ಸಮಾಚಾರ

ಕನ್ನಡಿಗರಿಗೆ ಸಿಹಿ ಸುದ್ದಿ- ರಾಷ್ಟ್ರರಾಜಧಾನಿಯಲ್ಲಿ ಸ್ಥಾಪನೆಯಾಗಲಿದೆ ಕನ್ನಡ ಭಾಷಾ ಅಕಾಡೆಮಿ.

ರಾಷ್ಟ್ರ ರಾಜಧಾನಿ ನವದೆಹಲಿ ವ್ಯಾಪ್ತಿಯಲ್ಲಿ ಕನ್ನಡ ಭಾಷೆಯ ಪ್ರಚಾರಕ್ಕಾಗಿ ‘ಕನ್ನಡ ಭಾಷಾ ಅಕಾಡೆಮಿ’ ಸ್ಥಾಪಿಸಲು ದೆಹಲಿ ಸರ್ಕಾರ ಸಮ್ಮತಿ ಸೂಚಿಸಿದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ದೆಹಲಿಯಲ್ಲಿ ‘ಕನ್ನಡ ಭಾಷಾ ಅಕಾಡೆಮಿ’ ಸ್ಥಾಪನೆಗೆ ಮುಂದಾಗಿದ್ದು ದೆಹಲಿ ಅಸೆಂಬ್ಲಿಗೆ ಸಂಸ್ಕೃತಿ ಖಾತೆಯ ಸಚಿವ ಮತ್ತು ಉಪ ಮುಖ್ಯಮಂತ್ರಿ ಮನೀಷ್‌ ಸಿಸ್ಸೂಡಿಯಾ ಈ ಮಾಹಿತಿ ನೀಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದಲ್ಲಿ ಗುರುವಾರ ನಡೆದ ದೆಹಲಿ ಸರ್ಕಾರದ ಸಂಪುಟ ಸಭೆಯಲ್ಲಿ ‘ಕನ್ನಡ ಅಕಾಡೆಮಿ ಸ್ಥಾಪನೇ ಮಾಡುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು ಆದಷ್ಟು ಬೇಗ ಇದಕ್ಕೆ ಚಾಲನೆ ದೊರೆಯಲಿದೆ.ಇದರ ಜತೆಗೆ ವಿದೇಶಿ ಭಾಷೆಗಳ ಪ್ರೋತ್ಸಾಹ ಕ್ಕಾಗಿ ಅವುಗಳಿಗೆ ಸಂಬಂಧಿಸಿದ ಅಕಾಡೆಮಿಗಳನ್ನೂ ಪ್ರಾರಂಭಿಸಲಾಗುತ್ತದೆ ಎಂದು ಮನೀಶ್ ತಿಳಿಸಿದ್ದಾರೆ.

ಅಂದಹಾಗೆ ಕೇವಲ ಕನ್ನಡ ಮಾತ್ರವಲ್ಲದೇ ಒಟ್ಟು 15 ಭಾಷೆಗಳ ಅಕಾಡಮಿ ಸ್ಥಾಪಿಸುವ ಸಂಪುಟ ನಿರ್ಣಯಕ್ಕೆ ದೆಹಲಿ ಲೆಫ್ಟಿನೆಂಟ್ ಗರ್ವನರ್ ಒಪ್ಪಿಗೆ ಇನ್ನೂ ಬಾಕಿಯಿದ್ದು ಅದು ಸಿಕ್ಕ ಕೂಡಲೇ ಅಕಾಡೆಮಿಗಳು ಸ್ಥಾಪನೆಯಾಗಲಿವೆ. ಕನ್ನಡವನ್ನೂ ಒಳಗೊಂದು ಬಂಗಾಳಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಒಡಿಯಾ, ಅಸ್ಸಾಮಿ, ಕಾಶ್ಮೀರಿ, ಮಾರ್ವಾರಿ, ಹರ್ಯಾನ್ವಿ, ಕುಮೌನಿ, ಜೌನ್ಸಾರಿ ಭಾಷೆಗಳ ಪ್ರಚಾರ ಮತ್ತು ಅಭಿವೃದ್ಧಿಗಾಗಿ ಅಕಾಡೆಮಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top