ಸಮಾಚಾರ

ಪಟ ಪಟ ಮಾತಾಡುವ ಶೀತಲ್ ಶೆಟ್ಟಿಯ ಈ ಡೈಲಾಗ್ ಗೆ ಫಿದಾ ಆಗೇಬಿಟ್ರು ಹೆಣ್ಮಕ್ಳು ,ಏನ್ ಆ ಡೈಲಾಗ್,ನೀವೇ ನೋಡಿ

ಈ ಹಿಂದೆ ನಿರೂಪಕಿ ಆಗಿ ಚಿರಪರಿಚಿತರಾಗಿದ್ದ ಶೀತಲ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಅಭಿನಯ ಮಾಡಿರುವ ‘ಪತಿಬೇಕು.ಕಾಂ’ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟೀಸರ್‌ನ ಮುಂದುವರಿದ ಭಾಗದಂತಿರುವ ಟ್ರೈಲರ್‌ನಲ್ಲಿ ಚಿತ್ರದ ಕತೆಯ ಪರಿಚಯವಾಗುತ್ತದೆ. ವಿವಾಗ ಪ್ರಾಯವಾದರೂ ಮಾಡುವೆಭಾಗ್ಯ ಇಲ್ಲದ ಯುವತಿಯಾಗಿ ಶೀತಲ್ ಕಾಣಿಸಿಕೊಂಡಿದ್ದಾರೆ.

ಈ ಟ್ರೈಲರ್ ಕಿಚ್ಚ ಸುದೀಪ್ ಲಾಂಚ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಶೀತಲ್​ ಶೆಟ್ಟಿಯ ಹೊಸ ಸಿನಿಮಾ ಪತಿ ಬೇಕು.ಕಾಂ ಟ್ರೈಲರ್​ಗೆ ಅಭಿಮಾನಿಗಳಿಂದ ಒಳ್ಳೆ ಪ್ರತಿಕ್ರಿಯೆ​ ಸಿಕ್ಕಿದೆ. ಈಗಾಗಲೇ ಮೂರೂ ಲಕ್ಷಕ್ಕೂ ಅಧಿಕ ಜನ ಟ್ರೈಲರ್ ವೀಕ್ಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಶೀತಲ್​ ನಾಯಕಿಯಾಗಿರುವ​ ಆಗಿರುವ ಸಿನಿಮಾ ಪಕ್ಕಾ ಮಹಿಳಾ ಪ್ರಧಾನ ಚಿತ್ರವಾಗಿದೆ. ಸಿನಿಮಾದಲ್ಲಿನ ಶೀತಲ್​ ಡೈಲಾಗ್​ ಒಂದು ಸಿಕ್ಕಾಪಟ್ಟೆ ಟಾಕ್​ ಆಗಿದ್ದು ಡಬ್​ಸ್ಮ್ಯಾಷ್​ ರೂಪದಲ್ಲಿ ಎಲ್ಲೆಡೆ ವೈರಲ್​ ಆಗಿದೆ. ಊರೋರಿಗೆಲ್ಲ ಹೆದರ್ಕೊಂಡು ಇಬ್ರು ರೂಮೊಳಗೆ ಸೇರ್ಕೊಂಡ್ರೆ ಲವ್ ಮ್ಯಾರೇಜ್. ಊರೋರೆಲ್ಲ ಸೇರಿ ಇಬ್ರನ್ನ ರೂಮೊಳಗೆ ಬಿಟ್ರೆ ಅದು ಅರೇಂಜ್ಡ್ ಮ್ಯಾರೇಜ್’. ಸಿನಿಮಾದಲ್ಲಿನ ಡೈಲಾಗಂತೂ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

ವಯಸ್ಸಿಗೆ ಬಂದಿರುವ ಮಗಳ ಮದುವೆ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಪೋಷಕರು, ವೈವಾಹಿಕ ಬದುಕಿನ ಬಗ್ಗೆ ಕನಸು ಕಾಣುವ ಹಾಗೂ ಮದುವೆ ಕೈಗೂಡದಾಗ ನಿರಾಶಳಾಗುವ ಯುವತಿ, ಯುವಕರೊಂದಿಗಿನ ಯುವತಿಯ ಡ್ಯೂಯೆಟ್.ಇಂತಹ ಸನ್ನಿವೇಶಗಳ ಮಧ್ಯೆ ನಡೆಯುವ ಕೊಲೆ ಸಿನೆಮಾಗೆ ಥ್ರಿಲ್ಲರ್‌ ಆಯಾಮ ನೀಡುತ್ತದೆ. ‌‌ ಈ ಹಿಂದಿನ ಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಶೀತಲ್‌ಗೆ ಇದು ದೊಡ್ಡ ಸಿನಿಮಾ. ಚಿತ್ರದಲ್ಲಿ ಅವರೇ ಪ್ರಧಾನ ಪಾತ್ರದಲ್ಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top