fbpx
ಸಮಾಚಾರ

ಈ ಚಿತ್ರ ವಿಚಿತ್ರ ಆಚರಣೆಗಳ ಬಗ್ಗೆ ಗೊತ್ತಾದ್ರೆ ,ಖಂಡಿತಾ ನೀವು ಬೆಚ್ಚಿ ಬೀಳೋದು ಗ್ಯಾರಂಟಿ

ವಿಶ್ವದ ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಸಂಪ್ರದಾಯ ಇರುತ್ತವೆ. ಆ ಸಂಪ್ರದಾಯ ಕೇಳಿದ್ರೆ ನಿಮಗೆ ವಿಚಿತ್ರ ಅನಿಸಬಹುದು. ಹಾಗಾದರೆ ಆ ವಿಚಿತ್ರ ಸಂಪ್ರದಾಯಗಳ ಬಗ್ಗೆ ನೋಡೋಣ ಬನ್ನಿ

 

ವಿವಾಹಕ್ಕೂ ಪೂರ್ವ ತಿಂಗಳು ಅಳಬೇಕು

ನಮ್ಮಲ್ಲಿ ಮದುವೆ ಸಮೀಪಿಸುತ್ತಿದ್ದಂತೆ ನಗು ನಗುತ್ತ ಇರುವುದು ವಾಡಿಕೆ ಆದರೆ ಚೀನಾದ ವೂಲಿಂಗ್ ಪರ್ವತ ಪ್ರದೇಶದಲ್ಲಿ ವಾಸಿಸುವ ಹೆಣ್ಮಕ್ಕಳ ಮದುವೆಗೆ ಒಂದು ತಿಂಗಳು ಇರುವಾಗ ಆ ಪೂರ್ತಿ ತಿಂಗಳೂ ಮದುಮಗಳು ಅಳುತ್ತಾ ಇರಬೇಕಂತೆ. ಹೀಗೆ ಮಾಡಿದರೆ ಮದುವೆಯಾದ ಮೇಲೆ ಗಂಡನ ಮನೆಗೆ ಒಳ್ಳೇದಾಗುತ್ತದೆ ಎಂಬ ನಂಬಿಕೆ ಅವರಿಗೆ ಇದೆ ಎಂದು ತಿಳಿದು ಬಂದಿದೆ.

 

ಕಸ ಗುಡಿಸಲೂ ಟೈಂ ಫಿಕ್ಸ್

ಸಾಮಾನ್ಯವಾಗಿ ಮುಂಜಾನೆ ಎದ್ದು ಕಸಗುಡಿಸುವುದನ್ನು ಎಲ್ಲರು ರೂಢಿಸಿಕೊಂಡಿರುತ್ತಾರೆ. ಆದರೆ ಆಸ್ಟ್ರೇಲಿಯಾ ದೇಶದ ಮೆಲ್ಬರ್ನ್​ನಲ್ಲಿ ಹಾಗೇನಾದರೂ ಮಾಡಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಏಕೆಂದ್ರೆ ಅಲ್ಲಿ ವಾರದ ದಿನಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 7ವರೆಗೆ ಹಾಗೂ ವೀಕೆಂಡ್​ಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 9ರವರೆಗೆ ಮನೆ ಗುಡಿಸುವಂತಿಲ್ಲ. ಇದು ಕಾನೂನಿನ ವಿರುದ್ಧವಂತೆ.

 

 

 

ಧೂಳು ಹಿಡಿದಿರುವ ಕಾರು ಓಡಿಸಿದ್ರೆ ಭಾರಿ ದಂಡ:

ನಾವು ಕೆಲವೊಮ್ಮೆ ಕಾರು ಧೂಳು ಹಿಡಿದಿದ್ರು ಪರವಾಗಿಲ್ಲ ಹಾಗೆಯೆ ಸವಾರಿ ಮಾಡುತ್ತೇವೆ. ಆದರೆ ಇಲ್ಲಿ ಧೂಳು ಹಿಡಿದಿರುವ ಕಾರು ಓಡಿಸಿದ್ರೆ ಭಾರಿ ದಂಡ ತೆರಬೇಕಾಗುತ್ತದೆ. ರಷ್ಯಾದ ಚೆಲಿಯಾನಿನಸ್ಕ್ ನಗರದಲ್ಲಿ ಧೂಳು ಇರುವ ಕಾರನ್ನು ಓಡಿಸುವಂತಿಲ್ಲ. ಹೀಗೇನಾದರೂ ಮಾಡಿದರೆ 2000 ರೂಪಾಯಿ ದಂಡ ತೆರಬೇಕಾದೀತು.

 

ಶವಸಂಸ್ಕಾರದ ಬೂದಿ ಸೇವನೆ

ಶವಸಂಸ್ಕಾರ ಆದ ಬಳಿಕ ಬೂದಿಯನ್ನು ನದಿಗಳಲ್ಲಿ ಹಾಕುವ ಸಂಪ್ರದಾಯ ಇದೆ. ಆದರೆ ಬ್ರೆಜಿಲ್ ಮತ್ತು ವೆನಿಜುವೆಲ್ಲಾದ ತನೋಮನಿ ಗುಡ್ಡಗಾಡು ಪ್ರದೇಶದ ಜನರು ಶವಸಂಸ್ಕಾರ ಬೂದಿಯನ್ನು ಸೂಪ್​ನಲ್ಲಿ ಸೇರಿಸಿಕೊಂಡು ಶವಸಂಸ್ಕಾರದಲ್ಲಿ ಹಾಜರು ಇದ್ದವರು ಕುಡಿಯಬೇಕು. ಹೀಗೆ ಮಾಡಿದರೆ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿದು ಬಂದಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top