ಮನೋರಂಜನೆ

ಕನ್ನಡದ ಈ ಸ್ಟಾರ್ ಕರೆದರೇ ಈಗಲೇ ಕನ್ನಡ ಸಿನಿಮಾದಲ್ಲಿ ನಟಿಸುತ್ತೇನೆ ಅಂದ್ರು ತೆಲುಗು ಸ್ಟಾರ್ ನಾಗಾರ್ಜುನ.

ತೆಲುಗು ಚಿತ್ರರಂಗದಲ್ಲಿ ಚಿರಯುವಕ ಎಂದೇ ಗುರುತಿಸಿಕೊಂಡಿರುವ ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ ಕನ್ನಡ ಸಿನಿಮಾಗಳಲ್ಲಿ ನಟಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಕಳೆದ ಮೂವತ್ತೆರೆಡು ವರ್ಷಗಳಿಂದಲೂ ತೆಲುಗು ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ನಾಗಾರ್ಜುನ ತಮ್ಮ ವೃತ್ತಿಬದುಕಿನಲ್ಲೇ ಬಹುತೇಕ ಎಲ್ಲಾ ರೀತಿಯ ಪಾತ್ರಗಳನ್ನೂ ನಿರ್ವಹಿಸಿದ್ದಾರೆ. ಇಂಥ ನಾಗಾರ್ಜುನ “ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕರೆದರೆ ಈಗಲೇ ನಾನು ಕನ್ನಡ ಸಿನಿಮಾ ಮಾಡುತ್ತೀನಿ” ಎಂದು ಹೇಳಿದ್ದಾರೆ.

 

 

ಬೆಂಗಳೂರಿನ ಮಾರತಹಳ್ಳಿಯಲ್ಲಿ ಆರಂಭವಾದ ಚಿನ್ನದ ಮಳಿಗೆಯೊಂದರ ಉದ್ಘಾಟನೆ ಸಮಾರಂಭಕ್ಕೆ ನಾಗಾರ್ಜುನ್ ಹಾಗೂ ಶಿವರಾಜ್‍ಕುಮಾರ್ ಆಗಮಿಸಿದ್ದರು.. ಇಬ್ಬರೂ ಒಟ್ಟಿಗೆ ಮಳಿಗೆಯನ್ನು ಉದ್ಘಾಟಿಸಿ ಮಾಧ್ಯಮದವರ ಎದುರು ಸಾಕಷ್ಟು ವಿಷಯಗಳನ್ನು ಇಬ್ಬರೂ ಹಂಚಿಕೊಂಡರು. ಈ ವೇಳೆ ಕನ್ನಡದಲ್ಲಿ ಯಾವಾಗ ನಟಿಸುತ್ತೀರಿ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ನಾಗಾರ್ಜುನ ” ಒಂದು ಅದ್ಭುತವಾದ ಕಥೆ ಸಿಕ್ಕರೆ ಖಂಡಿತಾ ಕನ್ನಡ ಸಿನಿಮಾ ಮಾಡುತ್ತೇನೆ. ಅದರಲ್ಲೂ ಶಿವರಾಜಕುಮಾರ್ ಕರೆದರೆ ತಕ್ಷಣ ಬಂದು ಮಾಡ್ತೀನಿ.. ಡಾ. ರಾಜ್‍ಕುಮಾರ್ ಅವರ ಸಿನಿಮಾಗಳನ್ನು ನೋಡಿದ್ದೇನೆ. ಅಲ್ಲದೇ ನನ್ನ ಅಭಿನಯ ನೋಡಿ ಮೆಚ್ಚಿಕೊಂಡು ಅವರು ನನಗೆ ಫೋನ್ ಮಾಡಿ ಅಭಿನಂದಿಸಿದ್ದರು” ಎಂದು ಹೇಳಿದರು..

ನಂತರ ಮಾತನಾಡಿದ ಶಿವಣ್ಣ “ನಾಗರ್ಜುನ್ ಅವರ ಜೊತೆ ಸಿನಿಮಾ ಮಾಡಬೇಕೆಂದರೆ ಒಂದು ಒಳ್ಳೆಯ ಕತೆ ಸಿಗಬೇಕು, ಅಂತದ್ದೊಂದು ಒಳ್ಳೆ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ನಾವಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತೇವೆ, ಅಷ್ಟೇ ಅಲ್ಲದೇ ಕನ್ನಡ ಹಾಗೂ ತೆಲುಗು ಎರಡೂ ಭಾಷೆಯಲ್ಲಿಯೂ ಸಿನಿಮಾ ಮಾಡಬಹುದು” ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top