ಸಮಾಚಾರ

ಮೋದಿಯೇ ದೇಶದ ಅತಿದೊಡ್ಡ ಭಯೋತ್ಪಾದಕ : ಶಾಸಕನ ವಿವಾದಾತ್ಮಕ ಹೇಳಿಕೆ.

ಜಾವೇದ್‌ ರಾಣಾ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟು ವಾಗ್ದಾಳಿ ನಡೆಸಿದ್ದಾರೆ.. ಪ್ರಧಾನಿ ಹುದ್ದೆಯ ಘನತೆಗೆ ಸ್ವಲ್ಪವೂ ಗೌರವ ಕೊಡದೆ ಹೇಳಿಕೆ ನೀಡಿರುವ ರಾಣಾ “ದೇಶದಲ್ಲಿ ನರೇಂದ್ರ ಮೋದಿಯೇ ಅತಿದೊಡ್ಡ ಉಗ್ರ ಮತ್ತು ಮಾನವೀಯತೆಯ ಹಂತಕ” ಎಂದು ನಾಲಿಗೆ ಹರಿಬಿಟ್ಟಿದ್ದಾರೆ.. ರಾಣಾ ಅವರ ಈ ಹೇಳಿಕೆ ಇದೀಗ ದೇಶಾದ್ಯಂತ ಟೀಕೆಗೆ ಗುರಿಯಾಗುತ್ತಿದೆ..

 

 

ಕಳೆದ ಸೋಮವಾರ ಪೂಂಚ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಣಾ ಮಾತನಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅದರಲ್ಲಿ ಮೋದಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ. “ದೇಶದ ಅತೀದೊಡ್ಡ ಭಯೋತ್ಪಾದಕ ಮತ್ತು ಮಾನವೀಯತೆಯ ಹಂತಕ ನಮ್ಮ ದೇಶದ ಪ್ರಧಾನಿಯಾಗಿರುವುದು ನಿಜಕ್ಕೂ ದುರದೃಷ್ಟಕರ ಎಂದಿರುವ ರಾಣಾ ತಮ್ಮ ಈ ಮಾತಿನ ವರಸೆಗೆ 2002ರ ಗೋಧ್ರೋತ್ತರ ಗಲಭೆಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. “ಗುಜರಾತ್’ನಲ್ಲಿ ಲಕ್ಷಾಂತರ ಜನರನ್ನು ಕೊಲ್ಲಿಸಿದ ಕೊಲೆಗಾರ ಈಗ ಎಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಅಂದಹಾಗೆ ಶಾಸಕ ರಾಣಾ ಈ ಹಿಂದೆಯೂ ಇದೇ ರೀತಿಯ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಒಂದು ವೇಳೆ ಕೇಂದ್ರ ಸರ್ಕಾರ ಸಂವಿಧಾನದ 35a ಮತ್ತು 370ನೇ ವಿಧಿಯನ್ನು ಬದಲಾಯಿಸಿದರೇ ಕಾಶ್ಮೀರದಲ್ಲಿ ಇನ್ನೆಂದೂ ತ್ರಿವರ್ಣ ಧ್ವಜ ಹರಿಸುವುದಿಲ್ಲ ಎಂದು ಇತ್ತೀಚಿಗೆ ಹೇಳಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top