ಹೆಚ್ಚಿನ

ಮದುವೆಯ ಸಂಬಂಧಕ್ಕೆ ಹೋಗುವಾಗ ಈ ವಸ್ತುವನ್ನು ನಿಮ್ಮ ಜೊತೆಯಲ್ಲಿ ಇಟ್ಟುಕೊಂಡು ಹೋದರೆ ಮದುವೆಯಾಗುವುದು 100 % ಗ್ಯಾರಂಟಿ ಅಂತೇ.

ಮದುವೆ ಮಾತುಕತೆಗೆ ನೀವು ಹೋಗುತ್ತಿದ್ದೀರಿಯೇ ? ಹಾಗಾದರೆ ಇದನ್ನು ತೆಗೆದುಕೊಂಡು ಹೋಗಿ ಮದುವೆ ಯಶಸ್ವಿಯಾಗುವುದು ಗ್ಯಾರಂಟಿ. ಮದುವೆಗಳು ಸ್ವರ್ಗದಲ್ಲಿ ಜರುಗುತ್ತವೆ ಎಂದು ಹಿರಿಯರು ಹೇಳುತ್ತಾರೆ. ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಒಂದು ಮಹತ್ವದ ಕಾಲಘಟ್ಟವಾಗಿದೆ.

ಪ್ರತಿಯೊಬ್ಬ ಪೋಷಕರಿಗೂ ಕೂಡ ಸರಿಯಾದ ಸಮಯದಲ್ಲಿ , ಸರಿಯಾದ ವ್ಯಕ್ತಿಯೊಂದಿಗೆ , ಮಕ್ಕಳ ಮದುವೆ ಮಾಡಬೇಕು ಎಂದು ಭವಿಷ್ಯತ್ತಿನಲ್ಲಿ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಆದರೆ ಸರಿಯಾದ ಸಮಯದಲ್ಲಿ, ಮದುವೆ, ವೃತ್ತಿ ಹಾಗೆಯೇ ಸರಿಯಾದ ಸಮಯದಲ್ಲಿ ದಾಂಪತ್ಯ , ಮಕ್ಕಳು ಇವೆಲ್ಲಾ ಸೌಭಾಗ್ಯ ತಾವು ನೋಡಬೇಕು ತಮ್ಮ ಮಕ್ಕಳು ಅನುಭವಿಸಬೇಕು. ಎನ್ನುವ ಹೆಬ್ಬಯಕೆ ಪ್ರತಿಯೊಬ್ಬ ತಂದೆ ತಾಯಿಗೂ ಸಹ ಇರುತ್ತದೆ. ಇದು ಒಂದು ಜವಾಬ್ದಾರಿಯೂ ಕೂಡ ಹೌದು.

 

 

ಮಕ್ಕಳು ಮಾತ್ರ ಒಮ್ಮೊಮ್ಮೆ ಮೊದಲು ವೃತ್ತಿ, ಆಮೇಲೆ ಮದುವೆ ಎಂದು ಹೇಳುತ್ತಾರೆ. ವೃತ್ತಿ ಎಷ್ಟು ಮುಖ್ಯವಾದದ್ದೋ ? ಮದುವೆ ಕೂಡ ಅಷ್ಟೇ ಮುಖ್ಯ ? ಇದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಪ್ರಧಾನವಾದ ಕಾಲ ಘಟ್ಟವಾಗಿರುವುದರಿಂದ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಬೇಕು.

