ಸಮಾಚಾರ

ಆಕೆ ಹುಟ್ಟಿದ್ದ ಗರ್ಭದಲ್ಲೇ ತನ್ನ ಮಗುವಿಗೆ ಜನ್ಮ ನೀಡಲಿದ್ದಾಳೆ ಈ ಮಹಿಳೆ!

ಗುಜರಾತ್ ರಾಜ್ಯದ ಮಹಿಳೆ ಒಬ್ಬರು ಗರ್ಭಾಶಯ ಕಸಿ ಮೂಲಕ ಮಗುವೊಂದಕ್ಕೆ ಜನ್ಮ ನೀಡಲು ಸಿದ್ಧರಾಗಿದ್ದು, ಇದು ದೇಶದ ಮೊದಲ ಗರ್ಭಾಶಯ ಕಸಿಯ ಮೂಲಕ ಮಗುವಿಗೆ ಜನ್ಮ ನೀಡುತ್ತಿರುವ ನಿದರ್ಶನವಾಗಲಿದೆ ಎಂದು ತಿಳಿದು ಬಂದಿದೆ.

ಮೂಲತಃ ಗುಜರಾತ್ ರಾಜ್ಯದ ಭಾರುಚ್​ ಪ್ರದೇಶದ ಮಹಿಳೆ ಮೀನಾಕ್ಷಿ ವಲನಾಡ್​ ಮಹಾರಾಷ್ಟ್ರ ರಾಜ್ಯದ ಪುಣೆ ನಗರದಲ್ಲಿ ಇರುವ ಆಸ್ಪತ್ರೆಯಾದ ಗ್ಯಾಲಕ್ಷಿ ಕೇರ್ ನಲ್ಲಿ ​ ಗರ್ಭಕೋಶದ ಕಸಿ ಮಾಡಿಸಿಕೊಂಡಿದ್ದು, ಇದೀಗ 5 ತಿಂಗಳ ಗರ್ಭಿಣಿ ಆಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಆಸಕ್ತಿಕರ ವಿಷಯವೆಂದರೆ ಇವರ ತಾಯಿಯೇ ಇವರಿಗೆ ಗರ್ಭಾಶಯ ದಾನ ಮಾಡಿದ್ದಾರೆ.

 

 

ಹೌದು, ಹೋದ ವರ್ಷ ಮೇ ತಿಂಗಳಿನಲ್ಲಿ 18ರಂದು ಗರ್ಭಾಶಯ ಕಸಿ ಮಾಡಿಸಿಕೊಂಡಿದ್ದರು ಮೇ 19 ರಂದೇ ಅಂದರೆ ಮಾರನೇ ದಿನವೇ ಮಹಾರಾಷ್ಟ್ರ ಮೂಲದ ಶಿವಮ್ಮ ಚಲ್​ಗೆರಿ ಎಂಬ ಮಹಿಳೆ ಕೂಡ ಗರ್ಭಾಶಯ ಕಸಿ ಮಾಡಿಸಿಕೊಂಡಿದ್ದರು. ಈ ಎರಡೂ ಘಟನೆಗಳಲ್ಲೂ ಇವರಿಬ್ಬರಿಗೆ ಅವರ ಸ್ವಂತ ತಾಯಿಯಂದಿರೆ ಗರ್ಭಾಶಯ ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ತಾಯಿ ತಮ್ಮ ಮಕ್ಕಳಗೆ ಯಾವ ತ್ಯಾಗವನ್ನು ಮಾಡುವುದಕ್ಕೆ ಸಿದ್ಧಳಿರುತ್ತಾಳೆ ಎಂಬುದಕ್ಕೆ ಈ ಘಟನೆ ಒಂದು ಒಳ್ಳೆಯ ಉದಾಹರಣೆ ಎನ್ನಬಹುದು. ತಾಯಿಯನ್ನು ಗೌರವಿಸೋಣ. ಬಾಲ್ಯದಲ್ಲಿ ನಮ್ಮನ್ನು ಆರೈಕೆ ಮಾಡಿದ ತಾಯಿಯನ್ನು ಮುಪ್ಪಾವಸ್ಥೆಯಲ್ಲಿ ನಾವು ಚೆನ್ನಾಗಿ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top