fbpx
ಮನೋರಂಜನೆ

ಮತ್ತೆ ಹುಚ್ಚಾಟ ಪ್ರದರ್ಶಿಸಿದ ಕಾಂಟ್ರವರ್ಷಿಯಲ್ ಕ್ವೀನ್ ನಟಿ ಶ್ರೀರೆಡ್ಡಿ.

ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಬೇರೂರಿರುವ ಪಾತ್ರಕ್ಕಾಗಿ ಮಂಚಕ್ಕೆ ಕರೆಯುವವ ಕಾಮುಕರ ವಿರುದ್ಧ ನಿರ್ಣಾಯಕ ಸಮರ ಸಾರಿರುವ ಬಾಲಿವುಡ್ ಮೂಲದ ನಟಿ ಶ್ರೀರೆಡ್ಡಿಯ ತರೇಹವಾರಿ ವಿವಾದಗಳು ಯಾವುದೇ ಅಡೆತಡೆಯಿಲ್ಲದೆ ಭರ್ಜರಿಯಾಗಿ ಮುಂದುವರೆದಿವೆ. ಕಾಸ್ಟಿಂಗ್ ಕೌಚ್ ಎಂಬ ಅನಿಷ್ಟ ಪದ್ದತಿಯ ವಿರುದ್ಧ ನಡು ರೋಡಿನಲ್ಲಿ ಬಟ್ಟೆಯನ್ನು ಕಿತ್ತೆಸೆದು ಅರೆಬೆತ್ತಲೆ ಪ್ರತಿಭಟನೆ ನಡೆಸಿ, ನಂತರ ತಮಿಳು, ತೆಲುಗು ಚಿತ್ರರಂಗಗಳ ಅನೇಕ ನಿರ್ದೇಶಕ, ನಟರ ಮೇಲೆ ಯಾವುದೇ ಆಧಾರವಿಲ್ಲದೆ ಗಂಭೀರ ಆರೋಪ ಮಾಡಿ, ಅಸಹ್ಯವಾಗೆಲ್ಲಾ ಬೈದು ಹುಚ್ಚಾಟ ಪ್ರದರ್ಶಿಸಿದ್ದ ಶ್ರೀರೆಡ್ಡಿ ಇದೀಗ ಮತ್ತೊಮ್ಮೆ ಕಣಕ್ಕಿಳಿದಿದ್ದಾಳೆ.

ಪ್ರತಿ ಭಾರಿ ಯಾರಾದರೊಬ್ಬ ನಟನ ಹೆಸರೇಳಿಕೊಂಡು ಆರೋಪಗಳನ್ನು ಮಾಡುತ್ತಿದ್ದ ಶ್ರೀರೆಡ್ಡಿ ಈ ಭಾರಿ ಕಿಕಿ ಚಾಲೆಂಜ್ ಮಾಡುವ ಮೂಲಕ ಮತ್ತೊಂದು ಯಡವಟ್ಟು ಮಾಡಿಕೊಂಡಿದ್ದಾಳೆ. ಕಳೆದೊಂದು ವಾರದಿಂದ ಎಲ್ಲಿಲ್ಲೂ ಸುದ್ದಿಯಾಗುತ್ತಿದ್ದ ಸವಾಲನ್ನು ಸ್ವೀಕರಿಸದಂತೆ ಪೊಲೀಸರು ಪತ್ವಾ ಹೊರಡಿಸಿದ್ದರೆ ಮತ್ತೊಂದೆಡೆ ಕೆಲ ತಿಳಿಗೇಡಿಗಳು ಚಾಲೆಂಜ್ ಸ್ವೀಕರಿಸಿ ಉದ್ದಟತನ ಮೆರೆಯುತ್ತಿದ್ದಾರೆ.. ಇತ್ತೀಚಿಗಷ್ಟೆ ನಟಿ ಅದಾ ಶರ್ಮಾ, ನೋರಾ ಫತೇಹಿ, ಪ್ರಣೀತ ಈ ಚಾಲೆಂಜ್ ಸ್ವೀಕರಿಸಿ ಕೆಂಗಣ್ಣಿಗೆ ಗುರಿಯಾಗಿದ್ದರಲ್ಲಾ, ಅದೇ ಚಾಲೆಂಜನ್ನ ನಟಿ ಶ್ರೀರೆಡ್ಡಿ ಸ್ವೀಕರಿಸಿ ಟೀಕೆಗೆ ಗುರಿಯಾಗಿದ್ದಾಳೆ. ಪೋಲೀಸರ ಆಜ್ಞೆಯನ್ನೂ ಲೆಕ್ಕಿಸದೆ ಹುಚ್ಚಾಟ ಪ್ರದರ್ಶಿಸಿರುವ ಶ್ರೀರೆಡ್ಡಿ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಪೋಲೀಸರ ವಾರ್ನಿಂಗ್:
ಈ ಚಾಲೆಂಜ್ ಹುಡುಗಾಟಕ್ಕೆ ವೈರಲ್ ಆಗುತ್ತಿದ್ದರೂ ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ತುಂಬಾನೇ ಹೆಚ್ಚಾಗಿರುವುದರಿಂದ ಈ ಚಾಲೆಂಜನ್ನು ಸ್ವೀಕರಿಸದಂತೆ ಮುಂಬೈ, ದೆಹಲಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಪೊಲೀಸರು ಸೀರಿಯಸ್ ವಾರ್ನಿಂಗ್ ನೀಡಿದ್ದಾರೆ.. ಹೀಗಿದ್ದರೂ ಕೆಲವೊಬ್ಬರು ಈ ಚಾಲೆಂಜನ್ನು ಕಂಪ್ಲೀಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದು ಅಂತವರ ವಿರುದ್ಧ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.. ಈ ಬಗ್ಗೆ ಪೋಷಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ.. ಆದಾಗ್ಯೂ ಈ ಚಾಲೆಂಜ್ ನಿಂದಾಗಿ ದೇಶಾದ್ಯಂತ ಇದರಿಂದ ಅನೇಕ ಅನಾಹುತಗಳು ಅದಾಗಲೇ ಸಂಭವಿಸಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top