ಸಮಾಚಾರ

ವೈರಲ್ ಆಗಿರೋ ಈ ದೇವರ ಕೈಗಳಲ್ಲಿ ಸೇತುವೆ ಜಗತ್ತಿನ ವಿಸ್ಮಯ,ಇದರ ಬಗ್ಗೆಗಿನ ಈ ಕುತೂಹಲಕಾರಿ ವಿಷಯದ ಬಗ್ಗೆ ತಪ್ಪದೆ ತಿಳ್ಕೊಳ್ಳಿ

ವಿಯೆಟ್ನಾಂ ನಗರದಲ್ಲಿ ಎರಡು ಕಾಂಕ್ರೀಟ್ ಕೈಗಳ ನಡುವೆ ಹಾದು ಹೋಗುವ 150 ಮೀಟರ್ ಉದ್ದದ ಗೊಲ್ಡನ್ ಬ್ರಿಡ್ಜ್ ( ಚಿನ್ನದ ಸೇತುವೆ) ನ ಚಿತ್ರಗಳು ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಯೇಟ್ನಾಂ ನಲ್ಲಿ ವೃಕ್ಷಗಳಿಂದ ಚಾಚಿಕೊಂಡಿರುವ ದೇವತೆಯ ಎರಡು ಕೈಗಳು ಬಂಗಾರದ ಸೇತುವೆಯನ್ನು ಹಿಡಿದಿಟ್ಟುಕೊಂಡಿರುವ ಮನಮೋಹಕ ಪ್ರವಾಸಿತಾಣ ಅಪಾರ ಪ್ರವಾಸಿಗರನ್ನು ಸೆಳೆಯುತ್ತಿದೆ ಎಂದು ತಿಳಿದು ಬಂದಿದೆ.

ಕೇಂದ್ರ ವಿಯೇಟ್ನಾಂನ ಬಾ ನಾ ಹಿಲ್ಸ್‌ನ ದನಂಗ್‌ನಲ್ಲಿ ಇದೆ ವರ್ಷ ಜುಲೈನಲ್ಲಿ ಉದ್ಘಾಟನೆ ಆದ ಈ ಬಂಗಾರದ ಸೇತುವೆ 150 ಮೀಟರ್ ಉದ್ದ ಇದ್ದು, ಸಮುದ್ರ ಮಟ್ಟಕ್ಕಿಂತ 1400 ಮೀಟರ್ ಎತ್ತರದಲ್ಲಿ ಇದೆ. ಸಿಮೆಂಟ್‌ನಿಂದ ನಿರ್ಮಿಸಲಾದ ಈ ಎರಡು ಕೈಗಳು ಇಡೀ ಸೇತುವೆಯ ಆಧಾರ ಸ್ಥಂಬವಾಗಿದೆ. ನೂತನ ಶೈಲಿ, ವಿನ್ಯಾಸದ ಈ ಸೇತುವೆ ವಿಶ್ವಾದ್ಯಂತ ಪ್ರವಾಸಿಗರನ್ನು ಬರಸೆಳೆಯುತ್ತಿದೆ.

 

 

ಕೇವಲ 1 ವರ್ಷಕ್ಕಿಂತ ಕಡಿಮೆ ಸಮಯದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗಿದೆ. ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಗೋಲ್ಡನ್ ಬ್ರಿಡ್ಜ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗಿ ವಿಶ್ವಾದ್ಯಂತ ಸಾಕಷ್ಟು ಪ್ರಶಂಸೆಗಳನ್ನು ಪಡೆದಿದೆ ಎಂದು ತಿಳಿದು ಬಂದಿದೆ. ಈ ಬೆಟ್ಟವನ್ನು 1919ರಲ್ಲಿ ಫ್ರೆಂಚ್ ವಸಾಹತುಶಾಹಿಗಳು ಪ್ರಥಮ ಬಾರಿಗೆ ಅಭಿವೃದ್ಧಿ ಮಾಡಿದರು. ಈಗ ಈ ಪ್ರದೇಶ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿ ಕೇಬಲ್ ಕಾರ್ ಅಳವಡಿಸಲಾಗಿದೆ. ಕೋಟೆ, ಕೆಥಡ್ರಲ್, ಉದ್ಯಾನವನ, ಲೇಡಿ ಗಾಗಾ ಹಾಗೂ ಮೈಕಲ್ ಜೋರ್ಡಾನ್ ಅವರ ಮೇಣದ ಪ್ರತಿಮೆ ಗಳಿರುವ ವ್ಯಾಕ್ಸ್ ಮ್ಯೂಸಿಯಂ ಅನ್ನು ಒಳಗೊಂಡ ಈ ಪ್ರದೇಶ ಫ್ರಾನ್ಸ್‌ನ ಮಧ್ಯಕಾಲೀನ ಗ್ರಾಮದ ಪ್ರತಿರೂಪವಾಗಿದೆ.

ಇನೊನುಡಿ ವಿಶೇಷತೆ ಎಂದರೆ ಬಾ ನಾ ಹಿಲ್‌ ನಲ್ಲಿ ನಿರ್ಮಾಣ ಮಾಡಿರುವ ಹಾಗೆಯೆ ಬೆಳ್ಳಿಯ ಸೇತುವೆ (ಸಿಲ್ವರ್ ಬ್ರಿಡ್ಜ್) ನಿರ್ಮಾಣ ಮಾಡಲು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ಸೇತುವೆಯ ವಿನ್ಯಾಸಕಾರ ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top