ವೃತ್ತಿಯಲ್ಲಿ ಹೆಜ್ಜೆ ಇಟ್ಟ ನಂತರ , ಸುಸ್ಥಿರವಾಗಿ ನೆಲೆ ನಿಂತ ನಂತರ, ಮದುವೆಯ ಸಂಬಂಧಗಳನ್ನು ಹುಡುಕಲಾರಂಭಿಸುತ್ತಾರೆ. ಇನ್ನು ಅನೇಕ ಸಂಬಂಧಗಳು ಬರುತ್ತಾ ಇರುತ್ತವೆ. ಅದರಲ್ಲಿ ಕೆಲವೊಂದು ಸಂಬಂಧಗಳು ಒಪ್ಪಿಗೆ ಯಾಗುತ್ತವೆ, ಇನ್ನೂ ಕೆಲವು ಯಾವುದೋ ಕಾರಣದಿಂದ ನಮಗೆ ಇಷ್ಟವಾಗುವುದಿಲ್ಲ. ಇನ್ನು ಕೆಲವು ಮದುವೆ ಸಂಬಂಧಗಳು ಯಾಕೆ ಮತ್ತು ಯಾವ ಕಾರಣಕ್ಕೆ ಒಪ್ಪಿಗೆ ಆಗುತ್ತಿಲ್ಲ ಎನ್ನುವುದು ತಿಳಿಯುವುದಿಲ್ಲ. ಇಬ್ಬರಿಗೂ ಇಷ್ಟ ಆಗಿರುತ್ತದೆ. ಆದರೆ ಯಾವುದೋ ಒಂದು ಕಾರಣದಿಂದ ಕೆಲವೊಮ್ಮೆ ಒಳ್ಳೆಯ ಸಂಬಂಧಗಳು ಕೈ ತಪ್ಪಿ ಹೋಗುತ್ತವೆ.
ಅದಕ್ಕೆ ನಮ್ಮ ಪೂರ್ವಿಕರು ಅನಾದಿ ಕಾಲದಿಂದಲೂ ವಿವಾಹಕ್ಕೆ ವಧು,ವರರನ್ನು ಹುಡುಕಲು ಹೋಗುವಾಗ ಅಥವಾ ಹುಡುಗ ಹುಡುಗಿಯನ್ನು ನೋಡಲು ಹೋಗುವಾಗ ಅವರ ಹಿಂದೆ ಬೆಲ್ಲವನ್ನು ತೆಗೆದುಕೊಂಡು ಹೋಗುತ್ತಿದ್ದರು. ಹುಡುಗಿಗೆ ಅರಿಶಿನ, ಕುಂಕುಮ , ಹೂವುಗಳು ಇವುಗಳ ಜೊತೆಗೆ ತಪ್ಪದೆ ಬೆಲ್ಲವನ್ನು ಜೊತೆಗೆ ಇಟ್ಟುಕೊಂಡು ಹೋಗುತ್ತಿದ್ದರು.ಈ ಬೆಲ್ಲಕ್ಕೆ ಎರಡು ಮನಸ್ಸುಗಳನ್ನು ಗಟ್ಟಿಗೊಳಿಸುವ ಶಕ್ತಿ ಈ ಬೆಲ್ಲಕ್ಕೆ ಇದೆ ಎಂದು ಹಿರಿಯರು ನಂಬುತ್ತಾರೆ .

ಹೀಗೆ ಬೆಲ್ಲವನ್ನು ತೆಗೆದುಕೊಂಡು ಹುಡುಗಿಗೆ ಕುಂಕುಮ ಹಚ್ಚಲು ಕೊಟ್ಟಾಗ ಬಹುಬೇಗ ಸಂಬಂಧಗಳು ಕುದುರುತ್ತವೆ ,ಸಕ್ರಮವಾಗಿ ಎಲ್ಲಾ ಕೆಲಸಗಳು ಸರಾಗವಾಗಿ ನೆಡೆಯುತ್ತವೆ. ಆದ್ದರಿಂದ ಹಿರಿಯರು ಮನೆಯಲ್ಲಿ ಇದ್ದರೆ ತಕ್ಷಣ ಇಂತಹ ವಿಷಯಗಳನ್ನು ತಿಳಿಸುತ್ತಾರೆ. ಈಗಲೂ ಕೂಡ ಸಮಯ ಮೀರಿಲ್ಲ, ನೀವು ಮದುವೆಯನ್ನು ನಿಶ್ಚಯ ಮಾಡಲು ಹೋಗುತ್ತಿದ್ದರೆ. ನೀವು ತೆಗೆದುಕೊಂಡು ಹೋಗುವ ಸಾಮಗ್ರಿಗಳ ಜೊತೆಗೆ ತಪ್ಪದೇ ಬೆಲ್ಲವನ್ನು ಇಟ್ಟುಕೊಳ್ಳಿ,ಆಗ ಮದುವೆಯಾಗುವುದು ಖಂಡಿತವಾಗಿಯೂ ನಿಶ್ಚಿತವಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

ನಮ್ಮಲ್ಲಿ ಜನಪ್ರಿಯ

To Top