ಸಮಾಚಾರ

ಕೊನೆಗೂ ಫಿಕ್ಸ್ ಆಗೇ ಬಿಡ್ತು ನವ ಜೋಡಿ ಹಕ್ಕಿಗಳಾದ ಪವನ್ ಒಡೆಯರ್ ಹಾಗೂ ಅಪೇಕ್ಷಾ ತಾಳಿ ಕಟ್ಟೋ ಟೈಮ್ .

ಗೋವಿಂದಾಯ ನಮಃ, ಗೂಗ್ಲಿ, ರಣವಿಕ್ರಮದಂತಹ ಸೂಪರ್ ಹಿಟ್ ಸಿನೆಮಾಗಳನ್ನು ನೀಡಿರುವ ಪವನ್ ಒಡೆಯರ್ ಹಾಗೂ ನಟಿ ಅಪೇಕ್ಷಾ ಪುರೋಹಿತ್ ನಿಶ್ಚಿತಾರ್ಥ ಕಳೆದ ವರ್ಷ ಅದ್ಧೂರಿಯಾಗಿ ಬಾಗಲಕೋಟೆಯಲ್ಲಿ ನೆರವೇರಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ. ಪವನ್ ಒಡೆಯರ್ ಮದುವೆ ಯಾವಾಗ ಆಗುತ್ತಾರೆ ಎಂಬ ಕುತೂಹಲ ಮನೆಮಾಡಿತ್ತು. ಈ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಪವನ್ ಮದುವೆ ದಿನಾಂಕ ಈಗ ಫಿಕ್ಸ್ ಆಗಿದೆ.

 

 

 

ಸದ್ಯ ಪುನೀತ್ ರಾಜಕುಮಾರ್ ಅಭಿನಯ ಮಾಡುತ್ತಿರುವ ನಟಸಾರ್ವಭೌಮ ಸಿನಿಮಾ ನಿರ್ದೇಶನ ಮಾಡುತ್ತಿರುವ ನಿರ್ದೇಶಕ ಪವನ್ ಒಡೆಯರ್-ನಟಿ ಅಪೇಕ್ಷಾ ಪುರೋಹಿತ್ ಮದುವೆ ಸಮಾರಂಭ ಮಹೋತ್ಸವ ಆಗಸ್ಟ್ 20 (ಸೋಮವಾರ) ರಂದು ನಡೆಯಲಿದೆ. ವಧು ಅಪೇಕ್ಷಾ ತವರು ಬಾಗಲಕೋಟೆಯ ವಿದ್ಯಗಿರಿಯಲ್ಲಿರುವ ಗೌರಿಶಂಕರ್ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9.05 ಕ್ಕೆ ಮದುವೆ ನೆರವೇರಲಿದೆ. ಅಂದಹಾಗೆ ಬಾಗಲಕೋಟೆಯಲ್ಲೇ ಮದುವೆ ನಡೆಯಲು ಕಾರಣವೂ ಇದೆ. ಮುಂದೆ ಓದಿ.

ಪವನ್ ಒಡೆಯರ್ ಭಾವಿ ಪತ್ನಿ ಅಪೇಕ್ಷಾ ಪುರೋಹಿತ್ ಮೂಲತಃ ಬಾಗಲಕೋಟೆ ಜಿಲ್ಲೆಯವರು ಹಾಗು ಪವನ್ ಬೆಳಗಾವಿ ಜಿಲ್ಲೆಯವರು. ಈ ಹಿಂದೆ ನಿಶ್ಚಿತಾರ್ಥ ಕೂಡ ಬಾಗಲಕೋಟೆಯಲ್ಲೇ ನಡೆದಿತ್ತು. ಮದುವೆ ಅದ್ದೂರಿಯಾಗಿ ನಡೆಯಲಿದ್ದು ಮದುವೆಗೆ ಬಹುತೇಕ ಸಿನಿಮಾ ತಾರೆಯರು ಆಗಮಿಸುವ ನಿರೀಕ್ಷೆ ಇದೆ ಎನ್ನಲಾಗಿದೆ. ಪವನ್ ಈಗ ನಟಸಾರ್ವಭೌಮ ಸಿನಿಮಾ ಜೊತೆಗೆ ಮದುವೆ ಪತ್ರಿಕೆ ಹಂಚುವುದರಲ್ಲಿ ಕೂಡ ಬ್ಯುಸಿ ಆಗಿದ್ದಾರೆ.

ಸೀರಿಯಲ್ ನಟಿ ಆಗಿದ್ದ ಅಪೇಕ್ಷಾ ಪುರೋಹಿತ್ ಅವರು ಟಿ ಎನ್ ಸೀತಾರಾಂ ನಿರ್ದೇಶನದ ಕಾಫಿತೋಟ ಚಿತ್ರದ ಮೂಲಕ ಗಮನ ಸೆಳೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top