ಸಮಾಚಾರ

ವೈರಲ್ ಆಯಿತು ಈ ನಟ ಅಭಿಮಾನಿಗಳ ಬಳಿ ಮಾಡಿದ ಈ ಕೆಲಸ ,ಏನ್ ಆ ಕೆಲಸ ,ನೀವೇ ನೋಡಿ

ಇತ್ತೀಚಿನ ದಿನಗಳಲ್ಲಿ ರಣವೀರ್ ಸಿಂಗ್ ಮಾಧ್ಯಮಗಳ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ. ಅವರು ಎಲ್ಲೇ ಹೋದರು ಕ್ಯಾಮೆರಾ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ದೀಪಿಕಾ ಜೊತೆ ಕದ್ದು ಮುಚ್ಚಿ ಸುತ್ತಾಡಲು ಯತ್ನಿಸಿ ಹಲವಾರು ಭಾರಿ ಮಾಧ್ಯಮದ ಕಣ್ಣಿಗೆ ಸಿಕ್ಕಿ ಬಿದ್ದ ಘಟನೆ ನಾವು ನೋಡಿದ್ದೇವೆ. ಆದರೆ ಈ ಭಾರಿ ರಣವೀರ್ ಸಿಂಗ್ ಬೇರೆ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಏನದು ಮುಂದೆ ಓದಿ.

ಕೆಲವು ದಿನಗಳ ಹಿಂದೆ ಮುಂಬೈ ನಗರದಲ್ಲಿ ಮಳಿಗೆ ಉದ್ಘಾಟನೆ ಮಾಡಲು ಭೇಟಿ ನೀಡಿದ್ದ ರಣವೀರ್ ಸಿಂಗ್ ಆ ಸಂಧರ್ಭದಲ್ಲಿ ಮಹಿಳಾ ಅಭಿಮಾನಿಯೊಬ್ಬರಿಗೆ ನೂಕುನುಗ್ಗಲಿನಲ್ಲಿ ರಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು. ವಿಡಿಯೋ ವೈರಲ್ ಆಗಿ ರಣವೀರ್ ಸಿಂಗ್ ಅವರ ಕೆಲಸಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ ಎನ್ನಲಾಗಿದೆ.

ಈ ವಿಡಿಯೋ ನೋಡಿ:

Ranveer Singh At JACK & JONES Store | Ranveer Singh Out For Shopping

A post shared by 🔥🔥 (@bollywood.loverss_) on


ರಣವೀರ್ ಸಿಂಗ್ ಮಳಿಗೆಗೆ ಆಗಮಿಸಿದಾಗ ಭಾರಿ ಜನಸಾಗರ ಸೇರಿತು ಈ ಸಂಧರ್ಭದಲ್ಲಿ ಎಲ್ಲರು ಸೆಲ್ಫಿ ತೆಗೆದುಕೊಳ್ಳೂ ನೂಕುನುಗ್ಗಲು ಮಾಡಿದರು. ಮಹಿಳಾ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಬಂದಾಗ ಅಲ್ಲಿದ್ದವರು ಆಕೆಯನ್ನು ತಳ್ಳುವ ಪ್ರಯತ್ನ ಯತ್ನಿಸಿದರು ಆದರೆ ರಣವೀರ್ ನೂಕು ನುಗ್ಗಲಿನಿಂದ ಮೈಮೇಲೆ ಬೀಳುತ್ತಿದ್ದವರನ್ನು ನಿಯಂತ್ರಣ ಮಾಡಿ ಯುವತಿಯೊಂದಿಗೆ ಸೆಲ್ಫಿ ತೆಗೆದುಕೊಂಡರು. ಬಳಿಕ ಇತರೆ ಅಭಿಮಾನಿಗಳಿಗೂ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕಲ್ಪಿಸಿ ಕೊಟ್ಟರು. ರಣವೀರ್ ರ ಈ ಪ್ರೊಟೆಕ್ಟಿವ್ ನೇಚರ್ ಈಗ ಮಹಿಳಾ ಅಭಿಮಾನಿಗಳಲ್ಲಿ ತಮ್ಮ ನಾಯಕನ ಬಗ್ಗೆ ಇರುವ ಅಭಿಮಾನ ಇಮ್ಮಡಿ ಮಾಡಿದೆ ಎಂದು ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top