fbpx
ದೇವರು

ಬೆಂಗಳೂರಿನಲ್ಲಿ ನೆಲೆಸಿರುವ ಶಕ್ತಿ ದೇವತೆ ಚಾಮುಂಡೇಶ್ವರಿ ದೇವಿಯ ಮಹತ್ವ ಹಾಗೂ ಪವಾಡಗಳನ್ನು ತಿಳ್ಕೊಂಡ್ರೆ ಖಂಡಿತಾ ನೀವು ಈ ದೇವಸ್ಥಾನಕ್ಕೆ ಹೋಗ್ಬರ್ತೀರ .

ಇದು ಶಕ್ತಿ ದೇವತೆ ಚಾಮುಂಡೇಶ್ವರಿ ಅಪರೂಪದ ದೇವಾಲಯ . ಬೆಂಗಳೂರಿನ ನಾಗರ ಬಾವಿಯಲ್ಲಿ ನೆಲೆಸಿದೆ . ಈ ಕ್ಷೇತ್ರ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕಿ, ಚಾಮುಂಡೇಶ್ವರಿ ಎಂದ ಕೂಡಲೇ ನಮಗೆ ನೆನಪಾಗುವುದು ಸಾಂಸ್ಕೃತಿಕ ನಗರಿ ಮೈಸೂರು ಇಲ್ಲಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರ ಮರ್ದಿನಿ. ನಮ್ಮ ನಾಡ ದೇವತೆ ಶಕ್ತಿ ದೇವತೆ ಮೈಸೂರು ಮಹಾರಾಜರ ಆರಾಧ್ಯ ದೇವಿ. ಇಂತಹ ಶಕ್ತಿ ದೇವತೆ ನಮ್ಮ ಸಿಲಿಕಾನ್ ಸಿಟಿಯ ನಾಗರಬಾವಿಯಲ್ಲಿ ಕೂಡ ನೆಲೆಸಿದ್ದಾಳೆ.ಈ ದೇವಿಗಾಗಿ ಇಲ್ಲಿ ಒಂದು ಭವ್ಯವಾದ ಮಂದಿರವನ್ನು ನಿರ್ಮಿಸಲಾಗಿದೆ .

ಇವರಿಗೆ ಅಪಾರ ಭಕ್ತವೃಂದವಿದೆ. ತಾಯಿ ಚಾಮುಂಡೇಶ್ವರಿ ಜನಿಸಿದ್ದು ಆಶಾಡ ಮಾಸದ ,ರೇವತಿ ನಕ್ಷತ್ರದ ಕೃಷ್ಣಪಕ್ಷದಲ್ಲಿ ಜನಿಸಿದ್ದಾಳೆ . ಹೀಗಾಗಿಯೇ ಪ್ರತಿ ವರ್ಷ ಈ ದಿನದಂದು ದೇವಿಯ ಹುಟ್ಟಿದ ಹಬ್ಬವನ್ನು ಈ ದೇವಸ್ಥಾನದಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ . ಹೀಗಾಗಿ ಚಾಮುಂಡೇಶ್ವರಿಯ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳನ್ನು ವರ್ದಂತಿ ಪ್ರಯುಕ್ತ ಇಡೀ ದಿನ ವಿಶೇಷ ಪೂಜೆ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿದರು . ಆಶಾಡ ಮಾಸ ಚಾಮುಂಡೇಶ್ವರಿಗೆ ಅತ್ಯಂತ ವಿಶೇಷ ಆಶಾಡ ಮಾಸದ ಪ್ರತಿ ಶುಕ್ರವಾರ ದೇವಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ . ಸಾಮಾನ್ಯವಾಗಿ ಆಶಾಡ ಮಾಸದ 3 ನೇ ವಾರದಲ್ಲಿ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ಬರುತ್ತದೆ . ಆದರೆ ಈ ಬಾರಿ ಆಶಾಡ ಶುಕ್ರವಾರದ ದಿನವೇ ಚಾಮುಂಡೇಶ್ವರಿಯ ವರ್ಧಂತಿ ಬಂದಿರುವುದು ವಿಶೇಷವಾಗಿತ್ತು .
ದೇವಿಯು ಸ್ವ-ಇಚ್ಛೆಯಿಂದ ನೆಲೆಸಿದ ಪುಣ್ಯ ಕ್ಷೇತ್ರವಿದು. ಇಲ್ಲಿ ನೆಲೆಸಿರುವ ದೇವಿಯ ಹಿಂದೆ ಒಂದು ರೋಚಕ ಕತೆ ಇದೆ .ಈ ದೇವಿಯ ದೇಗುಲದ ನಿರ್ಮಾಣದ ಹಿಂದಿದೆ ರೋಚಕ ಕಥೆ.ಇದು ದೇವಿಯ ಇಚ್ಛೆಪಟ್ಟು ನೆಲೆಸಿರುವ ಮತ್ತು ನಿರ್ಮಿಸಿಕೊಂಡಿರುವ ಪುಣ್ಯ ಧಾಮವಿದು.

