fbpx
ಹೆಚ್ಚಿನ

ಆಗಸ್ಟ್ 11ನೇ ತಾರೀಖು ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ,ಇದರಿಂದ 12 ರಾಶಿಯವರ ಮೇಲೆ ಆಗುವ ಶುಭ ಹಾಗೂ ಅಶುಭ ಫಲಗಳ ಬಗ್ಗೆ ತಿಳ್ಕೊಳ್ಳಿ

ಆಗಸ್ಟ್ 11 ನೇ ತಾರೀಖು, ಈ ವರ್ಷದ ಮೂರನೇ ಸೂರ್ಯ ಗ್ರಹಣವಾಗಿದ್ದು, ಈ ಗ್ರಹಣ ಯಾವ ರಾಶಿಗಳಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ.

ರಕ್ತ ಚಂದ್ರಗ್ರಹಣ ಕಳೆದ ಪೌರ್ಣಮಿಯ ದಿನ ಮುಗಿದಿದೆ ಮತ್ತು ಕಳೆದ ತಿಂಗಳಿನಲ್ಲಷ್ಟೇ ಎರಡು ಗ್ರಹಣ ಮುಗಿದಿವೆ. ಒಂದು ಅಮಾವಾಸ್ಯೆಯ ದಿನ ಮತ್ತೊಂದು ಪೌರ್ಣಮಿಯ ದಿನ ನೋಡಿದ್ದೇವೆ. ಮತ್ತೆ ಅದರ ನಂತರದ ಅಮಾವಾಸ್ಯೆಯ ತಿಥಿಯಲ್ಲಿ 15 ದಿನಗಳ ಅಂತರದಲ್ಲಿ ಇನ್ನೊಂದು ಸೂರ್ಯಗ್ರಹಣ ಸಂಭವಿಸಲಿದೆ. ಇದೇ ಆಗಸ್ಟ್ ತಿಂಗಳು 11ನೇ ತಾರೀಖಿನಂದು , ಶನಿವಾರ ಸೂರ್ಯಗ್ರಹಣ ಸಂಭವಿಸಲಿದೆ. ಒಂದು ತಿಂಗಳಲ್ಲಿ ಎರಡು ಗ್ರಹಣವನ್ನು ಹಿಂದಿನ ತಿಂಗಳಲ್ಲಿ ಕಂಡಿದ್ದೇವೆ.ಈಗ ಮತ್ತೊಂದು ಸೂರ್ಯಗ್ರಹಣದ ಸಮಯ.

 

 

 

ಈಗ ಮತ್ತೊಂದು ಸೂರ್ಯಗ್ರಹಣ ಸಂಭವಿಸುತ್ತಿರುವುದು ತುಂಬಾ ವಿಶೇಷವಾಗಿದೆ .ಅಗಸ್ಟ್ 11 ನೇ ತಾರೀಖು ಭಾಗಶಃ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಉತ್ತರ ಹಾಗೂ ಪೂರ್ವ ಯುರೋಪ್ ,ಉತ್ತರ ಅಮೇರಿಕಾದ ಉತ್ತರ ಭಾಗ, ಏಷ್ಯಾದ ಉತ್ತರ ಮತ್ತು ಪಶ್ಚಿಮದ ಭಾಗದಲ್ಲಿ ಇದು ಗೋಚರವಾಗಲಿದೆ.
ಈ ಸೂರ್ಯ ಗ್ರಹಣ ಅಮಾವಾಸ್ಯೆಯ ದಿನವೇ ಸಂಭವಿಸುತ್ತದೆ ಎಂದರೆ ಗ್ರಹಗತಿಗಳು ಕೂಡ ಬದಲಾವಣೆಯಾಗುತ್ತವೆ . ಆದ್ದರಿಂದ ಈ ಬಾರಿ ಸೂರ್ಯಗ್ರಹಣದ ಲಾಭವನ್ನು ಯಾವ ರಾಶಿಗಳು ಪಡೆಯಲಿದ್ದಾರೆ ಎಂಬುದನ್ನು ನೋಡೋಣ ಬನ್ನಿ .

ಶ್ರಾವಣ ಮಾಸದಲ್ಲಿ ಈ ಗ್ರಹಣ ನಡೆಯುತ್ತಿದೆ. ಇದು ಬಹಳ ವಿಶೇಷ ಮತ್ತು ಕಟಕ ರಾಶಿಯಲ್ಲಿ ಗ್ರಹಣ ಸಂಭವಿಸುತ್ತದೆ.

ಮೇಷ ರಾಶಿ .
ಈ ರಾಶಿಯವರಿಗೆ ಸೂರ್ಯ ಗ್ರಹಣ ಒಳ್ಳೆಯದನ್ನೇ ಮಾಡಲಿದೆ. ಜಾತಕದ ಪ್ರಕಾರ ಅಧಿಕ ಲಾಭವಿದೆ . ಜೀವನದಲ್ಲಿ ಬದಲಾವಣೆಗಳಿವೆ , ಸಮಾಜದಲ್ಲಿ ಗೌರವ ಸಿಗಲಿದೆ.

ಕುಂಭ ರಾಶಿ.
ಈ ರಾಶಿಯವರಿಗೆ ಕೂಡ ಗ್ರಹಣದಿಂದ ಶುಭ ಫಲವಿದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ಲಭಿಸಲಿದೆ, ನಿಮ್ಮ ಭಾಗ್ಯದ ಬಾಗಿಲು ತೆರೆಯಲಿದೆ, ನಿಮ್ಮ ಜವಾಬ್ದಾರಿಗಳನ್ನು ತುಂಬಾ ಉತ್ತಮ ನಿರ್ವಹಿಸಲಿದ್ದೀರಿ.

ತುಲಾ ರಾಶಿ.
ಈ ರಾಶಿಯವರಿಗೆ ಸರ್ಕಾರಿ ಕೆಲಸದ ಯೋಗವಿದೆ , ಪ್ರೇಮ ಸಂಬಂಧಗಳು ಖುಷಿ ನೀಡಲಿದೆ, ಅಲ್ಲದೇ ಹಣಕಾಸಿನ ವಿಚಾರದಲ್ಲಿ ನಿಮಗೆ ಗೆಲುವು ಸಿಗಲಿದೆ.

ಮಿಶ್ರ ಫಲ ಪಡೆಯುವ ರಾಶಿಗಳು ಮೀನ ರಾಶಿ, ಮಿಥುನ ರಾಶಿ, ಮಕರ ರಾಶಿ ಮತ್ತು ವೃಶ್ಚಿಕ ರಾಶಿ. ಭಾರತದಲ್ಲಿ ಈ ಗ್ರಹಣ ಗೋಚರವಾಗುವುದಿಲ್ಲ. ಮತ್ತು ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2. 29 ಗಂಟೆಗೆ ಗ್ರಹಣ ಆರಂಭವಾಗಲಿದೆ ಮತ್ತು ಮೋಕ್ಷ ಕಾಲ 3 ಗಂಟೆ 46 ನಿಮಿಷಕ್ಕೆ ಗ್ರಹಣ ಮುಕ್ತಾಯವಾಗಲಿದೆ .

 

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top