ಮನೋರಂಜನೆ

ಅನುಷ್ಕಾ ಶೆಟ್ಟಿ ಮದುವೆ ಅಂತೇ- ಮದುವೆಗಂಡು ಪ್ರಭಾಸ್ ಅಲ್ಲ.

ಚಿತ್ರರಂಗದ ಬಹುತೇಕ ನಟಿಯರು ಚಿತ್ರಕ್ಕಿಂತಲೂ ಮದುವೆ ವಿಚಾರ ಮತ್ತು ಅಫೇರುಗಳ ಮೂಲಕವೇ ಸದ್ದು ಮಾಡೋದೇ ಹೆಚ್ಚು. ಸದ್ಯ ದಕ್ಷಿಣ ಭಾರತದ ಬಹುಬೇಡಿಕೆಯಲ್ಲಿರೋ ನಟಿ ಅನುಷ್ಕಾ ಶೆಟ್ಟಿಯನ್ನು ಆ ಪಟ್ಟಿಯಿಂದ ಹೊರಗಿಡಲು ಹೇಗೆ ಸಾಧ್ಯ? ಸಿನಿಮಾ ಮಂದಿಯ ಮದುವೆ, ಅಫೇರು ವಿಚಾರಗಳಲ್ಲಿ ಪದೇ ಪದೇ ಅಂತೆಕಂತೆ ನ್ಯೂಸುಗಳು ಸಾಮಾಜಿಕ ಜಾಲತಾಣಗಳಲ್ಲಿ ಗಾಸಿಪ್ ಪ್ರಿಯ ಬಾಯಿಯ ತುದಿಯಿಂದ ಹರಡುತ್ತಿರುತ್ತವೇ. ಇಂಥ ಗಾಸಿಪ್ ಪ್ರಿಯರಿಗೆ ಇದೀಗ ಮೃಷ್ಟಾನ್ನವೂ ಭೋಜನವಾಗಿ ಪರಿಮಣಿಸಿರುವವರು ಸೌತ್ ಸ್ಟಾರ್ ಹೀರೋಯಿನ್ ಅನುಷ್ಕಾ ಶೆಟ್ಟಿ.

 

 

ಕನ್ನಡದ ಹುಡುಗಿ ಅನುಷ್ಕಾ ಬಾಲಿವುಡ್ ಮಟ್ಟದಲ್ಲಿಯೂ ಮಿಂಚುತ್ತಿರೋ ತಾರೆ. ಇಂತ ಅನುಷ್ಕಾ ಮತ್ತು ಟಾಲಿವುಡ್‌ ರೆಬಲ್‌ ಸ್ಟಾರ್‌ ಪ್ರಭಾಸ್‌ ಇಬ್ಬರೂ ಲವ್ವಲ್ಲಿ ಬಿದ್ದಿದ್ದು, ಮದುವೆ ಕೂಡ ಮಾಡಿಕೊಳ್ಳಲಿದ್ದಾರೆ ಎನ್ನುವ ಅಫೇರ್ ಬಗ್ಗೆ ರಂಗು ರಂಗಾದ ಕಥೆಗಳು ಒಂದಷ್ಟು ವರ್ಷಗಳ ಹಿಂದೆಯಿಂದಲೇ ಬಾರಿ ಕೇಳಿ ಬಂದಿತ್ತು. ಆದರೆ ಆ ಬಗ್ಗೆ ಎಷ್ಟೇ ಬಾರಿ ಕೇಳಿದರೂ ಇಬ್ಬರಿಂದಲೂ ನಕಾರಾತ್ಮಕ ಉತ್ತರವೇ ಬರುತ್ತಿತ್ತು. ನಾವು ಕೇವಲ ಸ್ನೇಹಿತರಷ್ಟೇ ಎಂದು ಹೇಳಿ ಕೈತೊಳೆದುಕೊಳ್ಳುತ್ತಿದ್ದರು. ಸದ್ಯ ಈ ಇಬ್ಬರು ತಾರೆಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

ಸದ್ಯ ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಅನುಷ್ಕಾ ಶೆಟ್ಟಿ ಮದುವೆಯಾಗಲು ನಿರ್ಧಾರ ಮಾಡಿದ್ದು ಇದಕ್ಕಾಗಿ ಮನೆಯಲ್ಲಿ ಅನುಷ್ಕಾಗೆ ತಕ್ಕ ಗಂಡು ಹುಡುಕುತ್ತಿದ್ದಾರಂತೆ. ಒಳ್ಳೆಯ ಹುಡುಗ ಸಿಗಲಿ ಎಂದು ಈಗಾಗಲೇ ದೇವಸ್ಥಾನಗಳಲ್ಲಿ ಅನುಷ್ಕಾ ಕುಟುಂಬ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರಂತೆ.. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷದಲ್ಲಿ ಅನುಷ್ಕಾ ಮದುವೆ ನಡೆಯೋದು ನಿಕ್ಕಿಯಂತೆ. “ಪ್ರಭಾಸ್ ಮತ್ತು ಅನುಷ್ಕಾ ಒಬ್ಬರೂ ಸ್ಟಾರ್​ ಕಲಾವಿದರು. ಜೊತೆಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಭಾಸ್​ ರೀತಿಯ ಮಿಸ್ಟರ್​ ಪರ್ಫೆಕ್ಟ್​ ಆಗಿರುವ ಹುಡುಗನನ್ನು ಅನುಷ್ಕಾಗೆ ಮದುವೆ ಮಾಡಲು ಇಷ್ಟಪಡುತ್ತೇನೆ. ಆದರೆ, ಅವರಿಬ್ಬರು ಒಳ್ಳೆಯ ಸ್ನೇಹಿತರು ಮಾತ್ರ.” ಎಂದು ಅನುಷ್ಕಾ ತಾಯಿ ಇತ್ತೀಚಿಗೆ ಹೇಳಿದ್ದರು. ಆದ್ರೆ ಅನುಷ್ಕಾಳನ್ನು ಮದುವೆಯಾಗೋದು ಪ್ರಭಾಸ್ ಅಲ್ಲ ಅನ್ನೋದು ಈ ಜೋಡಿಯನ್ನು ಇಷ್ಟಪಟ್ಟವರಿಗೆ ನಿರಾಸೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top