ಸಮಾಚಾರ

ಅತ್ಯಾಚಾರ ಮತ್ತು ವಂಚನೆ ಪ್ರಕರಣ- ಮತ್ತೆ ಸಂಕಷ್ಟದಲ್ಲಿ ಸಿಲುಕಿದ ಸದಾನಂದಗೌಡರ ಪುತ್ರ ಕಾರ್ತಿಕ್.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಸುಪುತ್ರ ಕಾರ್ತಿಕ್ ಗೌಡ ನನ್ನ ಗಂಡ, ಅವರು ನನನ್ನು ಅತ್ಯಾಚಾರ ಮಾಡಿ ಮೋಸ ಮಾಡಿದ್ದಾರೆ’ ಅಂತ ಹೇಳಿ ಏಕಾಏಕಿ ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಸ್ಯಾಂಡಲ್ ವುಡ್ ನಟಿ ಮೈತ್ರಿಯಾ ಗೌಡ ಇದೀಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಮೈತ್ರಿಯಾ ಗೌಡ ಹಾಕಿರುವ ಅತ್ಯಾಚಾರ ಮತ್ತು ವಂಚನೆಯ ಆರೋಪದ ಪ್ರಕರಣದಲ್ಲಿ ಕಾರ್ತಿಕ್​ ಗೌಡ ಮತ್ತೆ ವಿಚಾರಣೆ ಎದುರಿಸಬೇಕಾಗಿದೆ.

 

 

ತಮ್ಮನ್ನು ವಿವಾಹವಾಗಿ ಕಾರ್ತಿಕ್ ಗೌಡ ಅವರು ವಂಚಿಸಿದ್ದಾರೆ ಎಂದು ಆರೋಪಿಸಿ ನಟಿ ಮೈತ್ರಿಯಾ ಗೌಡ ಅವರು ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ಈ ನಡುವೆ ಮೈತ್ರಿಯಾಗೌಡ ಅವರು ಸಲ್ಲಿಸಿದ್ದ ಅರ್ಜಿ ದುರುದ್ದೇಶಪೂರಕವಾದದ್ದು. ಹೀಗಾಗಿ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕಾರ್ತಿಕ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿ ಮೈತ್ರಿಯಾಗೌಡ ಅವರು ಸಲ್ಲಿಸಿದ್ದ ದೂರನ್ನು ವಜಾಗೊಳಿಸಿದ್ದಲ್ಲದೇ ಕೆಳ ನ್ಯಾಯಾಲಯದಲ್ಲಿನ ವಿಚಾರಣೆಗೂ ಬ್ರೇಕ್ ಹಾಕಿತ್ತು.

ಹೈಕೋರ್ಟ್​ ತೀರ್ಪಿನ ನಂತರ ಮೈತ್ರಿಯಾಗೌಡ ಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, “ಸದರಿ ಪ್ರಕರಣದ ವಿಚಾರಣೆಯನ್ನ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸುವ ಅಗತ್ಯವಿದೇ. ದೂರುದಾರಳ ಮೇಲೆ ಅತ್ಯಾಚಾರವಾಗಿರುವ ಬಗ್ಗೆ ಏನಾದರೂ ಪುರಾವೆ ಇದ್ದರೆ ತನಿಖೆ ಮಾಡಿ.,” ಎಂದು ಹೇಳಿದೆ. ಆದ್ದರಿಂದ ಪ್ರಕರಣ ಮತ್ತೆ ಜೀವಪಡೆದುಕೊಂಡಿದ್ದು ಸುಪ್ರೀಂಕೋರ್ಟ್​ ಆದೇಶದಂತೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಪುತ್ರ ಕಾರ್ತಿಕ್​ ಗೌಡಗೆ ಮತ್ತೆ ಸಂಕಷ್ಟ ಎದುರಾಗಿದ್ದು ಮೈತ್ರಿಯಾ ಗೌಡ ಕೇಸಲ್ಲಿ ವಿಚಾರಣೆ ಎದುರಿಸಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top