ಮುಖದಲ್ಲಿ ಅಪೂರ್ವ ತೇಜಸ್ಸು, ಸರ್ವಾಲಂಕಾರ ಭೂಷಿತೆ, ಕರುಣೆ ತುಂಬಿದ ಕಣ್ಣುಗಳು, ದೇವಿಯ ದರ್ಶನದಿಂದಲೇ ಅಪಾರ ನೆಮ್ಮದಿ ಶಾಂತಿ ,ರೋಗಗಳನ್ನು ಪರಿಹರಿಸುವ ವೈದ್ಯೆ ,ಭಕ್ತರನ್ನು ಸಲಹುವ ಸಂರಕ್ಷಕಿ, ಇವಳೇ ಭಕ್ತರ ಪಾಲಿನ ಕರುಣಾಮಯಿ, ಶ್ರೀ ಚಾಮುಂಡೇಶ್ವರಿ ದೇವಿ. ಮೈ ತುಂಬಾ ವಸ್ತ್ರಾಭರಣಗಳನ್ನು ತೊಟ್ಟು ,ಕೊರಳ ತುಂಬಾ ಕಂಠಿ ಹಾರಗಳನ್ನು ಧರಿಸಿ, ಅರ್ಧ ಚಂದ್ರಾಕೃತಿಯ ಮೂಗುತಿ ದರಿಸಿ, ಚಾಮುಂಡಿ ಮಿರಮಿರ ಮಿಂಚುತ್ತಿದ್ದಳು, ಪುಟ್ಟ ಪುಟ್ಟ ಕಣ್ಣುಗಳು, ತಿದ್ದಿ ತೀಡಿದ ಹುಬ್ಬ, ತುಟಿಗೆ ಕೆಂಪು ಬಣ್ಣ, ದೇವಿಗೆ ದೃಷ್ಟಿ ಬೊಟ್ಟು ,ಆಬ್ಬ, ಒಂದಾ ಎರಡಾ ಸೌಂದರ್ಯದ ಗಣಿಯೇ ದೇವಿಗೆ ಆವರಿಸಿಕೊಂಡಂತೆ ಮಹಾಶಕ್ತಿ ಸುಂದರ ರೂಪ . ಚಾಮುಂಡೇಶ್ವರಿ ಕೋಮಲವಾದ ಮನಸ್ಸಿರುವವರು ಹೀಗಾಗಿಯೇ ಆದಿ ಶಕ್ತಿಗೆ ಕಮಲ, ಮಲ್ಲಿಗೆ, ತುಳಸಿ , ಗುಲಾಬಿ, ಸೇವಂತಿಗೆ, ಕನಕಾಂಬರ ಹೀಗೆ ಬಗೆ ಬಗೆಯ ಬಣ್ಣ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗುತ್ತದೆ.

