ಸಮಾಚಾರ

ನಮ್ಮ ಬೆಂಗಳೂರಿಗೆ ಬರ್ತಿದರಂತೆ ಖ್ಯಾತ ನಟಿ ಡಾರ್ಲಿಂಗ್ ಕಾಜೋಲ್ ಅಗರ್ವಾಲ್,ಯಾಕ್ ಅಂತೆ ಗೊತ್ತಾ ,ನೀವೇ ನೋಡಿ

ಇತ್ತೀಚಿಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡುತ್ತಿರುವ ಕಾಜಲ್ ಅಗರ್ವಾಲ್ ಈಗ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾಳೆ. ಕಾಜಲ್ ಅಗರ್ವಾಲ್ ಗೆ ಅನೇಕ ಬಾರಿ ಬಾಲಿವುಡ್ ಆಫರ್ ಕೂಡ ಬರುತ್ತಿವೆ. ಕಾಜಲ್ ಈ ವರ್ಷ ನಂದಮುರಿ ಕಲ್ಯಾಣ್ ರಾಮ್ ಅವರ ಎಂಎಲ್ಎ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ಬಾಲಿವುಡ್​ನ ಸೂಪರ್​ ಹಿಟ್​ ಸಿನಿಮಾ ಕ್ವೀನ್​ ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ರಿಮೇಕ್​ ಆಗ್ತಾ ಇದ್ದು ಇದಕ್ಕೆ ಬಟರ್ ಫ್ಲೈ ಎಂದು ಹೆಸರಿಡಲಾಗಿದೆ. ಇದನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ. ತೆಲಗು ಭಾಷೆಯ ಸಿನಿಮಾದಲ್ಲಿ ಕಾಜಲ್​ ಅಗರ್​ವಾಲ್​​ ಅಭಿನಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಮೈಸೂರಿಗೆ ಕಾಜಲ್ ಅಗರ್ವಾಲ್ ಅವರು ಶೂಟಿಂಗ್ ನಿಮಿತ್ಯ ಬಂದಿದ್ದರು. ಅಂದಹಾಗೆ ಈ ಬಾರಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ ಶೂಟಿಂಗ್ ನಿಮಿತ್ಯ ಅಲ್ಲ.. ಮುಂದೆ ಓದಿ.

ಕಾಜಲ್ ಅಗರ್ವಾಲ್ ಅವರು ಬೆಂಗಳೂರಿಗೆ ಬರುತ್ತಿರುವುದು ಖಾಸಗಿ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು. ಆಗಸ್ಟ್ 11 ಕ್ಕೆ ರಾಜಾಜಿನಗರದ ಕಾರ್ಯಕ್ರಮದಲ್ಲಿ ಭಾಗವಹಿಸಲು. ಶನಿವಾರ ಸಂಜೆ 4.30ಕ್ಕೆ ತನ್ನ ನೆಚ್ಚಿನ​​ ನಗರವಾಗಿರುವ ಬೆಂಗಳೂರಿಗೆ ಭೇಟಿ ಕೊಡುವುದನ್ನು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

 

ಸದ್ಯ ಬಟರ್ ಫ್ಲೈ ಶೂಟಿಂಗ್​ ಪೂರ್ತಿ​ ಆಗಿದ್ದು, 4 ಭಾಷೆಯಲ್ಲಿ ತಯಾರಾಗುತ್ತಿರುವ ಸಿನಿಮಾಗಳು ಆಕ್ಟೋಬರ್​ನಲ್ಲಿ ರಿಲೀಸ್ ಆಗಲಿವೆ. ನಾಲ್ಕು ಭಾಷೆಗಳಲ್ಲಿ ಏಕ ಕಾಲಕ್ಕೆ ರೆಡಿ ಆಗ್ತಾ ಇದ್ರೂ ಬೇರೆ ಬೇರೆಯದ್ದೇ ಫೀಲ್​ ನೀಡಲಿವೆ. ಯೂರೋಪ್​​​ ಭಾಗದ ಸೀನ್​ಗಳು ಪ್ರೇಕ್ಷಕನಿಗೆ ಖುಷಿ ಕೊಡಲಿವೆಯಂತೆ ಎಂದು ಚಿತ್ರತಂಡ ಹೇಳಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top