ ‘ಭಾಗಮತಿ’ ಹಾಗೂ ‘ಅರುಂಧತಿ’ ಸಿನಿಮಾ ಶೈಲಿಯಲ್ಲಿ ‘ದಮಯಂತಿ’ ಚಿತ್ರ ಕೂಡ ಇರಲಿದ್ದು ಮೊದಲಿಗೆ ಕನ್ನಡದಲ್ಲಿ ಚಿತ್ರೀಕರಣ ಮಾಡಿ ನಂತರ ತೆಲುಗು ತಮಿಳಿನಲ್ಲಿಯೂ ಸಿನಿಮಾ ಇದೇ ಚಿತ್ರವನ್ನು ಮಾಡುವ ಆಲೋಚನೆ ಇದೆ ಎಂದು ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top