 

 

ಹೂವಿನ ಅಲಂಕಾರ ದೇವಿಯ ಚೆಲುವನ್ನು ಇಮ್ಮಡಿಗೊಳಿಸಿತ್ತು. ಗರ್ಭ ಗುಡಿಯಲ್ಲಿ ಸರ್ವಾಲಂಕಾರದಿಂದ ದೀಪಾಲಂಕಾರ ಬೆಳಕಿನಿಂದ ದಿವ್ಯಮಾನಳಾಗಿ ಕಂಗೊಳಿಸುತ್ತಿದ್ದಳು. ಹೀಗೆ ದೇವಿಗೆ ಬಗೆಬಗೆಯ ಆರತಿ ನಡೆದಿತ್ತು .ಒಂದೊಂದು ಆರತಿಯಲ್ಲೂ ವಿಶೇಷವಾಗಿ ಕಂಗೊಳಿಸುತ್ತಾ ಇದ್ದಳು. ದೇವಿಗೆ ವಿಶೇಷವಾಗಿ ದರ್ಶನ ನೀಡಿದಳು ,ಬಗೆ ಬಗೆಯ ಅಭಿಷೇಕ, ವರ್ಣಮಯ ಅಲಂಕಾರ ಪಡೆದ ತಾಯಿಯ ರೂಪ ಚೆಲುವೆಯರಲ್ಲಿ ಅತಿ ಚೆಲುವೆ ಎನ್ನುವಂತಿತ್ತು, ಸರ್ವಾಲಂಕಾರ ಭೂಷಿತಳಾಗಿದ್ದ ಈ ತಾಯಿಯನ್ನು ಒಮ್ಮೆ ದರ್ಶನ ಮಾಡಿದರೆ ಮತ್ತೆ ಅವಳ ರೂಪವನ್ನು ನೋಡಬೇಕು ಎಂದೆನೆಸಿತ್ತಿತ್ತು.
ಇಲ್ಲಿ ದೇವಿಯ ದೇಗುಲ ನಿರ್ಮಾಣವಾದ ಕಥೆ. ಅತಿರೋಚಕ ಚಾಮುಂಡೇಶ್ವರಿ ದೇವಿಯ ಸಹಕಾರದಿಂದಲೇ ಇಲ್ಲಿ ದೇಗುಲ ನಿರ್ಮಾಣವಾಗಿದೆ.. ಹಿಂದೆ ನಾಗರಬಾವಿ ಅರಣ್ಯ ಪ್ರದೇಶವಾಗಿತ್ತು. ಬೆಟ್ಟ ಗುಡ್ಡಗಳಿಂದ ಆವೃತವಾಗಿದ್ದ ಈ ಪ್ರದೇಶದಲ್ಲಿ ಒಂದು ಚಿಕ್ಕ ದೇಗುಲ ಇತ್ತು. ಆ ಸಂದರ್ಭದಲ್ಲಿ ಕನಸಿನಲ್ಲಿ ನಾಗರಹಾವು,ಹುತ್ತ,ದೇವಿಯ ಶಿಲೆ ಕಾಣಿಸಿಕೊಂಡಿದೆ. ಈ ಸ್ಥಳದಲ್ಲಿ ಅದೇ ಸಂಕೇತಗಳು ಕಂಡು ಬಂದವು. ಇಲ್ಲಿನ ನಾಗರಿಕರೆಲ್ಲ ಸೇರಿ ಉದಾರವಾಗಿ ದಾನ ಮಾಡಿ ದೇವಿಗೆ ದೇವಾಲಯವನ್ನು ನಿರ್ಮಿಸಿದರು. ಒಂದು ಪುರಾತನವಾದ ದೇವಿಯ ಶಿಲೆ ಇಲ್ಲಿ ದೊರೆತಿತ್ತು. ಅದರ ಸುತ್ತಮುತ್ತ ಹುತ್ತ ಮತ್ತು ಬೇವಿನ ಮರಗಳು ಇದ್ದವು . ಎಲ್ಲಾ ಹೆಣ್ಣು ಮಕ್ಕಳು ಅಲ್ಲಿ ಪೂಜೆ ಮಾಡುವುದಕ್ಕೆ ಶುರು ಮಾಡಿದರು. ನಿಧಾನವಾಗಿ 1992-1993ರಲ್ಲಿ ಚಾಮುಂಡೇಶ್ವರಿ ಭಕ್ತ ಮಂಡಳಿಯನ್ನು ಸ್ಥಾಪಿಸಿ ಇಲ್ಲಿ ಶಕ್ತಿದೇವತೆ ನೆಲೆಸಿದ್ದಾಳೆ ಎಂದು … 1998ರಲ್ಲಿ ದೇವಿಯ ಗುಡಿಯನ್ನು ಜೀರ್ಣೋದ್ದಾರ ಮಾಡಿ ಮರು ನಿರ್ಮಾಣ ಮಾಡಿದರು . ಕೇವಲ ಇಪ್ಪತ್ತು ವರ್ಷದಲ್ಲಿ ಈ ದೇವಿ ಮನೆಮಾತಾಗಿದ್ದಾಳೆ. ಬೆಂಗಳೂರಿನ ಮೂಲೆ ಮೂಲೆಯಿಂದ ಈ ದೇವಿಯ ದರ್ಶನಕ್ಕೆ ಬರುತ್ತಾರೆ. ಈ ದೇವಿ ಬೆಂಗಳೂರಿನಿಂದ ಮಾತ್ರವಲ್ಲದೆ ಬೇರೆ ಊರುಗಳಿಂದಲೂ ಕೂಡ ಈ ದೇವಿಯ ದರ್ಶನಕ್ಕೆ ಭಕ್ತರು ಬರುತ್ತಾರೆ.

