fbpx
ಸಮಾಚಾರ

ಬರೋಬ್ಬರಿ 17 ವರ್ಷ ಮಾತು ಬಿಟ್ಟಿದ್ದ ಸಿನಿ ಜೋಡಿ ಯಾರ್ ಗೊತ್ತಾ,ಇವರೇ ನೋಡಿ

ಹಿಂದಿ ಚಿತ್ರರಂಗದ ಮೊಟ್ಟ ಮೊದಲ ಸೂಪರ್‌ ಸ್ಟಾರ್‌ ಎನಿಸಿಕೊಂಡಿದ್ದ ನಟ ರಾಜೇಶ್‌ ಖನ್ನಾ . 1970 ರ ದಶಕದಲ್ಲಿ ಸತತವಾಗಿ ಇವರ 15 ಚಿತ್ರಗಳು ಅತ್ಯಂತ ಯಶಸ್ವಿಯಾಗಿ, ಸೂಪರ್ ಹಿಟ್ ಎನಿಸಿಕೊಂಡವು. ಅಂದಿನಿಂದ ಇವರನ್ನು ಸೂಪರ್ ಸ್ಟಾರ್ ಎಂದು ಕರೆಯಲು ಶುರು ಮಾಡಿದರು. ಇವರ ಈ ದಾಖಲೆಯನ್ನು ಇಂದಿಗೂ ಯಾರಿಂದಲೂ ಮುರಿಯಲು ಸದ್ಯ ಆಗಿಲ್ಲ.

ಸಿನಿಮಾ ಜೀವನ ಎಷ್ಟೇ ಸುಂದರಮಯ ಆಗಿದ್ದರು ಕೂಡ ವಯಕ್ತಿಕ ಜೀವನದಲ್ಲಿ ಎಡವಿದ್ದರು. ಕೆಲವು ನಟಿಯರ ಜೊತೆಗೆ ತಳಕು ಹಾಕಿಕೊಂಡಿದ್ದರು. 1960ರ ನಂತರ ಮತ್ತು 1970ರ ಪ್ರಾರಂಭದಲ್ಲಿ ಖನ್ನಾ ಫ್ಯಾಷನ್​ ಡಿಸೈನರ್ ಹಾಗು ನಟಿ ಅಂಜು ಮಹೇಂದ್ರು ರವರೊಂದಿಗೆ ಪ್ರೀತಿಗೆ ಬಿದ್ದಿದ್ದರು. ಈ ಜೋಡಿ ಸುಮಾರು 7 ವರ್ಷಗಳ ಕಾಲ ಪ್ರೇಮಲೋಕದಲ್ಲಿ ವಿಹರಿಸಿತ್ತು. ಆದರೆ, ಬಳಿಕ ಅದೇನಾಯ್ತೋ ಈ ಜೋಡಿ ದೂರವಾಗಿತ್ತು. ಇದಾದ ಬಳಿಕ ಸುಮಾರು 17 ವರ್ಷಗಳ ಇವರಿಬ್ಬರು ಪರಸ್ಪರ ಮಾತನಾಡಿಯೇ ಇರಲಿಲ್ಲವಂತೆ. 2012ರಲ್ಲಿ ರಾಜೇಶ್ ಖನ್ನಾ ತೀರಿಕೊಂಡಾಗ, ಅಂಜು ಅಂತ್ಯಕ್ರಿಯೆಗೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.

 

 

 

1973ರಲ್ಲಿ ರಾಜೇಶ್ ಖನ್ನಾ ಮದುವೆಯಾಗಿದ್ದು ನಟಿ ಡಿಂಪಲ್​ ಕಪಾಡಿಯಾ ಅವರನ್ನು. ಇವರ ಪುತ್ರಿಯರಾದ ಟ್ವಿಂಕಲ್ ಖನ್ನಾ ಹಾಗು ರಿಂಕಿ ಖನ್ನಾ ಕೂಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ಹಾಗು ಡಿಂಪಲ್ ಜೋಡಿಯೂ 1984ರಲ್ಲಿ ದೂರವಾಯ್ತು ಎಂದು ಹೇಳಲಾಗುತ್ತಿದೆ. ಆದರೆ, ವಿಚ್ಛೇಧನದ ಪ್ರಕ್ರಿಯೆ ಪೂರ್ಣಗೊಳಿಸದೆಯೇ ಇವರಿಬ್ಬರು ದೂರವಾಗಿ ಬದುಕಲು ಆರಂಭಿಸಿದ್ದರು.

ಇನ್ನೊಂದು ವಿಶೇಷತೆ ಎಂದರೆ ಅಂಜು ಮಹೇಂದ್ರು ಇಂದಿಗೂ ಅವಿವಾಹಿತೆ ಆಗಿದ್ದು, ಇಂದಿಗೂ ರಾಜೇಶ್ ಜೊತೆಗಿನ ನೆನಪನ್ನು ಅಂಜು ಮೆಲುಕು ಹಾಕುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top