fbpx
ಮನೋರಂಜನೆ

ಧ್ರುವ ಸರ್ಜಾ ಗಡ್ಡ ಬಿಟ್ಟು ರಗಡ್ ಲುಕ್ ತಾಳಿರೋದರ ಹಿಂದಿನ ಅಸಲಿ ಗುಟ್ಟೇನು ಗೊತ್ತಾ?

ಮಾಡಿದ್ದು ಮೂರೇ ಚಿತ್ರಗಳಾಗಿದ್ದರೂ ಮೂರಕ್ಕೆ ಮೂರನ್ನು ಸೂಪರ್ ಹಿಟ್ ಚಿತ್ರಗಳನಾಗಿಸಿ ಚಂದನವನದ ಯುವ ಸ್ಟಾರ್ ನಟನಾಗಿ ಬೆಳೆದಿರುವಾತ ಆಕ್ಷನ್ ಪ್ರಿನ್ಸ್ ದೃವ ಸರ್ಜಾ. ಅದ್ದೂರಿ, ಬಹುದ್ದೂರ್, ಭರ್ಜರಿಗಳಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿರೋ ದೃವ ಸರ್ಜಾ ಸದ್ಯ ನಂದಕಿಶೋರ್ ನಿರ್ದೇಶಿಸುತ್ತಿರುವ ‘ಪೊಗರು’ ಚಿತ್ರದ ಶೂಟಿಂಗಿನಲ್ಲಿ ಬ್ಯುಸಿಯಾಗಿದ್ದಾರೆ.. ಸದ್ಯದಲ್ಲೇ ಈ ಚಿತ್ರದ ಫರ್ಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಲಿದ್ದು ಈ ಮಧ್ಯೆ ಚಿತ್ರಕ್ಕಾಗಿ ದ್ರುವ ಸರ್ಜಾ ತಾಳಿರುವ ಅವತಾರ ಸಿಕ್ಕಾಪಟ್ಟೆ ವೈರಲ್ ಆಗಿದ್ದೆ..

 

 

ಯಾವಾಗಲೂ ಕುರುಚಲು ಗಡ್ಡದಲ್ಲೇ ಕಾಣಿಸುತ್ತಿದ್ದ ಧ್ರುವಾ ಇದೀಗ ಮಣಗಟ್ಟಲೆ ದಾಡಿ ಬಿಟ್ಟು ಫುಲ್ ರಗಡ್ ಲುಕ್‌ನಲ್ಲಿ ಕಾಣಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕಾರಿನಲ್ಲಿ ಹೋಗುತ್ತಿರುವಾಗ ಅಭಿಮಾನಿಯೊಬ್ಬರು ಕ್ಲಿಕ್ ಮಾಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೊಗರು ಚಿತ್ರದಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ತಿರೋ ಧ್ರುವ ಸರ್ಜಾ ಸ್ಕೂಲ್‌ ಹುಡ್ಗನ ಪಾತ್ರ ಹಾಗೂ ರಗಡ್ ಶೇಡ್‌ನಲ್ಲಿ ಕಾಣಿಸಿಕೊಳ್ತಿದ್ದಾರೆ.

ಪೊಗರು ಸಿನಿಮಾದಲ್ಲಿ ಆರಂಭದ ಹದಿನೈದು ನಿಮಿಷದ ಎಪಿಸೋಡಿನಲ್ಲಿ ಧೃವಾ ಸರ್ಜಾ ಏಳನೇ ಕ್ಲಾಸು ಹುಡುಗಾನಾಗಿ ಪಾತ್ರ ನಿರ್ವಹಿಸಲಿದ್ದಾರೆ. ಸಿನಿಮಾಗಳಲ್ಲಿ ಬರುವ ಫ್ಲಾಷ್ ಬ್ಯಾಕ್ ಎಪಿಸೋಡುಗಳಿಗೆ ಬಾಲಕಲಾವಿದರನ್ನು ಬಳಸೋದು ವಾಡಿಕೆ. ಹಾಗೆ ಮಾಡಿದರೆ ಫೀಲ್ ಸಿಗೋದಿಲ್ಲ ಅನ್ನೋ ಕಾರಣಕ್ಕೆ ಸ್ವತಃ ಧೃವಾ ಬರೋಬ್ಬರಿ ಮೂವತ್ತು ಕೆಜಿ ತೂಕ ಇಳಿಸಿಕೊಂಡು ಎಳೇ ಹುಡುಗನಂತಾಗಿದ್ದಾರೆ. ಅದಕ್ಕಾಗಿ ಅವರು ಬರೋಬ್ಬರಿ ಮೂವತ್ತು ಕೆಜಿ ತೂಕವನ್ನು ಇಳಿಸಿಕೊಂಡಿದ್ದರು ಇದೀಗ ಎರಡನೇ ಹಣತದ ಚಿತ್ರೀಕರಣ ಪ್ರಾರಂಭವಾಗಲಿದ್ದು ಮತ್ತೆ ತಮ್ಮ ದೇಹವನ್ನು ದಂಡಿಸಿ ಮೈಕಟ್ಟನ್ನು ವೃದ್ಧಿಸಿಕೊಳ್ಳಲಿದ್ದಾರೆ.

ಈಗಾಗಲೇ ಒಂದು ಹಂತದ ಚಿತ್ರೀಕರಣ ಮುಗಿದಿದ್ದರೂ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿಲ್ಲ ಹಾಗಾಗಿ ಎರಡನೇ ಹಂತದ ಚಿತ್ರೀಕರಣವನ್ನು ಆರಂಭಿಸುವುದಕ್ಕೂ ಮುನ್ನವೇ ನಾಯಕಿಯನ್ನು ಅಂತಿಮಗೊಳಿಸಬೇಕಾಗಿದೆ. ಮೂಲಗಳ ಪ್ರಕಾರ ಚಿತ್ರದಲ್ಲಿ ದ್ರುವ ಸರ್ಜಾಗೆ ಇಬ್ಬರು ನಾಯಕಿಯರು ಇರಲಿದ್ದಾರಂತೆ.

ಪೊಗರು ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ಮತ್ತು ಕಿಸ್ ಖ್ಯಾತಿಯ ಶ್ರೀ ಲೀಲಾ ನಾಯಕಿಯರಾಗಿ ಆಯ್ಕೆಯಾಗುವ ಸಾಧ್ಯತೆಗಳಿದ್ದು ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರಹಾಕಿಲ್ಲ. ಚಿತ್ರಕ್ಕೆ ಬಿ.ಕೆ.ಗಂಗಾಧರ್ ಎಂಬುವವರು ಬಂಡವಾಳ ಹೊಂದುತ್ತಿದ್ದು ಅರ್ಜುನ್ ಜನ್ಯ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿದ್ಯಾ.S ಅವರು ಛಾಯಾಗ್ರಹಣವನ್ನು ಮಾಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top