fbpx
ಸಮಾಚಾರ

ವೈದ್ಯರ ಯಡವಟ್ಟಿನಿಂದ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿ

ವೈದ್ಯರು ಮಾಡಿದ ಯಡವಟ್ಟಿನಿಂದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಎಡೆಹಳ್ಳಿ ಗ್ರಾಮದ ಬಾಲಕ ಕೀರ್ತಿರಾಜ್ ತನ್ನ ಎರಡು ಕಾಲುಗಳ ಸ್ವಾಧೀನ ಕಳೆದೆಕೊಂಡಿರುವ ಘಟನೆ ನಡೆದಿದೆ. ಬಾಲಕ ಕೀರ್ತಿರಾಜ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿಮಾನಿಯಾಗಿದ್ದು ದರ್ಶನ ಸಿನಿಮಾ ಡೈಲಾಗನ್ನು ನಿರಾಯಾಸವಾಗಿ ಹೇಳುತ್ತಿದ್ದ. ಆದರೆ ಬಾಲಕ ಈಗ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಒದ್ದಾಡುತ್ತಿದ್ದಾನೆ. ಅಷ್ಟಕ್ಕೂ ವೈದರು ಮಾಡಿದ್ದೇನು ಮುಂದೆ ಓದಿ.

ಕುರುವತ್ತಪ್ಪ ಹಾಗೂ ನೇತ್ರಾ ದಂಪತಿಯ ಎರಡನೆಯ ಮಗನಾಗಿರುವ ಬಾಲಕ ಕೀರ್ತಿರಾಜ್ ಎಲ್ಲರನಂತೆ ನಡೆದುದಾಡಿಕೊಂಡೇ ಇದ್ದ. ಇತ್ತೀಚಿಗೆ ಬಾಲಕನಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಆತನನ್ನು ಸಮೀಪದ ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಎಕ್ಸ್ ರೇ ತೆಗೆಸಿದ ವೈದ್ಯರು ಈ ಕಾಯಿಲೆ ಇಲ್ಲಿ ಸರಿ ಹೋಗುವುದಿಲ್ಲ ನೀವು ಮಂಗಳೂರಿಗೆ ಹೋಗಿ ಎಂದು ಸೂಚಿಸಿದರು. ನಂತರ ಪೋಷಕರು ಬಾಲಕನನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು.

 

 

 

 

ತಪಾಸಣೆ ಮಾಡಿದ ವೈದ್ಯರು ಬೆನ್ನಿನಲ್ಲಿ ನೀರು ತುಂಬಿಕೊಂಡಿದೆ ಆಪರೇಷನ್ ಮಾಡಬೇಕು ಎಂದು ತಿಳಿಸಿದರು. ಆಪರೇಷನ್ ಮಾಡುವವರೆಗೆ ನಡೆದಾಡುಕೊಂಡು ಚೆನ್ನಾಗಿಯೇ ಇದ್ದ ಬಾಲಕ ಆಪರೇಷನ್ ಬಳಿಕ ಸ್ವಾಧೀನ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಇದನ್ನು ಪರಿಶೀಲನೆ ಮಾಡಿದಾಗ ವೈದ್ಯರು ಜೀವಕೋಶಗಳನ್ನು ತೆಗೆದಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಪ್ರಶ್ನೆ ಮಾಡಿದ ಪೋಷಕರಿಗೆ ಆಸ್ಪತ್ರೆ ಸಿಬ್ಬಂದಿ ದೌರ್ಜ್ಯನ್ಯ ಮಾಡಿ ಅಲ್ಲಿಂದ ಹೊರಹಾಕಿದ್ದಾರೆ. ಚಿಕಿತ್ಸೆ ಮಾಡಿಸಿ 11 ತಿಂಗಳಾದರೂ ಕೂಡ ಬಾಲಕನಿಗೆ ಕಾಲಿನ ಸ್ವಾಧೀನ ಬಂದಿಲ್ಲ ಎನ್ನಲಾಗಿದೆ.

ಬಾಲಕ ನಟ ದರ್ಶನ ಅವರ ಅಪ್ಪಟ ಅಭಿಮಾನಿಯಾಗಿದ್ದು, ಪೊಲೀಸ್ ಪಾತ್ರದ ಡೈಲಾಗನ್ನು ದರ್ಶನ ಅವರಂತೆಯೇ ಹೇಳುತ್ತಿದ್ದ. ಜಿನಜೀವನದಲ್ಲಿ ಪೊಲೀಸ್ ಆಗುವ ಬಯಕೆ ಹೊಂದಿದ ಆದರೆ ವಿಧಿಯಾಟ ಅವನ ಕಾಲಿನ ಸ್ವಾಧೀನ ಕಳೆದುಕೊಳ್ಳುವ ಹಾಗೆ ಮಾಡಿತು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top