fbpx
ಸಮಾಚಾರ

ಅವತ್ತು ಅಂಪೈರ್ ಕೈಯಿಂದ ತಾವು ಬಾಲ್ ತೆಗೆದುಕೊಳ್ಳಲು ಅಸಲಿ ಕಾರಣವೇನು ಅಂತ ಧೋನಿಯೇ ಹೇಳಿದ್ದಾರೆ ಕೇಳಿ.

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯ ಮುಗಿದ ಬಳಿಕ ಅಂಪೈರ್ ಕೈಯಲ್ಲಿದ್ದ ಚೆಂಡನ್ನು ಎಂಎಸ್ ಧೋನಿ ಪಡೆಯುವ ಮೂಲಕ ಭಾರಿ ಚರ್ಚೆಗೆ ಕಾರಣವಾಗಿದ್ದರು. ಧೋನಿ ನಿವೃತ್ತಿ ಪಡೆಯಲಿದ್ದಾರೆ, ತಮ್ಮ ಕೊನೆ ಪಂದ್ಯದ ಜ್ಞಾಪಕಾರ್ಥವಾಗಿ ಆ ಪಂದ್ಯದ ಚೆಂಡನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂದೆಲ್ಲ ಚರ್ಚೆಗಳು ನಡೆದಿದ್ದವು. ಈ ಬಗ್ಗೆ ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿಯವರೇ ‘ಧೋನಿ ನಿವೃತ್ತಿ ಹೊಂದುತ್ತಿಲ್ಲ’ ಅಂತ ಹೇಳಿದರೂ ಒಪ್ಪದ ಅಭಿಮಾನಿಗಳು ಈ ಕ್ಷಣದವರೆಗೂ ಆ ಬಗ್ಗೆ ಚರ್ಚೆ ನಡೆಸುತ್ತಲೇ ಇದ್ದರು.

 

 

ಆದರೆ ಈ ಬಗ್ಗೆ ಇದೀಗ ಖುದ್ದು ಧೋನಿ ಅವರೇ ಸ್ಪಷ್ಟ ಪಡಿಸಿದ್ದು ಅಂದು ತಾವು ಚೆಂಡನ್ನು ಪಡೆದದ್ದು ಏಕೆ ಅಂತ ಹೇಳಿದ್ದಾರೆ. ‘ನಾವು ಮುಂದಿನ ವರ್ಷ ಇದೇ ಇಂಗ್ಲೆಂಡ್​ನಲ್ಲಿ ನಡೆಯಲಿರುವ ವಿಶ್ವಕಪ್​ ಟೂರ್ನಿಯಲ್ಲಿ ಆಡಬೇಕಿದೆ. ಅದರ ಸಿದ್ಧತೆಗಾಗಿಯೇ ನಾನು ಆ ಚೆಂಡನ್ನು ಅಂಪೈರ್ ಬಳಿಯಿಂದ ತೆಗೆದುಕೊಂಡಿದ್ದೆ. ಇಂಗ್ಲೆಂಡ್ ನೆಲದಲ್ಲಿ ರಿವರ್ಸ್​ ಸ್ವಿಂಗ್​ನಿಂದ ನಾವು ಹೆಚ್ಚು ವಿಕೆಟ್​ ಕಬಳಿಸುವುದು ಅತ್ಯಂತ ಮುಖ್ಯವಾಗುತ್ತದೆ.. ಆದರೆ ರಿವರ್ಸ್​ ಸ್ವಿಂಗನಲ್ಲಿ ನಮಗೆ ಹೆಚ್ಚೇನೂ ವಿಕೆಟ್​ ಬೀಳುತ್ತಿಲ್ಲ. ಆದರೆ, ಎದುರಾಳಿಗಳಿಗೆ ತುಂಬಾನೇ ವಿಕೆಟ್​ ಸಿಗುತ್ತಿದೆ. ಆ ಬಾಲ್ ಮೂಲಕ ಅದಕ್ಕೆ ಕಾರಣ ಏನೆಂಬ ಸಂಗತಿಗಳು ಏನಾದರೂ ತಿಳಿಯಬಹುದು ಎಂಬ ಕಾರಣಕ್ಕೆ ಮಾತ್ರ ನಾನು ಆ ಚೆಂಡನ್ನು ಕೇಳಿ ಪಡೆದುಕೊಂಡೆ” ಎಂದು ಧೋನಿ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ಧೋನಿಯವರ ನಿವೃತ್ತಿ ಕುರಿತು ಗುಲ್ಲೆದ್ದಿದ್ದ ಗಾಸಿಪ್ಪಿಗೆ ಸರಿಯಾದ ತೆರೆ ಬಿದ್ದಂತಾಗಿದೆ.
ಅಲ್ಲದೇ ಧೋನಿ ಮುಂದಿನ ವಿಶ್ವಕಪ್ ನಲ್ಲಿಯೂ ಆಡಲಿದ್ದಾರೆ ಎನ್ನುವ ಮುನ್ಸೂಚನೆ ಸಿಕ್ಕಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top