ಸಮಾಚಾರ

ಕಳೆದುಹೋಗಿದ್ದ ಮೊಬೈಲನ್ನು ಸ್ಮಾರ್ಟ್ ಆಗಿ ಈಕೆ ಹುಡುಕಿದ್ದೇಗೆ ಗೊತ್ತಾ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಆದರೆ ಮೊಬೈಲ್ ಕಳೆದುಕೊಂಡ ಬಹುತೇಕ ವ್ಯಕ್ತಿಗಳಿಗೆ ಮೊಬೈಲ್ ಸಿಗುವುದೇ ಇಲ್ಲ. ಆದರೆ ವಾಣಿಜ್ಯ ನಗರಿ ಮುಂಬೈ ನಲ್ಲಿ ಕಳೆದುಕೊಂಡ ಮೊಬೈಲ್ ​ಫೋನನ್ನು ಸ್ನೇಹಿತರ ಮೊಬೈಲ್ ಸಹಾಯದಿಂದ ಕಾಲೇಜು ವಿದ್ಯಾರ್ಥಿನಿ ಒಬ್ಬಳು ಪತ್ತೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.

 

 

 

 

19 ವರ್ಷ ವಯಸ್ಸಿನ ಜೀನತ್ ಬಾನು ಹಕ್ ಎಂಬ ವಿದ್ಯಾರ್ಥಿನಿ ಪ್ರವಾಸ ಮುಗಿಸಿಕೊಂಡು ಮನೆಗೆ ವಾಪಸಾದಾಗ ಮೊಬೈಲ್ ನಾಪತ್ತೆ ಆಗಿರುವುದು ಗಮನಕ್ಕೆ ಬಂತು. ಬಳಿಕ ‘ಸ್ಮಾರ್ಟ್’ ಆಗಿ ಫೋನ್ ಹುಡುಕುವ ಪ್ರಯತ್ನಕ್ಕೆ ಜೀನತ್ ಮುಂದಾದಳು. ಪೊಲೀಸ್ ಠಾಣೆಗೆ ದೂರನ್ನು ನೀಡಿ, ಸಿಮ್ ನ್ನು ಬ್ಲಾಕ್ ಮಾಡಿಸಿದಳು. ತಕ್ಷಣ ಸ್ನೇಹಿತರ ಮೊಬೈಲ್ ನಿಂದ ತನ್ನ ಗೂಗಲ್‌ ಅಕೌಂಟ್‌ಗೆ ಲಾಗ್‌ ಇನ್‌ ಆದ ಆಕೆ, ಟ್ರೇಸ್ ಮೈ ಮೊಬೈಲ್’ ಆಯ್ಕೆ ಬಳಸಿ ಮೊಬೈಲ್ ಎಲ್ಲಿದೆ ಎಂದು ಹುಡುಕಿದಳು. ಇದೇ ಮೊಬೈಲ್‌ ಬಳಸಿ ಆತ ರೈಲ್ವೆ ಟಿಕೆಟ್‌ ಬುಕ್‌ ಮಾಡಿದ್ದು, ಜೀನತ್‌ಗೆ ಆತನ ಪಿಎನ್‌ಆರ್‌ ಸಂಖ್ಯೆ ಕೂಡ ಸಿಕ್ಕಿದೆ. ಗೂಗಲ್‌ ಫೋಟೋಸ್‌ಗೆ ತೆರಳಿ, ಫೋನ್‌ನಲ್ಲಿದ್ದ ಟಿಕೆಟನ್ನೂ ಅವಳು ಕಂಡು ಹಿಡಿದಿದ್ದಾಳೆ.

ರೇಲ್ವೆ ಸ್ಟೇಷನ್ ನಿಂದ ಸಂಜೆ 9.30ಕ್ಕೆ ರೈಲು ಹೊರಡುವುದು ಖಾತ್ರಿಯಾಯಿತು. ಆಕೆಯ ಮೊಬೈಲ್ ಬಳಸುತ್ತಿದ್ದ ಸೆಲ್ವರಾಜ್ ಶೆಟ್ಟಿಯನ್ನು ರೇಲ್ವೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಧರ್ಭದಲ್ಲಿ ಈ ಫೋನ್ ತನ್ನದೇ ಎಂದು ವಾದಿಸಿದ ಆತ, ತನ್ನ ಜತೆಗೆ ಮಹಿಳೆ ಇದ್ದು, ಫೋನ್‌ ಆಕೆಗೆ ಸೇರಿದ್ದು ಎಂದು ಮೊದಲಿಗೆ ಪೊಲೀಸರೊಂದಿಗೆ ಜಗಳವಾಡಿ ಬಳಿಕ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top