ನಂಬಿದ ಭಕ್ತರನ್ನು ಬಿಡದೇ ಕಾಪಾಡುವ ಕರುಣಾಮಯಿ.ಈ ಆದಿಶಕ್ತಿ ಕಷ್ಟ ಎಂದು ಬಂದವರನ್ನು ಎಂದಿಗೂ ಈಕೆ ಬರಿಗೈನಲ್ಲಿ ಕಳುಹಿಸಿಲ್ಲ. ಹೀಗಾಗಿ ಬೇರೆ ಬೇರೆ ಕಡೆ ನೆಲೆಸಿರುವ ಇವಳ ಭಕ್ತರು ವರ್ಷಕ್ಕೊಮ್ಮೆ ದೇವಿಯ ಸನ್ನಿಧಾನಕ್ಕೆ ಬಂದು ದರ್ಶನವನ್ನು ಪಡೆಯುತ್ತಾರೆ ,ಹರಕೆಗಳನ್ನು ತೀರಿಸುತ್ತಾರೆ. ಇಲ್ಲಿರುವ ದೇವಿ ಕರುಣಾಮಯಿ ಈ ದೇವಿ ಸಿಂಹದ ಮೇಲೆ ಕುಳಿತಿಲ್ಲ. ಹಾಗಾದರೆ ಇಲ್ಲಿರುವ ದೇವಿಯ ವಿಶೇಷತೆ ಏನು ? ಇಲ್ಲಿರುವ ಚಾಮುಂಡೇಶ್ವರಿಯ ರೂಪ ಎಂಥದ್ದು ಗೊತ್ತಾ ? ಈ ದೇವಿಯ ಪವಾಡಗಳಿಗೆ ಬೆರಗಾಗದವರೇ ಇಲ್ಲ. ರಾಕ್ಷಸರನ್ನು ಸಂಹಾರ ಮಾಡಿದವಳು, ದುಷ್ಟರನ್ನು ಶಿಕ್ಷಿಸಿದವಳು, ಲೋಕೋದ್ಧಾರಳು ಇವಳು, ಕಷ್ಟದಲ್ಲಿರುವವರನ್ನು ರಕ್ಷಿಸುವವಳು, ಪ್ರಕೃತಿ ಸ್ವರೂಪಿಣಿ ,ಶಕ್ತಿ ದೇವತೆ , ಇಷ್ಟಾರ್ಥಗಳನ್ನು ಕರುಣಿಸುವ ಕಾಮದೇನು ,ಇವಳೇ ಚಾಮುಂಡೇಶ್ವರಿ.

