ಸಮಾಚಾರ

ಕರುಣಾನಿಧಿ ಅಭಿಮಾನಿಗಳು ಭಾವುಕರಾಗುವಂತಹ ಕೆಲಸ ಮಾಡಿದ ಅವರು ಸಾಕಿದ ನಾಯಿ

ತಮಿಳುನಾಡು ಮಾಜಿ ಮುಖ್ಯಮಂತ್ರಿ, ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಮಂಗಳವಾರ ಸಂಜೆ ಸಾವನ್ನಪ್ಪಿದ್ದಾರೆ. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಸಂಜೆ 6.10ಕ್ಕೆ ಚೆನ್ನೈ ನಗರದ ಕಾವೇರಿ ಆಸ್ಪತ್ರೆಯಲ್ಲಿ ಅಸು ನೀಗಿದರು ಎಂದು ತಿಳಿದು ಬಂದಿದೆ.

ಮಾಜಿ ಸಿಎಂ ಕರುಣಾನಿಧಿ ಅವರ ಸಾವಿಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಕರುಣಾನಿಧಿ ಅವರ ಚೆನ್ನೈ ನಗರದಲ್ಲಿರುವ ಮನೆಯಲ್ಲಿ ಆಕ್ರಂದನ ಮುಗಿಲುಮುಟ್ಟಿತ್ತು, ಇನ್ನು ಅವರು ಸಾಕಿ ಸಲುಹಿದ್ದ ನಾಯಿ ಕರುಣಾನಿಧಿ ಅವರ ಫೋಟೋ ಮುಂದೆ ಕುಳಿತು ಕಣ್ಣೀರು ಹಾಕಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕರುಣಾನಿಧಿ ಅವರು ಸಾಕಿದ್ದ ನಾಯಿ ಫೋಟೋ ಮುಂದೆ ಕುಳಿತು ಕಣ್ಣೀರಿಟ್ಟಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ ಎಂದು ತಿಳಿದು ಬಂದಿದೆ.

 

 

ಕರುಣಾನಿಧಿ ಅವರು ಈ ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದರಂತೆ. ಆದ್ದರಿಂದ ಈ ನಾಯಿ ಇವರ ಸಾವಿನಿಂದ ಬಹಳ ಕಣ್ಣೀರಿಡುತ್ತಿದೆ. ಇದನ್ನು ನೋಡಿದ ಕರುಣಾನಿಧಿ ಅಭಿಮಾನಿಗಳ ದುಃಖ ಬಿಕ್ಕಳಿಸಿ ಬಂದು ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

3 ಜೂನ್ 1924 ನಲ್ಲಿ ತಮಿಳುನಾಡು ನಾಗಪಟ್ಟಣಂ ಜಿಲ್ಲೆ ತಿರುಕುವಲೈ ರಲ್ಲಿ ಮುತ್ತುವೇಲು ಮತ್ತು ಅಂಜು ದಂಪತಿಯ ಮಗನಾಗಿ ಹುಟ್ಟಿದ ಕರುಣಾನಿಧಿ ಸಿನಿಮಾ ಕಥೆ, ಸಂಭಾಷಣೆಕಾರ ಆಗಿ ವೃತ್ತಿಜೀವನವ ಶುರು ಮಾಡಿದರು. ನಂತರದ ದಿನಗಳಲ್ಲಿ ಹಿಂದಿ ಭಾಷೆ ವಿರೋಧಿ, ದ್ರಾವಿಡ ಹೋರಾಟದ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1957 ರಿಂದ ನಿರಂತರವಾಗಿ ಇಲ್ಲಿಯವರೆಗೂ ಅವರು ಶಾಸಕರಾಗಿದ್ದಾರೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದಿದ್ದರು. ಇನ್ನು 5 ಬಾರಿ ಮುಖ್ಯಮಂತ್ರಿಯಾದ ಹೆಗ್ಗಳಿಕೆ ಅವರಿಗೆ ಇದೆ. 1969-71, 1971-76, 1989-91, 1996-2001 ಮತ್ತು 2006- 2011ರವರೆಗೂ ಮುಖ್ಯಮಂತ್ರಿ ಆಗಿ ತಮಿಳುನಾಡಿನಲ್ಲಿ ಆಡಳಿತ ನಡೆಸಿದ್ದಾರೆ. 2004ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದಲ್ಲಿ ಮಿತ್ರಪಕ್ಷಗಳು ಎಲ್ಲ 39 ಸ್ಥಾನಗಳನ್ನೂ ಗೆಲ್ಲುವ ಮೂಲಕ ಯುಪಿಎ ಮೈತ್ರಿಕೂಟಕ್ಕೆ ಬಲ ನೀಡಿದ ಹಿರಿಮೆ ಕರುಣಾನಿಧಿ ಅವರಿಗೆ ಸಲ್ಲುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top