ಸಮಾಚಾರ

ಕುರುಕ್ಷೇತ್ರ ಮೊದಲೋ, ಸೀತಾರಾಮ ಕಲ್ಯಾಣ ಮೊದಲೋ – ಅಭಿಮನ್ಯು ನಿಖಿಲ್ ಹೇಳಿದ್ದೇನು

ಸ್ಯಾಂಡಲ್ವುಡ್ ಬಹುನಿರೀಕ್ಷಿತ ಸಿನಿಮಾ ಆಗಿರುವ ‘ಕುರುಕ್ಷೇತ್ರ’ ರಿಲೀಸ್ ತಡ ಅಗೊದಿಕ್ಕೆ ಕಾರಣ ನಾನಲ್ಲ . ಆದರೆ ‘ಕುರುಕ್ಷೇತ್ರ’ ಚಿತ್ರವೇ ಮೊದಲು ಬಿಡುಗಡೆಯಾಗಲಿ ಎಂದು ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರಧಾರಿ ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ‘ಕುರುಕ್ಷೇತ್ರ’ ಬಿಡುಗಡೆ ತಡವಾಗುತ್ತಿರುವುದಕ್ಕೆ ನಿಖಿಲ್ ಅವರೇ ಕಾರಣ ಎನ್ನುವ ಮಾತುಗಳು ಗಾಂಧಿ ನಗರದಲ್ಲಿ ಕೇಳಿ ಬಂದಿದ್ದವು. ದುರ್ಯೋಧನ- ಅಭಿಮನ್ಯು ನಡುವೆ ‘ಕೋಲ್ಡ್ ​ವಾರ್​’ ಶುರುವಾಗಿದೆ ಎಂದೆಲ್ಲ ಮಾತನಾಡಿದ್ದರು. ದರ್ಶನ್​ಗೆ ಹೆಚ್ಚಿನ ಪ್ರಾಮುಖ್ಯತೆ ಇರಬೇಕಿದ್ದ ಸಿನಿಮಾದಲ್ಲಿ, ನಿಖಿಲ್​ ಪಾತ್ರವನ್ನು ಹಿಗ್ಗಿಸಲಾಗಿದೆ. ಪ್ರಾರಂಭದಲ್ಲಿ ಕಡಿಮೆ ಅವಧಿಗಿದ್ದ ಪಾತ್ರವನ್ನು 32 ನಿಮಿಷಕ್ಕೂ ಹೆಚ್ಚು ಹೊತ್ತು ಹೆಣೆಯಲಾಗಿದೆ. ಈ ವೈಮನಸ್ಸಿನಿಂದ ನಿಖಿಲ್ ಇನ್ನೂ​ ಡಬ್ಬಿಂಗ್​ಗೆ ಬಂದಿಲ್ಲ ಅನ್ನೋ ಮಾತು ಗಾಂಧಿನಗರದಲ್ಲಿ ಹರಿದಾಡಿತ್ತು.

 

 

 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿಖಿಲ್, ‘ಕುರುಕ್ಷೇತ್ರ’ ರಿಲೀಸ್ ಎಡಿಎ ಬಳಿಕವೇ ‘ಸೀತಾರಾಮ ಕಲ್ಯಾಣ’ ರಿಲೀಸ್ ಆಗಲಿದೆ. ಆ ಸಿನೆಮಾಗೆ ನನ್ನ ಡಬ್ಬಿಂಗ್ ಬಾಕಿ ಇದೆ ನಿಜ. ಆದರೆ ಎರಡು ದಿನಗಳ ಕೆಲಸ ಅಷ್ಟೇ. ಅವರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್ ಮಾಡಿ ಬರುತ್ತೇನೆ’ ಎಂದಿದ್ದಾರೆ. ಇನ್ನು ನಿಖಿಲ್​​​​ ಪಾತ್ರ ದೊಡ್ಡದಾಗಿರುವ ಬಗ್ಗೆ ದರ್ಶನ್ ಕೋಪಗೊಂಡಿದ್ದಾರೆ ಎಂಬ ಗಾಸಿಪ್​ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ‘ಅಭಿಮನ್ಯು ಪಾತ್ರ ಕಾಲ್ಪನಿಕವಲ್ಲ. ಅದೊಂದು ಐತಿಹಾಸಿಕ ಪಾತ್ರ. ಚಿತ್ರದಲ್ಲಿ ಆ ಪಾತ್ರ ಎಷ್ಟು ಇರಬೇಕು ಅಷ್ಟು ಇದೆ’ ಎಂದು ಹೇಳಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top