ಮನೋರಂಜನೆ

‘ಟಕಿಲಾ’ ನಂತರ ಚಂದನ್ ಶೆಟ್ಟಿ ಮುಂದಿನ ‘FIRE’ ಸಾಂಗ್ ಬಿಡುಗಡೆಗೆ ಮುಹೂರ್ತ ಫಿಕ್ಸ್- ಸಿಂಗಪೂರ್ ನಲ್ಲಿ ಮೊಳಗಲಿದೆ ಕನ್ನಡ ಡಿಂಡಿಮ.

ಬಿಗ್ ಬಾಸ್ ಶೋ ವಿನ್ ಆದ ನಂತರ ರ್ಯಾಪರ್ ಚಂದನ್ ಶೆಟ್ಟಿಗೆ ದೊಡ್ಡ ಬ್ರೇಕ್ ಸಿಕ್ಕಿದೆ. ಇವೆಂಟ್, ಟಿವಿ ಷೋ ಸೇರಿದಂತೆ ಅನೇಕ ಆಫರ್ ಗಳು ತನ್ನ ಮನೆ ಬಾಗಿಲ ಬಳಿಗೆ ಬರುತ್ತಿವೆ. ಜನಪ್ರಿಯತೆ ಸಿಕ್ಕಿರುವ ಕಾರಣ ಪಾರ್ಟಿ ಸಾಂಗ್ ಗಳನ್ನ ಮಾಡುವುದನ್ನು ನಿಲ್ಲಿಸಿ ಸಿನಿಮಾಗಳಲ್ಲಿ ಬ್ಯುಸಿಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಅವರ ಅಭಿಮಾನಿಗಳು ಮಾತ್ರ ಟಕಿಲಾ ನಂತರ ಯಾವ ಹಾಡನ್ನು ಮಾಡುತ್ತಾರೆ, ಅದರಲ್ಲಿ ಯಾವ ಕಾನ್ಸೆಪ್ಟ್ ಇರುತ್ತದೆ ಎಂದು ಕುತೂಹಲದಿಂದ ಕಾಯುತ್ತಿದ್ದರು. ಈಗ ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗುವ ಗಳಿಗೆ ಕೂಡಿಬಂದಿದೆ.

ಚಂದನ್ ತಯಾರು ಮಾಡಿರುವ ಮುಂದಿನ ಹಾಡಿನ ಹೆಸರು ‘ಫಯರ್’ ಅಂತೇ, ಫಯರ್ ಅಂದ್ರೆ ಬೆಂಕಿ, ಕಿಚ್ಚು ಅಂತ ಅರ್ಥ, ಮನುಷ್ಯನಿಗೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಫಯರ್ ಇರಬೇಕು ಇದೆ ಕಾನ್ಸೆಪ್ಟ್ ನಲ್ಲಿ ಈ ಹಾಡು ಮೂಡಿಬಂದಿದೆಯಂತೆ. ಈ ಹಾಡು ಆಗಸ್ಟ್ 24ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸಿಂಗಪುರ್​ನಲ್ಲಿ ಬಿಡುಗಡೆಯಾಗುತ್ತಿದೆ.. ಆ ಮೂಲಕ ಸಿಂಗಪೂರ್ ನಲ್ಲಿ ಕನ್ನಡ ಡಿಂಡಿಮ ಮೊಳಗಿಸಲು ಚಂದನ್ ಸಿದ್ಧವಾಗಿದ್ದಾರೆ.

ಆಗಸ್ಟ್​ 24ರಂದು ಫೈರ್​ ಹಾಡಿನ ಲಿರಿಕಲ್​ ವಿಡಿಯೋ ಮಾತ್ರ ಬಿಡುಗಡೆಯಾಗಲಿದ್ದು ಸಿಂಗಪುರ್ ನಲ್ಲಿರುವ ಕನ್ನಡಿಗರ ಮಧ್ಯೆ ಚಂದನ್ ಶೆಟ್ಟಿ ಈ ಹಾಡನ್ನು ಬಿಡುಗಡೆ ಮಾಡಲಿದ್ದಾರೆ. ಅದು ಬಿಡುಗಡೆಯಾದ ಒಂದು ತಿಂಗಳ ನಂತರ ಆ ಹಾಡಿನ ವಿಡಿಯೋ ಸಾಂಗ್​ ರಿಲೀಸ್ ಆಗಲಿದೆಯಂತೆ. ಈಗಾಗಲೇ ಅದರ ಲಿರಿಕಲ್‌ ವಿಡಿಯೋ ರೆಡಿಯಾಗಿದ್ದು ಕೇವಲ ಕನ್ನಡದ ಅಕ್ಷರಗಳನ್ನ ಮಾತ್ರ ಒಳಗೊಂಡಿದೆಯಂತೆ. ಈ ಒಂದು ಹಾಡಿನಲ್ಲಿ ಅಂತಾರಾಷ್ಟ್ರೀಯ ಕಲಾವಿದರು ಒಳಗೊಂಡಂತೆ ಒಟ್ಟು 500ಕ್ಕೂ ಹೆಚ್ಚು ಡ್ಯಾನ್ಸರುಗಳು ಹೆಜ್ಜೆಯಾಕಿದ್ದಾರಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top