ಸಮಾಚಾರ

ಬ್ಯೂಟಿ ತಮನ್ನಾಳಿದ ಬಂತು ಕನ್ನಡ ಚಿತ್ರರಂಗ ಕುರಿತ ಈ ಟ್ವೀಟ್!ಏನ್ ಇದೆ ಆ ಟ್ವೀಟ್ನಲ್ಲಿ ನೀವೇ ನೋಡಿ

ಕನ್ನಡದ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ನಟಿಸಿರುವ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು ಇನ್ನು ಹಾಡಿನ ಚಿತ್ರೀಕರಣ ಮಾತ್ರ ಕೂಡ ಮುಗಿದಿದೆ. ದಕ್ಷಿಣ ಭಾರತದ ಖ್ಯಾತ ನಟಿ ತಮನ್ನಾ ಭಾಟಿಯಾ ಕೆಜಿಎಫ್‌ ಸೆಟ್‌ಗೆ ಬಂದಿದ್ದು, ಯಶ್‌ ಜೊತೆಯಲ್ಲಿ ಸ್ಪೆಷಲ್‌ ಹಾಡಿನಲ್ಲಿ ಡಾನ್ಸ್‌ ಮಾಡಿದ್ದಾರೆ.

ಮಿಲ್ಕಿ ಬ್ಯೂಟಿ ತಮನ್ನಾ ಡಾನ್ಸ್‌ ಸುದ್ದಿ ಕನ್ನಡ ಚಿತ್ರರಂಗದಲ್ಲಿ ಬಿಸಿ ಬಿಸಿ ಸುದ್ದಿ ಆಗಿದ್ದು, ಕೆಜಿಎಫ್‌ ಸಿನಿಮಾ ಬಗೆಗಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. 1970ರಲ್ಲಿ ಬಂದಿದ್ದ ‘ಪರೋಪಕಾರಿ’ ಸಿನಿಮಾದ ಜನಪ್ರಿಯ ಹಾಡು ‘ಜೋಕೆ.. ನಾನು ಬಳ್ಳಿಯ ಮಿಂಚು..’ ಸಾಂಗ್ ಕೆಜಿಎಫ್‌ ಸಿನಿಮಾದಲ್ಲಿ ರಿಕ್ರಿಯೇಟ್‌ ಮಾಡಲಾಗಿದೆ. ಈ ಹಾಡಿನಲ್ಲಿ ಯಶ್‌ ಜತೆ ತಮನ್ನಾ ಡಾನ್ಸ್‌ ಮಾಡಿದ್ದಾರೆ. ಅದರ ಎಕ್ಸಕ್ಲೂಸೀವ್‌ ಫೋಟೋ ಇಲ್ಲಿದೆ ನೋಡಿ.

 

 

ಈ ಬಗ್ಗೆ ತಮ್ಮನ್ನ ತ್ವಯೇತ್ ಮಾಡಿದ್ದು ಯಶ್ ಜೊತೆಗೆ ಸಿನಿಮಾದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದು ಇದು ತಮಗೆ ಅತ್ಯಂತ ಸಂತೋಷ ನೀಡಿದೆ ಎಂದು ಸಂತೋಷ್ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಕೆಜಿಎಫ್ ಸಿನಿಮಾ ಬಿಡುಗಡೆ ಆಗಾಲಿಡುದ್ ನಿಮ್ಮ ಸಮೀಪದ ಚಿತ್ರಮಂದಿರಗಳಲ್ಲಿ ನೋಡಿ ಆನಂದಿಸಿ ಎಂದು ಬರೆದಿದ್ದಾರೆ ಎನ್ನಲಾಗಿದೆ.

ನಟಿ ತಮನ್ನಾ ಈ ಮೊದಲು ನಟ ನಿಖಿಲ್ ಕುಮಾರ್ ನಟಿಸಿದ್ದ `ಜಾಗ್ವಾರ್’ ಚಿತ್ರದ ಹಾಡಿನಲ್ಲಿ ಅಭಿನಯ ಮಾಡಿದ್ದರು. ಈಗ ಯಶ್ ಜೊತೆ ಅಭಿನಯ ಮಾಡುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಎರಡನೇ ಬಾರಿಗೆ ಅಭಿನಯಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾವನ್ನು `ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top