ಹೆಚ್ಚಿನ

ಯಾವ ಮಾಸದಲ್ಲಿ ಗೃಹಪ್ರವೇಶ ಮಾಡಿದರೆ ಒಳ್ಳೆಯದು,ಪಾಲಿಸಬೇಕಾದ ನಿಯಮಗಳು ಏನು,ಗರ್ಭಿಣಿ ಸ್ತ್ರೀಯರು ಪೂಜೆಯಲ್ಲಿ ಯಾಕೆ ಕುಳಿತುಕೊಳ್ಳಬಾರದು,ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ನೋಡಿ ಉತ್ತರ

ಗೃಹ ಪ್ರವೇಶ ಮಾಡುವಾಗ ಪಾಲಿಸಬೇಕಾದ ಕೆಲವು ಮುಖ್ಯವಾದ ನಿಯಮಗಳು ಏನೇನು ? ಅವು ಯಾವುವು ? ಯಾವ ಮಾಸದಲ್ಲಿ ಗ್ರಹ ಪ್ರವೇಶ ಮಾಡಿದರೆ ಒಳ್ಳೆಯದು ?ಗರ್ಭಿಣಿ ಸ್ತ್ರೀಯರು ಗೃಹಪ್ರವೇಶದ ಪೂಜೆಯಲ್ಲಿ ಕುಳಿತುಕೊಳ್ಳಬಾರದು ಯಾಕೆ ? ಎಂದು ನಿಮಗೆ ಗೊತ್ತೇ ?

ಜೀವನದಲ್ಲಿ ಮನೆ ಕಟ್ಟಿ ಅದರಲ್ಲಿ ಬಾಳಬೇಕೆಂಬ ಆಸೆ ಪ್ರತಿಯೊಬ್ಬ ಜೀವಿಗೂ ಇದ್ದೇ ಇರುತ್ತದೆ. ಕೆಲವರಿಗೆ ಕೆಲವು ತೊಂದರೆಗಳಿಂದ ಮನೆ ಕಟ್ಟಲು ಆಗುತ್ತಿರುವುದಿಲ್ಲ .ಇನ್ನು ಕೆಲವರು ತುಂಬಾ ಕಷ್ಟಪಟ್ಟು ಮನೆಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಕಷ್ಟಪಟ್ಟು ಕಟ್ಟಿದ ಮನೆಗೆ ಗೃಹಪ್ರವೇಶ ಮಾಡುತ್ತಾರೆ.
ಇಷ್ಟಕ್ಕೂ ಈ ಗೃಹಪ್ರವೇಶ ಯಾಕೆ ಮಾಡುತ್ತಾರೆ ? ಇದನ್ನು ಮಾಡುವಾಗ ಪಾಲಿಸಬೇಕಾದ ನಿಯಮಗಳ ಆದರೂ ಏನೇನು ? ಯಾವ ಕಾರಣದಿಂದ ಇದನ್ನು ಮಾಡುತ್ತಾರೆ ? ಎಂದು ಈಗ ನಾವು ತಿಳಿದುಕೊಳ್ಳೋಣ ಯಾವುದೇ ಮನೆಗಾದರೂ ಅದು ಇರುವ ಸ್ಥಳ ಅತಿಮುಖ್ಯ. ಆ ಸ್ಥಳವೇ ಆ ಮನೆಯ ಮೇಲೆ ಪ್ರಭಾವ ಬೀರುತ್ತದೆ. ಅದು ಆ ಮನೆಯಲ್ಲಿ ವಾಸಿಸುವ ವ್ಯಕ್ತಿಗಳ ಮೇಲೆಯೂ ಸಹ ಅವರ ಜೀವನವನ್ನು ಸಹ ಪ್ರಭಾವಿತಗೊಳಿಸುತ್ತದೆ.

