fbpx
ಮನೋರಂಜನೆ

KGF ಚಿತ್ರದ ಹಾಡಿನಲ್ಲಿ ಕುಣಿಯಲು ತಮನ್ನಾ ಪಡೆದ ಸಂಭಾವನೆ ಎಷ್ಟು ಗೊತ್ತಾ?

ನಾನಾ ಕಾರಣಗಳಿಂದಾಗಿ ಪ್ರೇಕ್ಷಕರ ವಲಯದಲ್ಲಿ ವಿಪರೀತ ಕುತೂಹಲ ಹುಟ್ಟುಹಾಕಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಬಗ್ಗೆ ಯಶ್ ಅಭಿಮಾನಿಗಳು ಸೇರಿದಂತೆ ಸಿನಿರಸಿಕರೆಲ್ಲರಲ್ಲೂ ತಲೆಕೆಡಿಸಿಕೊಂಡು ಕೂತಿದ್ದಾರೆ. ಅದ್ಧೂರಿ ಮೇಕಿಂಗ್, ಪೋಸ್ಟರ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವಂತಹ ಸ್ಟಿಲ್ಲುಗಳ ಮೂಲಕವೇ ಭಾರಿ ಸಂಚಲನ ಸೃಷ್ಟಿಸಿರುವ ಈ ಚಿತ್ರ ಎಬ್ಬಿಸಿರೋ ಅಲೆ ಕಂಡು ಬಹುತೇಕರು ಅಚ್ಚರಿಗೊಂಡಿದ್ದಾರೆ. ಯಶ್ ಅಭಿಮಾನಿಗಳ ಕುತೂಹಲವಂತೂ ಯಶ್ ಕೆಜಿಎಫ್‌ಗಾಗೇ ಬಿಟ್ಟಿರೋ ಉದ್ದ ಗಡ್ಡದ ಕೂದಲಂತೆಯೇ ದಿನೇ ದಿನೆ ಬೆಳೆದುಕೊಳ್ಳಲಾರಂಭಿಸಿದೆ!

 

 

ಇಂಥಾ ಕೆಜಿಎಫ್ ಚಿತ್ರದ ಐಟಂ ಸಾಂಗ್’ವೊಂದರಲ್ಲಿ ಸೌತ್ ಸುಂದರಿ ತಮನ್ನಾ ಹೆಜ್ಜೆ ಹಾಕಿರುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಹಳೆಯ ಹಾಡು ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡಿಗೆ ತಮನ್ನಾ ಸೊಂಟ ಬಳುಕಿಸಿದ್ದಾರೆ. 1970ರ ‘ಪರೋಪಕಾರಿ’ ಸಿನಿಮಾದಲ್ಲಿ ಈ ಹಾಡು ಇದೆ. ಈ ಹಾಡನ್ನು ಕೆಜಿಎಫ್ ಸಿನಿಮಾದಲ್ಲಿ ರೀ-ಕ್ರಿಯೇಟ್ ಮಾಡಲಾಗುತ್ತಿದೆ. ಹಾಡಿಗೆ ಯಶ್ ಮತ್ತು ತಮನ್ನಾ ಜೊತೆಯಾಗಿ ಡ್ಯಾನ್ಸ್ ಮಾಡಿದ್ದಾರೆ.. ಮೂಲಗಳ ಪ್ರಕಾರ ಈ ಸಾಂಗ್​ಗೆ ತಮನ್ನಾಗೆ ಬರೋಬ್ಬರಿ 40 ಲಕ್ಷ ರೂಪಾಯಿ ಸಂಭಾವನೆ ನೀಡಲಾಗಿದೆಯಂತೆ.

ಅಂದಹಾಗೆ ಈಗಾಗಲೇ ಚಿತ್ರೀಕರಣವನ್ನು ಬಹುತೇಕ ಮುಗಿಸಿಕೊಂಡಿರುವ ಚಿತ್ರತಂಡ ಚೆನ್ನೈನಲ್ಲಿ ಪ್ಯಾಚ್ ವರ್ಕ್ ಕೆಲಸಗಳನ್ನು ಮಾಡುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದೂ ಕೂಡಾ ಈ ಚಿತ್ರದ ಆಕರ್ಷಣೆಗಳಲ್ಲೊಂದು. ಇನ್ನುಳಿದಂತೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದು ಭುವನ್ ಗೌಡ ಅವರ ಕ್ಯಾಮರಾ ಕೈಚಳಕ ಚಿತ್ರಕ್ಕಿರಲಿದೆ. ಶ್ರೀನಿಧಿ ಶೆಟ್ಟಿ ಯಶ್’ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top