ಸಮಾಚಾರ

ಅಮೆಜಾನ್ ನಲ್ಲಿ ಫ್ರೀಯಾಗಿ 166 ಮೊಬೈಲ್ ಆರ್ಡರ್ ಮಾಡಿದ ಭೂಪ, ತಿಳ್ಕೊಂಡು ನೀವು ಟ್ರೈ ಮಾಡಬೇಡಿ

ದೀಪಾವಳಿ ಸೇರಿದಂತೆ ಅನೇಕ ಹಬ್ಬಗಳ ಸಾಲಿನಲ್ಲಿ ಗ್ರಾಹಕರನ್ನು ಸೆಳೆಯಲು ಅತ್ಯಾಕರ್ಷಕ ಆಫರ್ ​ಗಳನ್ನು ನೀಡುವ ಅಮೆಜಾನ್​ ಕಂಪನಿಗೆ ಇಲ್ಲೊಬ್ಬ ಯುವಕ ಖುದ್ದು ತಾನೇ ಆಫರ್​ ನೀಡಿಬಿಟ್ಟಿದ್ದಾನೆ. ಇದೆನಪ್ಪಾ ಅಮೆಜಾನ್​ಗೆ ಆಫರ್​ ನೀಡುವಷ್ಟು ಶ್ರೀಮಂತನ ಆ ಯುವಕ ಎಂದು ಹುಬ್ಬೇರಿಸಿಬೇಡಿ! ಏಕೆಂದರೆ ಈ ಯುವಕ ನೀಡಿರುವ ಆಫರ್ ಅಮೆಜಾನ್​ ಕೋಪ ನೆತ್ತಿಗೇರುವಂತೆ ಮಾಡಿಬಿಟ್ಟಿದೆ. ಮುಂದೆ ಓದಿ

ದೆಹಲಿ ರಾಜ್ಯದ 21 ವರ್ಷ ವಯಸ್ಸಿನ ಯುವಕ ಯುವಕನೊಬ್ಬ ಬರೋಬ್ಬರಿ 166 ಬೆಲೆ ಬಾಳುವ ಮೊಬೈಲ್​ಗಳನ್ನು ಖರೀದಿ ಮಾಡಿ, ಈಗ ಕಂಬಿ ಎಣಿಸುತ್ತಿದ್ದಾನೆ. ಖರೀದಿ ಮಾಡಿದರೆ ತಪ್ಪೇನು ಎಂದು ನೀವು ಕೇಳಬಹುದು. ಆದರೆ ಅಸಲಿಗೆ ವಿಷಯ ಬೇರೆಯೇ ಇದೆ ಮುಂದೆ ಓದಿ.

 

 

 

ಮೊದಲು 2 ಬಾರಿ ದುಬಾರಿ ಫೋನ್ ಗಳನ್ನ ಅಮೆಜಾನ್ ನಲ್ಲಿ ಹಣವನ್ನ ಪಾವತಿ ಮಾಡಿ ಬುಕ್ ಮಾಡಿದ. ಡೆಲಿವೆರಿ ಬಾಯ್ ಬಂದು ಆ ಫೋನ್ ನ್ನ ಕೊಟ್ಟು ಹೋದ, ಡೆಲಿವೆರಿ ಆದ ಬಳಿಕ ಅಮೆಜಾನ್ ಗೆ ಫೋನ್ ಮಾಡಿದ ಶಿವಂ ನನಗೆ ಡೆಲಿವೆರಿ ಬಾಕ್ಸ್ ನಲ್ಲಿ ಫೋನ್ ಇರಲಿಲ್ಲ ಅದು ಖಾಲಿ ಬಾಕ್ಸ್ ಆಗಿತ್ತು ಎಂದು ಸುಳ್ಳು ಹೇಳಿದ. ಇವರ ದೂರನ್ನು ನಂಬಿ ಅಮೆಜೋನ್ ರವರು ಅದನ್ನ ತಕ್ಷಣ ವಾಪಾಸ್ ತಗೆದುಕೊಂಡರು, ಅವನಿಗೆ ಹಣ ಮರು ಪಾವತಿ ಮಾಡ್ದಿದರು. ಬಳಿಕ ಇದನ್ನೇ ಒಂದು ಕೆಲಸ ಮಾಡಿಕೊಂಡ ಶಿವಂ ಬೇರೆ ಬೇರೆ ಮೊಬೈಲ್ ಸಂಖ್ಯೆ ಬಳಸಿ 166 ಫೋನ್ ಗಳನ್ನ ಅಮೆಜಾನ್ ನಿಂದ ಪಡೆದ.

ಇದೇ ರೀತಿ 166 ಬಾರಿ ವಾಪಸ್ಸು ಮಾಡಿ ಹಣ ಪಡೆದಿದ್ದಾನೆ. ಆದರೆ ಪಾಪದ ಕೊಡ ತುಂಬಲೇ ಬೇಕಲ್ಲವೇ ಅನ್ನುವ ರೀತಿ ಕೊನೆಗೂ ಸಿಕ್ಕಿ ಬಿದ್ದ ಆತನ ಬಳಿ ಪೊಲೀಸರು 19 ಮೊಬೈಲ್​ ಪೋನ್​, 12 ಲಕ್ಷ ನಗದು ಹಾಗೂ ಸುಮಾರು 40 ಬ್ಯಾಂಕ್​ ಪಾಸ್ ​ಬುಕ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಸ್ನೇಹಿತ ಬಳಿಯಿದ್ದ 10 ಲಕ್ಷ ನಗದು ಹಣವನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಯಾರಾದರೂ ಈ ಪ್ರಯತ್ನ ಮಾಡಿದರೆ ಕಂಬಿ ಎಣಿಸೋದು ಗ್ಯಾರಂಟೀ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top