ನಾಗರಭಾವಿಯಲ್ಲಿ ನೆಲೆಸಿರುವ ಚಾಮುಂಡೇಶ್ವರಿಯ ಮೂರ್ತಿ ಇತರೆ ದೇಗುಲಗಳಲ್ಲಿ ಇರುವ ಮೂರ್ತಿಗಳಿಗಿಂತ ಅತ್ಯಂತ ವಿಭಿನ್ನ ಯಾಕೆಂದರೆ ಈಕೆ ಸಿಂಹ ವಾಹಿನಿಯಲ್ಲ. ಬದಲಿಗೆ ಈ ತಾಯಿ ಕಮಲ ವಾಸಿನಿ, ಶಾಂತ ಸ್ವರೂಪಿಯಾದ ಈ ದೇವಿ ಕಮಲದ ಮೇಲೆ ವಿರಾಜಮಾನಳಾಗಿದ್ದಾಳೆ. ಪೂರ್ವಾಭಿಮುಖವಾಗಿರುವ ದೇವಿಯ ದರ್ಶನ ಅತ್ಯಂತ ಪುಣ್ಯಪ್ರದ ಎನ್ನುವ ನಂಬಿಕೆ ಭಕ್ತರಲ್ಲಿದೆ. ಶಕ್ತಿ ಇರುವ ಅಪಾರ ಶಕ್ತಿವಂತರಾಗಿರುವ ಈ ತಾಯಿಯ ಪವಾಡಗಳು ಒಂದೆರಡಲ್ಲ. ಈ ದೇವಿಯ ಶಕ್ತಿ ಎಷ್ಟು ಶಕ್ತಿ ಎಂದರೆ ಮೂರ್ತಿಯ ಪ್ರತಿಷ್ಠಾಪನೆ ಆಗುವುದಕ್ಕೂ ಮೊದಲೇ ತನ್ನ ಪವಾಡಗಳನ್ನು ತೋರಿಸುತ್ತಾ ಬಂದಿದ್ದಾಳೆ.
ಜಲವಾಸ ನಡೆಯುವಾಗ ಒಂದು ಘಟನೆ ನಡೆದಿತ್ತು .ಆಗ ಹೊಸದಾಗಿ ಜಲ ವಾಸಕ್ಕೆ ತೊಟ್ಟಿ ನಿರ್ಮಾಣ ಮಾಡಿದ್ದರು. ಆಗ ಒಂದು ಘಟನೆ ನೆಡೆಯಿತು.ಆ ನೀರಿನ ತೊಟ್ಟಿಯಲ್ಲಿ 48 ದಿನಗಳ ಕಾಲ ದೇವಿಯ ವಿಗ್ರಹವನ್ನು ಇಡಬೇಕಾಗಿತ್ತು. ಆಗ ಅಲ್ಲಿ ಎರಡು ದಿನಗಳ ಮುಂಚೆಯೇ 2 ಕರೀ ನಾಗರ ಹಾವು ಬೆಳಗ್ಗೆಯಿಂದ ಬಂದು ಸಂಜೆಯವರೆಗೆ ಅಲ್ಲೇ ಇದ್ದು ಸಂಜೆ ಹೊರಟು ಹೋಗುತ್ತಿದ್ದವು. ಒಂದು ತಿಂಗಳ ಕಾಲ ಹಾಗೆ ಬಂದು ಹೋದವು. ಕೊನೆಗೆ ಆ ಜಾಗದಲ್ಲಿಯೇ ದೇವಿಯ ಜಲವಾಸ ಪ್ರತಿಷ್ಠಾಪನೆಯಾಯಿತು. ಇದು ಕಾಕತಾಳೀಯ ಅಲ್ಲ ಎಂದೆನಿಸುತ್ತದೆ.