 

 

 

ಇದರ ಜೊತೆಗೆ ಖಾಲಿ ಇರುವ ಮನೆಯಲ್ಲಿ ದುಷ್ಟ ಶಕ್ತಿಗಳು ವಾಸವಾಗಿರುತ್ತವೆ. ಅವುಗಳನ್ನು ಓಡಿಸಬೇಕೆಂದರೆ ಶಾಸ್ತ್ರೋಕ್ತವಾಗಿ ಪೂಜೆಗಳನ್ನು ಮಾಡಲೇಬೇಕು . ಆದ್ದರಿಂದಲೇ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭದಿನದಂದೇ ಗೃಹ ಪ್ರವೇಶ ಮಾಡಬೇಕು . ಗೃಹ ಪ್ರವೇಶಕ್ಕೆ ಜನ್ಮ ರಾಶಿ ಮತ್ತು ಜನ್ಮ ಲಗ್ನಗಳು ಶ್ರೇಷ್ಠವೆಂದು ಹೇಳಲಾಗಿದೆ. ತಮ್ಮ ಜನ್ಮ ಲಗ್ನಗಳನ್ನು ನೋಡಿಕೊಂಡು ಗೃಹ ಪ್ರವೇಶವನ್ನು ಮಾಡುವುದು ಒಳ್ಳೆಯದು .

ಯಾವ ತಿಂಗಳಲ್ಲಿ ವಾಸ್ತು ಪುರುಷ ರಾಜಯೋಗದಲ್ಲಿ ಇರುತ್ತಾನೆಯೋ , ಅಥವಾ ಯಾವ ದಿಕ್ಕಿನ ಬಾಗಿಲು ಪ್ರವೇಶಕ್ಕೆ ಅನುಕೂಲಕರವಾಗಿದೆಯೋ, ಆ ಬಾಗಿಲ ಮೂಲಕ ಗೃಹ ಪ್ರವೇಶ ಮಾಡಬೇಕು. ವಾಸ್ತು ಪುರುಷ ಯಾವ ತಿಂಗಳಿನಲ್ಲಿ ಯಾವ ದಿಕ್ಕಿಗೆ ತಲೆ ಹಾಕಿ ಮಲಗಿರುತ್ತಾನೆ , ಆ ದಿಕ್ಕಿನಿಂದಲೂ ಹಾಗೂ ಬೆನ್ನ ಕಡೆಯ ದಿಕ್ಕಿನಿಂದಲೂ ಗೃಹಪ್ರವೇಶವನ್ನು ಮಾಡಬಹುದು. ಯಾವ ಕಾರಣಕ್ಕೂ ವಾಸ್ತು ಪುರುಷನ ದೃಷ್ಟಿ ಪ್ರವೇಶ ದ್ವಾರಕ್ಕೆ ಬೀಳಬಾರದು.

ವಾಸ್ತು ಪುರುಷನ ವರ್ಷದಲ್ಲಿ ಕಾರ್ತಿಕ ಮಾಸ , ಮಾಘ ಮಾಸ ,ವೈಶಾಖ ಮಾಸ, ಶ್ರಾವಣ ಮಾಸ ,ಈ ನಾಲ್ಕು ಮಾಸಗಳಲ್ಲಿ ಶುಕ್ಲ ಪಕ್ಷದ 15 ದಿನಗಳು ಮಾತ್ರ ರಾಜಯೋಗದಲ್ಲಿ ಇರುತ್ತಾನೆ .ಆದ್ದರಿಂದ ಈ ಮಾಸಗಳಲ್ಲಿ ವಾಸ್ತು ಪುರುಷ ತಲೆ ಹಾಕಿರುವ ದಿಕ್ಕು ಹಾಗೂ ಬೆನ್ನ ಕಡೆ ದಿಕ್ಕಿನಿಂದ ಪ್ರವೇಶ ಮಾಡಲು ಒಳ್ಳೆಯ ಮಾಸವಾಗಿರುತ್ತದೆ .
ಗರ್ಭಿಣಿ ಮಹಿಳೆಯರು ಗೃಹ ಪ್ರವೇಶದ ಪೂಜೆಯಲ್ಲಿ ಪಾಲ್ಗೊಳ್ಳಬಾರದು. ಏಕೆಂದರೆ ಗರ್ಭಿಣಿ ಮಹಿಳೆಯರು ಗಂಡನೊಂದಿಗೆ ಪೂಜೆಯನ್ನು ಮಾಡುವುದರಿಂದ. ಅಲ್ಲಿ ಒಟ್ಟಿಗೆ ಮೂವರು ಪೂಜೆಯಲ್ಲಿ ಪಾಲ್ಗೊಂಡಂತೆ ಆಗುತ್ತದೆ. ಹಾಗಾಗಿ ಅವರ ಬದಲಾಗಿ ಕುಟುಂಬದ ಬೇರೆ ದಂಪತಿಗಳು ಪೂಜೆಯಲ್ಲಿ ಪಾಲ್ಗೊಳ್ಳಬಹುದು .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top