ಮನೋರಂಜನೆ

ತನ್ನ ಇಡೀ ದೇಹವನ್ನೇ ದಾನ ಮಾಡಿದ ಸ್ಟಾರ್ ನಟಿ ರಾಧಿಕಾ.

ರಾಧಿಕಾ ಆಪ್ಟೆ ಬಿಂದಾಸ್ ಆಗಿ ಬಟ್ಟೆ ಬಿಚ್ಚೋದರ ಮೂಲಕವೇ ಆಗಾಗ ಸದ್ದು ಮಾಡುತ್ತಾ ವಿವಾದಕ್ಕೂ ಕಾರಣವಾಗುವ ನಟಿ. ತೀರಾ ಕಡಿಮೆ ಬಟ್ಟೆ ಹಾಕಿ, ಹೆಚ್ಚು ದರ್ಶನ ಭಾಗ್ಯ ಕರುಣಿಸುವ ಈಕೆ ತರೇಹವಾರಿ ವಿವಾದಗಳ ಮೂಲಕವೇ ಸುದ್ದಿಯಾಗಿದ್ದು ಹೆಚ್ಚು.. ವಿವಾದಗಳ ಮೂಲಕ ಪ್ರಚಾರದಲ್ಲಿರೋದು ಹೇಗೆ ಎಂಬ ವಿಚಾರದ ಬಗ್ಗೆ ರಾಧಿಕಾ ಆಪ್ಟೆ ಖಂಡಿತವಾಗಿಯೂ ಆಸಕ್ತರಿಗೆ ಸದಾ ಹೆಬ್ಬಾಗಿಲು ತೆರೆದು ಕುಂತಿರೋ ಯೂನಿವರ್ಸಿಟಿ!

 

 

ಇಂಥಾ ಬೋಲ್ಡ್ ಅಂಡ್ ಬ್ಯುಟಿಫುಲ್ ನಟಿ ‘ರಾಧಿಕಾ’ ತನ್ನ ಇಡೀ ಅಂಗಾಂಗವನ್ನೇ ದಾನ ಮಾಡಿದ್ದಾಳೆ, ಹಾಗಂತ ಅನ್ಯತಾ ಏನಾದರೂ ಭಾವಿಸಿಕೊಂಡರೆ ಅದು ನಿಮ್ಮ ಆತುರದ ನಿರ್ಧಾರವಾಗುತ್ತದೆ. ಯಾಕೆಂದರೆ ರಾಧಿಕಾ ಆಪ್ಟೆ ತನ್ನ ದೇಹವನ್ನು ದಾನ ಮಾಡಿರುವುದು ಆಸ್ಪತ್ರೆಯೊಂದಕ್ಕೆ. 32 ವರ್ಷ ವಯಸ್ಸಿನ ಈಕೆ ಮುಂಬೈನ ಸಹ್ಯಾದ್ರಿ ಆಸ್ಪತ್ರೆಗೆ ಭೇಟಿ ನೀಡಿ ಕಣ್ಣು, ಹೃದಯ, ಶ್ವಾಸಕೋಶ, ಲಿವರ್, ಕಿಡ್ನಿ ಒಳಗೊಂಡಂತೆ ತಮ್ಮ ಅಂಗಾಂಗವನ್ನು ಸಂಪೂರ್ಣವಾಗಿ ದಾನ ಮಾಡಿದ್ದಾರೆ..

ಮತ್ತೆ ತಾನೊಬ್ಬ ನಟಿ ಮಾತ್ರವಲ್ಲ, ಸಾಮಾಜಿಕ ಕಾಳಜಿಯಿರುವ ಮಾದರಿ ಹೆಣ್ಣು ಎಂದು ಸಾಬೀತು ಪಡಿಸಿದ್ದಾರೆ., ಒಟ್ಟಿನಲ್ಲೇ ರಾಧಿಕಾ ಆಪ್ಟೆ ಎಂದರೆ ಕೇವಲ ಹಾಟ್ ಹೀರೋಯಿನ್, ಕಾಂಟ್ರೊವರ್ಸಿಯಲ್ ಕ್ವೀನ್ ಎಂದೇ ಭಾವಿಸುತ್ತಿರುವ ಜನರು ರಾಧಿಕಾ ಮಾಡಿರುವ ಈ ಕೆಲಸವನ್ನು ಹೊಗಳುವಂತೆ ಮಾಡುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top