fbpx
ಸಮಾಚಾರ

“ಮೀನಮ್ಮ”ನನ್ನ ನೆನಪಿಸಿಕೊಂಡ ದೀಪಿಕಾ ಪಡುಕೋಣೆ ,ಯಾರ್ ಅದು “ಮೀನಮ್ಮ”,ಏನ್ ಇದು ಕಥೆ,ನೀವೇ ನೋಡಿ

2013ರಲ್ಲಿ ತೆರೆಗೆ ಬಂದಿದ್ದ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಅಭಿನಯ ಮಾಡಿದ್ದೂ ನಿಮಗೆ ಗೊತ್ತಿರುವ ವಿಚಾರ. ಶಾರುಖ್ ಜೊತೆ ದೀಪಿಕಾ ಅಭಿನಯ ಮಾಡಿದ್ದ ಈ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಈ ಸಿನಿಮಾದಲ್ಲಿ ಬರುವ ಮೀನಮ್ಮ ಪಾತ್ರ ಎಲ್ಲರಿಗೂ ಚಿರಪರಿಚಿತ.

ಚೆನ್ನೈ ಎಕ್ಸ್‌ಪ್ರೆಸ್‌ ಚಿತ್ರದಲ್ಲಿ ತಮಿಳುನಾಡಿನ ಬೆಡಗಿ ಪಾತ್ರದಲ್ಲಿ ಶಾರುಕ್ ಖಾನ್‌ ಮನಗೆದ್ದ ಮೀನಮ್ಮ ಈಗ, ಸಿನಿಮಾದಲ್ಲಿರುವ ಕ್ಷಣಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ಮೆಲಕು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಚಿತ್ರೀಕರಣ ನಡೆಯುವಾಗ ಸೆಟ್ ನಲ್ಲಿ ನಡೆದ ಕೆಲವು ಹಾಸ್ಯಾಸ್ಪದ ಘಟನೆಗಳ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ದೀಪಿಕಾ ಹರಿಬಿಟ್ಟಿದ್ದಾರೆ.

 

when a possessed Meenamma took over the sets of #ChennaiExpress😝😝😝

A post shared by Deepika Padukone (@deepikapadukone) on

 

ಸದ್ಯ ದೀಪಿಕಾ ಪೋಸ್ಟ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. 2013 ರಲ್ಲಿ ಅತ್ಯಧಿಕ ಸಂಪಾದನೆ ಮಾಡಿದ ಸಿನಿಮಾಗಲ್ಲಿ ಚೆನ್ನೈ ಎಕ್ಸ್‌ಪ್ರೆಸ್‌ ಕೂಡ ಒಂದು. ಭೂಗತ ದೊರೆಯ ಮಗಳನ್ನು(ಮೀನಮ್ಮ) ರೈಲ್ವೇ ನಿಲ್ದಾಣದಲ್ಲಿ ಭೇಟಿಯಾಗುವ ರಾಹುಲ್‌(ಶಾರುಕ್ ಖಾನ್‌) ಆಕೆಯೊಂದಿಗೆ ಪ್ರೀತಿಯಲ್ಲಿ ಬೀಳುತ್ತಾನೆ. ಈ ವೇಳೆ ಅನೇಕ ಹಾಸ್ಯ ಸನ್ನಿವೇಶ ಚಿತ್ರ ರಸಿಕರ ಮನ ಗೆದ್ದಿದ್ದವು. ಅದೂ ಅಲ್ಲದೆ, ಮೀನಮ್ಮಳ ಹಿಂದಿ ಮಾತಿನ ಧಾಟಿ ಇನ್ನಷ್ಟು ಖ್ಯಾತಿ ಪಡೆದಿತ್ತು.

ಸಾಲು ಸಾಲು ಹಿಟ್ ಸಿನಿಮಾ ನೀಡಿರುವ ದೀಪಿಕಾ ಇನ್ನು ಖ್ಯಾತ ನಟ ರಣವೀರ್ ಸಿಂಗ್ ಅವರ ಜೊತೆ ಮದುವೆ ಅಗಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಎರಡು ಮೂರೂ ತಿಂಗಳಲ್ಲಿ ಇವರ ವಿವಾಹ ಆಗಬಹುದು ಎಂದು ಬಾಲಿವುಡ್ ವಲಯಗಳಲ್ಲಿ ಮಾತು ಕೇಳಿಬರುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top