ಈ ಚಾಮುಂಡೇಶ್ವರಿ ಹಲವರ ಪಾಲಿಗೆ ಧನ್ವಂತರಿಯೇ ಆಗಿದ್ದಾಳೆ. ಇವಳನ್ನು ನಂಬಿದ ಹಲವರಿಗೆ ಆರೋಗ್ಯ ಭಾಗ್ಯವನ್ನು ಕರುಣಿಸಿದ್ದಾಳೆ. ಅಷ್ಟೇ ಅಲ್ಲ ಅದೆಷ್ಟೋ ಹೋಗುತ್ತಿದ್ದ ಜೀವಗಳನ್ನೇ ಈ ತಾಯಿ ಉಳಿಸಿದ್ದಾಳೆ. ಈ ತಾಯಿಯ ಪವಾಡ ಈ ರಾಜ್ಯದಿಂದ ಆಚೆಗೂ ಕೂಡ ಇದೆ . ಗುಜರಾತ್ ರಾಜ್ಯದಲ್ಲಿ ಭೂಕಂಪವಾದಗಲೂ ಕೂಡ ಈ ತಾಯಿ ನೆರವಿಗೆ ಬಂದಿದ್ದಾರೆ. ಇಲ್ಲೇ ಕುಳಿತು ಗುಜರಾತ್ ನಲ್ಲಿ ಆದ ಪ್ರಕೃತಿ ವಿಕೋಪದಿಂದ ಒಂದು ಕುಟುಂಬವನ್ನು ಈ ಮಹಾತಾಯಿ ಕಾಪಾಡಿದ್ದಾಳೆ.

ಶುಕ್ರವಾರ ರಾಹುಕಾಲದಲ್ಲಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ಆರತಿ ಬೆಳಗುವುದು ಇಲ್ಲಿನ ವಿಶೇಷತೆ. ಈ ರೀತಿ ನಿಂಬೆಹಣ್ಣಿನ ಆರತಿ ಬೆಳಗುತ್ತಾರೆ.ಈ ಶಕ್ತಿ ದೇವತೆ ವಿಶೇಷ ವರವನ್ನು ಕರುಣಿಸುತ್ತಾಳೆ ಎನ್ನುವ ನಂಬಿಕೆ ಇಲ್ಲಿರುವ ಭಕ್ತರಲ್ಲಿ ಅಚಲವಾಗಿದೆ. ಇದು ಹೆಣ್ಣು ಮಕ್ಕಳ ದೇಗುಲವೆಂದೇ ಪ್ರಸಿದ್ಧಿ ಪಡೆದಿದೆ. ಯಾಕೆಂದರೆ ಇಲ್ಲಿಗೆ ಹೆಚ್ಚಾಗಿ ಹೆಣ್ಣು ಮಕ್ಕಳೇ ಬರುತ್ತಾರೆ. ಅದರಲ್ಲೂ ಸುಮಂಗಲಿಯರು ಬಂದು ಪ್ರತಿ ಮಂಗಳವಾರ ಲಲಿತ ಸಹಸ್ರನಾಮ, ಶುಕ್ರವಾರದ ದಿನ ಸೌಂದರ್ಯ ಲಹರಿಯನ್ನು ಪಾರಾಯಣ ಮಾಡುತ್ತಾರೆ. ಹೀಗೆ ನಿರಂತರ ಪೂಜೆಗಳಿಂದ ಈ ಕ್ಷೇತ್ರ ಜಾಗೃತ ಶಕ್ತಿ ಕೇಂದ್ರವಾಗಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top